Kerala: ಮತ್ತೆ ಕಾಡಲು ಶುರುವಾದ ‘ನಿಫಾ’ ವೈರಸ್- ಜ್ವರಕ್ಕೆ ಎರಡು ಮಂದಿ ಬಲಿ !!
Kerala news Nipah alert issued in Kerala's Kozhikode after 2 'unnatural' deaths
Kerala: ಇಡೀ ದೇಶವನ್ನೇ ತಲ್ಲಣಗೊಳಿಸುತ್ತಿರುವ ನಿಫಾ ಸೋಂಕು ಕೇರಳದಲ್ಲಿ(Kerala)ತನ್ನ ಅಟ್ಟಹಾಸ ಮುಂದುವರೆಸಿದೆ. 4 ವರ್ಷಗಳ ನಂತರ ಇದೀಗ ಕೇರಳದಲ್ಲಿ ಮತ್ತೆ ನಿಫಾ ವೈರಸ್‌ನ(Nipah virus) ಆತಂಕ ಎದುರಾಗಿದ್ದು, ಇಲ್ಲಿನ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಇಬ್ಬರು ವ್ಯಕ್ತಿಗಳು ಜ್ವರದಿಂದ ನಿಧನರಾಗಿದ್ದಾರೆ.
ಪಿಟಿಐ ವರದಿಯ ಅನುಸಾರ, ಈ ಘಟನೆ ಕೇರಳ ಆರೋಗ್ಯ ಇಲಾಖೆಯ ಗಮನಕ್ಕೆ ಬರುತ್ತಿದ್ದ ಹಿನ್ನೆಲೆ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಸೋಮವಾರ ಪರಿಸ್ಥಿತಿಯನ್ನು ನಿರ್ಣಯ ಕೈಗೊಳ್ಳಲು ಉನ್ನತ ಮಟ್ಟದ ಸಭೆ ನಡೆಸಿದೆ. ಕೇರಳ ಆರೋಗ್ಯ ಇಲಾಖೆ “ಅಸ್ವಾಭಾವಿಕ” ಎಂದು ಬಳಿಕ ಜಿಲ್ಲೆಯಲ್ಲಿ ಆರೋಗ್ಯ ಎಚ್ಚರಿಕೆ ಕರೆಗಂಟೆ ನೀಡಿದೆ. ಮೃತ ವ್ಯಕ್ತಿಗಳಲ್ಲಿ ಒಬ್ಬರ ಸಂಬಂಧಿ ತೀವ್ರ ನಿಗಾ ಘಟಕಕ್ಕೆ (ICU) ದಾಖಲು ಮಾಡಿರುವ ಕುರಿತು ವರದಿಯಾಗಿದೆ. ಇದು ಬಾವಲಿ ಜ್ವರ ಇಲ್ಲವೇ ನಿಫಾ ವೈರಸ್ ಇರುವ ವೈದ್ಯರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದ್ದು, ಹೀಗಾಗಿ, ಹೆಚ್ಚಿನ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ.
ಇದನ್ನೂ ಓದಿ: Kerala: ಕೊನೆಗೂ RSS ಗೆ ಶಾಕ್ ಕೊಟ್ಟ ಹೈಕೋರ್ಟ್ !! ಇನ್ಮುಂದೆ ಇದಕ್ಕೆ ಅವಕಾಶವಿಲ್ಲ ಎಂದು ಹೊರಬಿತ್ತು ತೀರ್ಪು