Ryugyong hotel: ‘ಐಷಾರಾಮಿ ಹೋಟೆಲ್’ ಗೆ 16 ಸಾವಿರ ಕೋಟಿ ಖರ್ಚು ಮಾಡಿದ್ರಂತೆ! ವಿಶೇಷ ಅಂದ್ರೆ ಕಟ್ಟಿ 25 ವರ್ಷ ಆದ್ರೂ ಒಬ್ಬ ಅತಿಥಿ ಬಂದಿಲ್ಲವಂತೆ !! ಯಾಕೆ ಅಂತೀರಾ?
World news North Korea ryugyong hotel built for 16000 crore rupees but no guest has come till
Ryugyong hotel: ದುಬಾರಿ ಹೋಟೆಲ್ (Hotel) ಅಂದರೆ ಒಂದು ರೀತಿಯಲ್ಲಿ ನಮಗೆ ದೊಡ್ಡ ದೊಡ್ಡ ನಿರೀಕ್ಷೆಗಳು ಇರುತ್ತವೆ. ಅಲ್ಲಿನ ಸರ್ವಿಸ್, ಥೀಮ್, ಸ್ಪೆಷಾಲಿಟಿಗಳನ್ನು ಒಮ್ಮೆ ಆನಂದಿಸಬೇಕು ಎಂದು ಅನಿಸುತ್ತದೆ. ಅದರಲ್ಲೂ ಇತ್ತೀಚೆಗೆ ಹೋಟೆಲ್ ಉದ್ಯಮ ಎನ್ನುವುದು ಟಾಪ್ ಲೆವಲ್ ನಲ್ಲಿ ನಡೆಯುತ್ತಿದೆ. ಆದರೆ ನಾವು ನಿಮಗೆ ದುಬಾರಿಯಾಗಿರುವ, ಮತ್ತು ವಿಚಿತ್ರ ಹೋಟೆಲ್ ಒಂದರ ಬಗ್ಗೆ ಹೇಳುತ್ತಿದ್ದೇವೆ.
ಹೌದು, 16 ಸಾವಿರ ಕೋಟಿ ಖರ್ಚು ಮಾಡಿರುವ ಈ ಹೋಟೆಲ್ ಕಟ್ಟಿ 25 ವರ್ಷಗಳು ಕಳೆದಿವೆಯಂತೆ. ಆದ್ರೆ, ಇಲ್ಲಿಯವರೆಗೆ ಒಬ್ಬ ಅತಿಥಿಯೂ ಇಲ್ಲಿಗೆ ಬಂದಿಲ್ಲ. ಹಾಗಾಗಿ ಈಗ ಸರ್ಕಾರ ಈ ಹೋಟೆಲ್ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದೆ.
ಮಾಹಿತಿ ಪ್ರಕಾರ, Ryugyong ಹೋಟೆಲ್( Ryugyong hotel) ಉತ್ತರ ಕೊರಿಯಾದ ರಾಜಧಾನಿ Pyongyang ನಲ್ಲಿದೆ. ಈ ಹೋಟೆಲ್’ನ್ನ ಸರ್ವಾಧಿಕಾರಿ ಕಿಮ್ ಜಾಂಗ್-ಉನ್ ಅವರ ಮನೆಯಿಂದ ಸುಮಾರು 12 ಮೈಲಿ (19.3 ಕಿಲೋಮೀಟರ್) ದೂರದಲ್ಲಿ ನಿರ್ಮಿಸಲಾಗಿದೆ. ಈ ಹೋಟೆಲ್‌ನ ಎತ್ತರ 1082 ಅಡಿಗಳು ಇದರಲ್ಲಿ 3000 ಕೊಠಡಿಗಳನ್ನ ನಿರ್ಮಿಸಲು ಯೋಜಿಸಲಾಗಿತ್ತು.
ವಿಶೇಷ ಅಂದ್ರೆ 25 ವರ್ಷಗಳ ನಂತರ ಕೂಡ ಈ ಹೋಟೆಲ್ ಖಾಲಿ ಬಿದ್ದಿದೆ. ಈಗ ಈ ಹೋಟೆಲ್’ನ್ನ ‘ಹೋಟೆಲ್ ಆಫ್ ಡೂಮ್’ ಎಂದು ಕರೆಯಲಾಗುತ್ತದೆ. ಮುಖ್ಯವಾಗಿ Ryugyong ಹೋಟೆಲ್ 1987ರಲ್ಲಿ ನಿರ್ಮಾಣವನ್ನ ಪ್ರಾರಂಭಿಸಿತು. ಆಗ 2 ವರ್ಷಗಳ ನಂತರವೇ ಈ ಹೋಟೆಲ್ ತೆರೆಯುವ ಉದ್ದೇಶವಿತ್ತು. ಈ ಹೋಟೆಲ್ ನಿಗದಿತ ಸಮಯದಲ್ಲಿ ಪೂರ್ಣಗೊಂಡಿದ್ದರೆ, ಇದು ವಿಶ್ವದ ಅತಿ ಎತ್ತರದ ಹೋಟೆಲ್ ಆಗುತ್ತಿತ್ತು. ಒಟ್ಟು ಈ ಹೋಟೆಲ್ ನಿರ್ಮಾಣದ ವೆಚ್ಚ £1.6 ಬಿಲಿಯನ್ 16 ಸಾವಿರ ಕೋಟಿ. ಆದರೆ 1992ರಲ್ಲಿ ಈ ಹೊಟೇಲ್‌ನ ನಿರ್ಮಾಣ ಕಾರ್ಯ ನಿಂತುಹೋಯಿತು.
ಸದ್ಯ ಹೋಟೆಲ್‌ನಲ್ಲಿ ಏನೂ ಆಗದೇ ಸುಮ್ಮನೆ ಬಿದ್ದಿರುವುದನ್ನು ನೋಡಿ ಈ ಹೋಟೆಲ್‌ನಲ್ಲಿ ಬಾಹ್ಯ ಗಾಜಿನ ಫಲಕಗಳನ್ನು ಅಳವಡಿಸಲಾಗಿದೆ. ಇದಾದ ಬಳಿಕ 2013ರೊಳಗೆ ಪೂರ್ಣಗೊಳಿಸುವ ಭರವಸೆ ನೀಡಲಾಗಿತ್ತು. ಆದರೆ ಇದು ಇಂದಿಗೂ ಪೂರ್ಣಗೊಂಡಿಲ್ಲ.
ಪ್ರಸ್ತುತ, ಈ ಹೋಟೆಲ್ ಭೂಮಿಯ ಮೇಲಿನ ಅತಿ ಎತ್ತರದ ಖಾಲಿ ಕಟ್ಟಡ ಎಂಬ ದಾಖಲೆಯನ್ನು ಹೊಂದಿದೆ. ಒಟ್ಟಿನಲ್ಲಿ ಈ ಹೋಟೆಲ್ ತ್ರಿಭುಜ ಆಕಾರದಲ್ಲಿ ದೂರದಿಂದ ಕಾಣುತ್ತದೆ. ಆದರೆ ಒಳಗಿನಿಂದ ಸಂಪೂರ್ಣವಾಗಿ ಖಾಲಿಯಾಗಿದೆ ಎನ್ನುವುದು ವಿಚಿತ್ರ . ಇದರೊಂದಿಗೆ ಈ ಕಟ್ಟಡದಲ್ಲಿ ಹಲವು ಸಮಸ್ಯೆಗಳಿವೆ . ಈ ಕಟ್ಟಡದ ನೆಲ ಇಳಿಜಾರಾಗಿದೆಯಂತೆ. ಈ ಹೋಟೆಲ್‌ನ ರಚನೆಯು ತುಕ್ಕು ಹಿಡಿದು ದುರ್ಬಲವಾಗಿದೆ. ಇದನ್ನ ಈಗ ಸರ್ಕಾರ ಪ್ರಚಾರಕ್ಕೆ ಬಳಸಿಕೊಂಡಿದ್ದು, ಅತಿಥಿಗಳ ನಿರೀಕ್ಷೆಯಲ್ಲಿದೆ.