Mangalore Crime News: ಮಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಗೋಮಾಂಸ ಸಾಗಾಟ! ಮಾಂಸ ಸಹಿತ, ಆರೋಪಿಯ ಹಿಡಿದು, ಪೊಲೀಸರಿಗೊಪ್ಪಿಸಿದ ಬಜರಂಗದಳ ಕಾರ್ಯಕರ್ತರು!!

Share the Article

Mangalore Crime News: ಬೆಳ್ಳಂಬೆಳಗ್ಗೆ ಗೋಮಾಂಸ ಸಾಗಣೆ ಮಾಡುತ್ತಿದ್ದವರನ್ನು ಬಜರಂಗದಳ ಕಾರ್ಯಕರ್ತರು ಪತ್ತೆ ಹಚ್ಚಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಘಟನೆಯೊಂದು ಮಂಗಳೂರಿನಲ್ಲಿ ನಡೆದಿದೆ.

ರಿಕ್ಷಾವೊಂದರಲ್ಲಿ ಗೋಮಾಂಸವನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸಂದರ್ಭದಲ್ಲಿ ಮಾಹಿತಿ ದೊರಕಿದ್ದು, ಆರೋಪಿ ಸಹಿತ ಗೋಮಾಂಸವನ್ನು ಉರ್ವ ಠಾಣಾ ಪೊಲೀಸರಿಗೊಪ್ಪಿಸಿದ ಘಟನೆ ಉರ್ವಸ್ಟೋರಿನಲ್ಲಿ ನಡೆದಿದೆ. ಐದು ಗೋವುಗಳ 2.50 ಕ್ವಿಂಟಾಲ್‌ ಮಾಂಸವನ್ನು ರಿಕ್ಷಾದಲ್ಲಿ ಸಾಗಣೆ ಮಾಡಲಾಗುತ್ತಿತ್ತು.

ಜೋಕಟ್ಟೆಯಿಂದ ರಿಕ್ಷಾದಲ್ಲಿ ನಗರದ ಬೀಫ್‌ ಸ್ಟಾಲ್‌ಗಳಿಗೆ ಬೆಳ್ಳಂಬೆಳಗ್ಗೆ ಗೋಮಾಂಸ ಸಾಗಾಟವಾಗುತ್ತಿತ್ತು. ಇದನ್ನು ತಿಳಿದ ಬಜರಂಗದಳದ ಕಾರ್ಯಕರ್ತರು 6 ಗಂಟೆಯ ವೇಳೆ ಚಿಲಿಂಬಿಯಲ್ಲಿ ರಿಕ್ಷಾವನ್ನು ತಡೆದಿದ್ದಾರೆ. ನಂತರ ಆರೋಪಿ ಸಹಿತ ಸೊತ್ತನ್ನು ಪೊಲೀಸರಿಗೊಪ್ಪಿಸಿದ್ದಾರೆ.

ಎರಡು ತಿಂಗಳಿನಿಂದ ಮಾಂಸವನ್ನು ಈ ರೀತಿ ಸಾಗಾಟ ಮಾಡಲಾಗುತ್ತಿದೆ ಎಂದು ವೀಡಿಯೋವೊಂದಲ್ಲಿ ಬಜರಂಗದಳ ಕಾರ್ಯಕರ್ತರು ಹೇಳುವುದು ದಾಖಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿ ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ.

 

Leave A Reply