Home latest High court: ಶಾಲಾ ಸಮಯದಲ್ಲಿ ಮಹತ್ವದ ಬದಲಾವಣೆ ?! ಹೈಕೋರ್ಟ್ ಹೇಳಿದ್ದೇನು ?!

High court: ಶಾಲಾ ಸಮಯದಲ್ಲಿ ಮಹತ್ವದ ಬದಲಾವಣೆ ?! ಹೈಕೋರ್ಟ್ ಹೇಳಿದ್ದೇನು ?!

High Court

Hindu neighbor gifts plot of land

Hindu neighbour gifts land to Muslim journalist

High court: ರಾಜ್ಯ ರಾಜಧಾನಿ ಬೆಂಗಳೂರಿನ(Bengaluru) ಸದ್ಯದ ಪರಿಸ್ಥಿತಿ ಎಲ್ಲರಿಗೂ ಗೊತ್ತಿದೆ. ಒಂದೆಡೆ ಕಿಕ್ಕಿರಿದ ಜನ, ಮತ್ತೊಂದೆಡೆ ವಾಹನಗಳ ಹೆಚ್ಚಳ, ಎಷ್ಟೇ ಸಮಯ ಕಾದರೂ ಕೊನೆಗೊಳ್ಳದ ಟ್ರಾಫಿಕ್ ಜಾಮ್(Trafic jam) ಜೊತೆಗೆ ಉದ್ಯಾನ ನಗರಿಯಿಂದ ಕಾಂಕ್ರೀಟ್ ನಗರಿಯಾಗಿ ಬದಲಾಗುತ್ತಿರುವ ನಗರ ಎಲ್ಲವೂ ಒಮ್ಮೆ ವಿಪರ್ಯಾಸ ಎನಿಸುತ್ತದೆ. ಅದರಲ್ಲೂ ಟ್ರಾಫಿಕ್ ಸಮಸ್ಯೆಯಂತೂ ಈ ಜನ್ಮದಲ್ಲಿ ಮುಗಿಯದ ಸಮಸ್ಯೆಯಾಗಿದೆ. ಇದೆಲ್ಲವನ್ನೂ ನಗರದ ಮಧ್ಯದಲ್ಲಿ ಕೂತು ಕೂಲಂಕುಷವಾಗಿ ಪರಿಶೀಲಿಸುತ್ತಿರುವ ಕೋರ್ಟ್(High court) ಈ ಟ್ರಾಫಿಕ್ ಸಮಸ್ಯೆಗೆ ಬಹುದೊಡ್ಡ ಪರಿಹಾರ ಹುಡುಕಲು ಸರ್ಕಾರಕ್ಕೆ ಸಲಹೆ ನೀಡಿದೆ.

ಹೌದು, ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಭಾರಿ ಪ್ರಮಾಣದಲ್ಲಿ ಟ್ರಾಪಿಕ್‌ ಸಮಸ್ಯೆ ಉಂಟಾಗುತ್ತಿದ್ದು ಉದ್ಯನನಗರಿ ವಾಸಿಗಳಿಗಿದು ಬಜೆಹರಿಯದ ಸಮಸ್ಯೆಯಾಗಿದೆ. ಅಲ್ಲದೆ ಎಲ್ಲಾ ಸಮಸ್ಯೆಗಳಿಗೂ ಇದೇ ಕಾರಣವಾಗಿದೆ. ಹೀಗಾಗಿ ಈ ಟ್ರಾಫಿಕ್‌ ದಟ್ಟಣೆ ತಗ್ಗಿಸಲು ಶಾಲಾ ಸಮಯ, ವಾಣಿಜ್ಯ ಕೆಲಸದ ಸಮಯವನ್ನು ಬದಲಾವಣೆ ಮಾಡುವ ಬಗ್ಗೆ ಮರು ಪರಿಶೀಲಿಸುವಂತೆ ಕರ್ನಾಟಕ ಸರ್ಕಾರಕ್ಕೆ ಹೈಕೋರ್ಟ್ ಸಲಹೆ ನೀಡಿದೆ.

ಅಂದಹಾಗೆ ಸರ್ಕಾರೇತರ ಸಂಸ್ಥೆಯಾದ (ಎನ್‌ಜಿಒ) ಸಮರ್ಪಣ ಸಾಮಾಜಿಕ-ಸಾಂಸ್ಕೃತಿಕ ಸಂಸ್ಥೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ. ವರಾಳೆ, ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ಪೀಠ ೀ ಕುರಿತಾಗಿ ಸೂಚನೆ ನೀಡಿದೆ. ಮೆಟ್ರೋ ಮಾರ್ಗ ವಿಸ್ತರಣೆ, ಶಾಲೆ, ಕೈಗಾರಿಕೆಗಳ ಕಾರ್ಯನಿರ್ವಹಣೆ ಸಮಯ ಬದಲಾವಣೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚನೆ ನೀಡಲಾಗಿದೆ. ಆರು ವಾರಗಳಲ್ಲಿ ಪ್ರಗತಿ ವರದಿ, ಅನುಪಾಲನಾ ವರದಿ ಸಲ್ಲಿಸಲು ತಿಳಿಸಲಾಗಿದೆ.

ಇಷ್ಟೇ ಅಲ್ಲದೆ ಕಾರ್ಮಿಕ ಕಾರ್ಯದರ್ಶಿಯು ಕೈಗಾರಿಕೆಗಳು, ಕಾರ್ಖಾನೆಗಳು ಅಥವಾ ಅಲೈಡ್ ಯೂನಿಟ್‌ಗಳು, ಕೈಗಾರಿಕಾ ಸಂಸ್ಥೆ, ಚೇಂಬರ್ ಆಫ್ ಕಾಮರ್ಸ್‌ನ ಪ್ರತಿನಿಧಿಗಳಂತಹ ಮಧ್ಯಸ್ಥಗಾರರ ಸಭೆಯನ್ನು ಕರೆಯಬಹುದು. ಇವುಗಳ ಕೆಲಸದ ಸಮಯವನ್ನು ಮರುಪರಿಶೀಲಿಸುವ ಬಗ್ಗೆ ಚರ್ಚಿಸಬಹುದು. ಕೈಗಾರಿಕಾ ಘಟಕಗಳು, ಕಾರ್ಖಾನೆಗಳು, ವಾಣಿಜ್ಯ ಮನೆಗಳು, ಕಂಪನಿಗಳು ಇತ್ಯಾದಿಗಳೊಂದಿಗೂ ಈ ಬಗ್ಗೆ ಚರ್ಚೆ ಮಾಡಬಹುದು ಎಂದು ಕೋರ್ಟ್ ಹೇಳಿದೆ.

ಇದನ್ನೂ ಓದಿ: JDS Party: BJP ಜೊತೆ ಮೈತ್ರಿ ಬೆನ್ನಲ್ಲೇ JDS ಹೆಸರು ಬದಲಾವಣೆ ?! ಏನಿದು ಹೊಸ ಸಮಾಚಾರ ?!