Electricity Bill: 5 ಸಾವಿರ ಬರುತ್ತಿದ್ದ ಕರೆಂಟ್ ಬಿಲ್ ಈಗ 10 ಲಕ್ಷವಂತೆ! ಬೆರಗಾದ ಗ್ರಾಹಕನಿಂದ ಸರ್ಕಾರಕ್ಕೆ ವಿಚಿತ್ರ ಪ್ರಶ್ನೆ
Chikkamagaluru news man got 10 lakh rupees electricity bill man against mescom in Chikkamagaluru
Electricity Bill: ಮೆಸ್ಕಾಂ ಅಧಿಕಾರಿಗಳ ಎಡವಟ್ಟಿಗೆ ಗ್ರಾಹಕ ಕಂಗಾಲಾದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ ನಡೆದಿದೆ. ಹೌದು, ಕಡೂರು ಪಟ್ಟಣದ ಉಳುಕಿನಕಲ್ಲು ಸಮೀಪದ ಡಾಗಾ ಕಾಂಪ್ಲೆಕ್ಸ್ನಲ್ಲಿನ ಮೋಹಿತ್ ಏಜೆನ್ಸಿಗೆ ಆಗಸ್ಟ್ ತಿಂಗಳ ವಿದ್ಯುತ್ ಬಿಲ್ ( Electricity Bill) 10,26,054 ರೂಪಾಯಿ ಬಂದಿದೆ.
ಕಡೂರು ಪಟ್ಟಣದ ಮೋಹಿತ್ ಎಂಬುವವರಿಗೆ ಪ್ರತಿ ತಿಂಗಳು 5 ಸಾವಿರದವರೆಗೆ ವಿದ್ಯುತ್ ಬಿಲ್ ಬರುತ್ತಿತ್ತು(Electricity Bill). ಆದರೆ ಈ ಬಾರಿಯ ಆಗಸ್ಟ್ ತಿಂಗಳ ಬಿಲ್ ಬರೋಬ್ಬರಿ 10 ಲಕ್ಷ ಬಂದಿದೆ. ವಿದ್ಯುತ್ ಬಿಲ್ ನೋಡಿ ಮೋಹಿತ್ ಶಾಕ್ ಆಗಿದ್ದು, ಸದ್ಯ ಈ ಬಗ್ಗೆ ಮೆಸ್ಕಾಂ(Mescom) ಅಧಿಕಾರಿಗಳಿಗೆ ದೂರು ಸಲ್ಲಿಸಲಾಗಿದೆ.
ಮಾಹಿತಿ ಪ್ರಕಾರ, ಪ್ರತಿ ತಿಂಗಳು ವಿದ್ಯುತ್ ಬಿಲ್ ಅಂದಾಜು 4,000 ಸಾವಿರದಿಂದ 4,500 ರೂಗಳು ಮಾತ್ರ ಬರುತ್ತಿತ್ತು. ಆಗಸ್ಟ್ ತಿಂಗಳ ಬಿಲ್ ಏಕಾಏಕಿ 10 ಲಕ್ಷ ಬಂದಿದೆ. ಬಿಲ್ ಅವಧಿ 1/8/2023 ರಿಂದ 1/9/23ರವರೆಗೆ ಎಂದು ನಮೂದಿಸಲಾಗಿದೆ.
ಬಿಲ್ ನಂ.259 ಆಗಿದ್ದು 8,35,737 ಬಿಲ್ ಎಫ್‍ಪಿಪಿಎಸಿ (1.16) ಟ್ಯಾಕ್ಸ್ 0.9% (75,216.33 ರೂಗಳು) ಒಟ್ಟು 10,260,54 ರೂ ಬಿಲ್ ಅನ್ನು ನೀಡಲಾಗಿದೆ. ಈ ಹಿಂದೆ ವಿದ್ಯುತ್ ಬಿಲ್ ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸುತ್ತಾ ಬಂದಿದ್ದೇವೆ. ಯಾವ ತಿಂಗಳು ಕೂಡ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿಲ್ಲ. ಆದರೆ, ಈ ತಿಂಗಳು 10 ಲಕ್ಷ ಬಿಲ್ ನೋಡಿ ಕಡೂರು ಮೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ.
ಸದ್ಯ ಮೆಸ್ಕಾಂ ಅಧಿಕಾರಿಗಳು ಈ ಸಮಸ್ಯೆ ಸರಿ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ. ಆದರೆ ಮೆಸ್ಕಾಂ ಸಿಬ್ಬಂದಿ ಹೇಳಿ 4 ದಿನವಾದರೂ ಈವರೆಗೂ ಯಾವುದೇ ಮಾಹಿತಿ ನೀಡಿಲ್ಲ ಎಂದು ಅಂಗಡಿ ಮಾಲೀಕ ಡಾಗಾ ಮೆಸ್ಕಾಂ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಅದಲ್ಲದೆ ಇದಕ್ಕೆ ಗೃಹಜ್ಯೋತಿ ಯೋಜನೆಯ ಕುಮ್ಮಕ್ಕು ಇದೆಯಾ ಎಂದು ಪ್ರಶ್ನೆ ಮಾಡಿದ್ದಾನೆ.
ಇದನ್ನೂ ಓದಿ: ಮೆಡಿಕಲ್’ಗಳಲ್ಲಿ ಮೆಡಿಸಿನ್ ಕೊಳ್ಳುವವರೇ ಎಚ್ಚರ !! ಈ ಎರಡು ಔಷಧಿಗಳ ಮಾರಾಟದಲ್ಲಿ ನಡೆಯುತ್ತಿದೆ ಭಾರೀ ಗೋಲ್ ಮಾಲ್