Gruha Lakshmi Scheme: ʼಗೃಹಲಕ್ಷ್ಮಿʼ ಯೋಜನೆಯ ಹಣ ಯಜಮಾನಿಯರಿಗೆ ಇನ್ನೂ ದೊರಕಿಲ್ಲವೇ? ಹಾಗಾದರೆ ತುರ್ತಾಗಿ ಈ ಒಂದು ಕೆಲಸ ಮಾಡಿ!! ಇಲ್ಲದಿದ್ದರೆ ಖಾತೆಗೆ ಸೇರಲ್ಲ ಹಣ!!!

Karnataka news Congress guarantee Gruha Lakshmi scheme update gruha Lakshmi yojana money update

Gruha Lakshmi Scheme: ರಾಜ್ಯ ಸರಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಗೆ (Gruha Lakshmi Scheme) ಚಾಲನೆ ದೊರಕಿದ್ದು, ಫಲಾನುಭವಿಗಳ ಖಾತೆಗೆ ರೂ.2000 ಹಣ ವರ್ಗಾವಣೆ ಮಾಡಲಾಗಿದೆ. ಈಗಾಗಲೇ 44.52 ಲಕ್ಷ ಫಲಾನುಭವಿಗಳ ಖಾತೆಗೆ ಹಣ ಜಮಾ ಆಗಿದೆ. ಆದರೆ ಇಲ್ಲೊಂದು ಸಮಸ್ಯೆ ತಲೆದೋರಿದೆ. ಅದೇನೆಂದರೆ ಕೆಲವರ ಆಧಾರ್‌ಕಾರ್ಡ್‌ಗೆ ಬ್ಯಾಂಕ್‌ ಖಾತೆ ಲಿಂಕ್‌ ಆಗದಿರುವ ಖಾತೆಗಳಿಗೆ ಇನ್ನೂ ಕೂಡಾ 2000 ರೂಪಾಯಿ ಜಮಾ ಆಗಿಲ್ಲ. ಕೂಡಲೇ ಬ್ಯಾಂಕ್‌ ಖಾತೆಗೆ ಆಧಾರ್‌ ಲಿಂಕ್‌ ಮಾಡಿಸುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ತಿಳಿಸಿದೆ.

ಹಾಗಾಗಿ ಯಾರಿಗೆಲ್ಲ ಈ ಸಮಸ್ಯೆ ತಲೆದೋರಿದೆಯೋ ಯಾವುದೇ ಸೇವಾಕೇಂದ್ರ ಅಥವಾ ನ್ಯಾಯಬೆಲೆ ಅಂಗಡಿಗಳಿಗೆ ಹೋಗಿ ದಾಖಲೆಯನ್ನು ಕೊಟ್ಟು ನಿಮ್ಮ ರೇಷನ್‌ ಕಾರ್ಡ್‌ ತಿದ್ದುಪಡಿ ಮಾಡಲು ಹೇಳಲಾಗಿದೆ.

ನಿಮ್ಮ ರೇಷನ್‌ ಕಾರ್ಡ್‌ಗೆ ಕೆವೈಸಿ ಅಪ್ಡೇಟ್‌ ಆಗಿದೆಯೋ ಇಲ್ಲವೋ ಎಂಬುವುದನ್ನು ಮೊದಲು ತಿಳಿದುಕೊಳ್ಳಿ. ಆಗದೇ ಇದ್ದಲ್ಲಿ ಕೂಡಲೇ ನಿಮಗತ್ತಿರ ಇರುವ ನ್ಯಾಯಬೆಲೆ ಅಂಗಡಿಗೆ ಹೋಗಿ ಅಲ್ಲಿ ಕೆವೈಸಿ ಅಪ್ಡೇಟ್‌ ಮಾಡಿಕೊಳ್ಳಿ. ರೇಷನ್‌ ಕಾರ್ಡ್‌, ಆಧಾರ್‌ ಕಾರ್ಡ್‌, ಬ್ಯಾಂಕ್‌ ಅಕೌಂಟ್‌ ನಲ್ಲಿರುವ ಮಾಹಿತಿ ಹೊಂದಾಣಿಕೆ ಆಗಿದೆಯೇ ಎಂಬುವುದನ್ನು ಮೊದಲು ದೃಢಪಡಿಸಿಕೊಳ್ಳಿ. ಇಲ್ಲವಾದಲ್ಲಿ ತಿದ್ದುಪಡಿ ಮಾಡಬೇಕು.

ಇವನ್ನೆಲ್ಲ ಮಾಡಿದ ನಂತರ ಆಧಾರ್‌ ಕಾರ್ಡ್‌ ಲಿಂಕ್‌, ಎನ್‌ಪಿಸಿಐ ಮ್ಯಾಪಿಂಗ್‌ ಮಾಡಿಸಿದರೆ ಮುಂದಿನ ತಿಂಗಳಿನಿಂದ ನಿಮಗೆ 2000ರೂ. ದೊರಕುತ್ತದೆ.

ಇದನ್ನೂ ಓದಿ: Crime News: ಬಿರಿಯಾನಿಗೆ ರಾಯಿತಾ ಕೇಳಿದ್ದೇ ತಪ್ಪಾಯ್ತು…ಹೊಡೆದು ಕೊಂದೇ ಬಿಟ್ಟ ಹೋಟೆಲ್‌ ಸಿಬ್ಬಂದಿ!!!

Leave A Reply

Your email address will not be published.