Mangalore: ಈ ಭಾಗದ ಜನರಿಗೆ ಗಣೇಶ ಹಬ್ಬದ ರಜೆಯಲ್ಲಿ ಬದಲಾವಣೆ ?! ಹಾಗಿದ್ರೆ ಚತುರ್ಥಿಯ ಸಾರ್ವತ್ರಿಕ ರಜೆ ಯಾವಾಗ ಗೊತ್ತಾ?

Dakshina Kannada news there is no universal holiday for Ganesh chaturthi on September 19

Ganesh chaturthi Holiday: ಕರಾವಳಿಗರೇ ಗಮನಿಸಿ, ಗಣೇಶ ಚತುರ್ಥಿ ಹಬ್ಬದ ರಜೆಯ ಕುರಿತ ಮುಖ್ಯ ಮಾಹಿತಿ ಇಲ್ಲಿದೆ. ಈ ಬಾರಿ ಶ್ರೀ ಗಣೇಶ ಚತುರ್ಥಿ ಹಬ್ಬದ ರಜೆಯಲ್ಲಿ ಬದಲಾವಣೆಯಾಗಿದ್ದು, ಸೆಪ್ಟೆಂಬರ್.19ರಂದು ಸಾರ್ವತ್ರಿಕ ರಜೆಯಿರುವುದಿಲ್ಲ ಎನ್ನಲಾಗಿದೆ. ಇದರ ಬದಲಿಗೆ ಒಂದು ದಿನ ಮುಂಚಿತವಾಗಿ ರಜೆಯಿರಲಿದೆ. ಸೆ. 19ರಂದು ಗಣೇಶ ಹಬ್ಬದ (Ganesh chaturthi Holiday)ರಜೆ ಸೆಪ್ಟೆಂಬರ್.18ರಂದು ಸರಕಾರದ ಕ್ಯಾಲೆಂಡರ್‌ನಲ್ಲಿ ಉಲ್ಲೇಖ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ಕರ್ತವ್ಯದ ದಿನದಲ್ಲೇ ಹಬ್ಬ ಆಚರಿಸುವ ಪರಿಸ್ಥಿತಿ ಎದುರಾಗಿದೆ.

ರಾಜ್ಯ ಸರಕಾರ ಪ್ರಕಟಿಸಿರುವ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿ ಸೆ.18ರಂದು ವರಸಿದ್ಧಿವಿನಾಯಕ ವ್ರತದ ರಜೆ ಎಂದಿರುವ ಹಿನ್ನೆಲೆ ಈ ದಿನ ರಜೆ ಘೋಷಣೆ ಮಾಡಲಾಗಿದೆ. ಪಂಚಾಂಗದ ಪ್ರಕಾರ ಸೆ.18ರಂದು ಗೌರಿ ತದಿಗೆ ಮತ್ತು ಗಣೇಶ ಚತುರ್ಥಿ ಸೆ.19ರಂದು ಎಂದಿದ್ದು, ಕರಾವಳಿ ಭಾಗದಲ್ಲಿಯೂ ಗಣೇಶ ಹಬ್ಬ ಸೆ.19ರಂದು ನಡೆಯುವ ಹಿನ್ನೆಲೆ ರಜೆಯ ವಿಚಾರ ಇದೀಗ ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ. ದ.ಕ. ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ(School Holiday)ವಿದ್ಯಾರ್ಥಿಗಳ ಪೋಷಕರು ಈಗಾಗಲೇ ಶಾಲಾಡಳಿತಕ್ಕೆ ಕರೆ ಮಾಡಿ ಗಣೇಶ ಚತುರ್ಥಿ ರಜೆ ಸೆ.19ರಂದೇ ನೀಡುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ. ಆದರೆ “ಸಾರ್ವತ್ರಿಕ ರಜೆ ಬದಲಾವಣೆ ಬಗ್ಗೆ ಸರಕಾರವೇ ಅಂತಿಮ ನಿರ್ಣಯ ಕೈಗೊಳ್ಳಬೇಕಾಗುತ್ತದೆ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಈ ಕುರಿತಾಗಿ ಶಾಸಕ ವೇದವ್ಯಾಸ ಕಾಮತ್‌’ ಅವರು ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದು, “ಕರಾವಳಿಯಲ್ಲಿ ಸೆ.19ಕ್ಕೆ ಗಣೇಶ ಹಬ್ಬ ಆಚರಣೆ ಮಾಡಲಾಗುತ್ತದೆ. ಆದರೆ ರಜೆ ಸೆ.18ಕ್ಕೆ ನೀಡಿದರೆ ಕರಾವಳಿ ಭಾಗದಲ್ಲಿ ಹಬ್ಬ ಆಚರಣೆಗೆ ಸಮಸ್ಯೆ ಉಂಟಾಗುತ್ತದೆ. ಕರಾವಳಿಗೆ ಪ್ರತ್ಯೇಕವಾಗಿ ಗಣೇಶ ಹಬ್ಬದ ಹಿನ್ನೆಲೆ ಸೆ.19ರಂದು ರಜೆ ನೀಡಲು ಸರಕಾರವು ಜಿಲ್ಲಾಡಳಿತಕ್ಕೆ ಸೂಚಿಸಬೇಕು’ ಎಂದು ಆಗ್ರಹ ಮಾಡಿದ್ದು, ಕರಾವಳಿಯ ಪ್ರಮುಖರಲ್ಲಿ ರಜೆಯ ಬಗ್ಗೆ ಮಾಹಿತಿ ಪಡೆದು ರಜೆ ಘೋಷಣೆ ಮಾಡಬೇಕು ಎಂದು ಸಚಿವರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Gruha Lakshmi Yojana: ಯಜಮಾನಿಯರೇ. ಇನ್ನೂ ಗೃಹಲಕ್ಷ್ಮೀ ದುಡ್ಡು ಬಂದಿಲ್ವಾ? ಹಾಗಿದ್ರೆ ಲಕ್ಷ್ಮೀ ಹೆಬ್ಬಾಳ್ಕರ್ ಕೊಟ್ರು ನೋಡಿ ಸಖತ್ ಗುಡ್ ನ್ಯೂಸ್

Leave A Reply

Your email address will not be published.