ಹೆಂಡ್ತಿಗೆ ತಾಳಿ ಕಟ್ಟಿದ ಗಂಡ, ಹನಿಮೂನ್ ಹೋಗೋ ಬದ್ಲು ಕರೆತಂದದ್ದೆಲ್ಲಿಗೆ ಗೊತ್ತಾ ?! ಕೇಳಿದ್ರೆ ನೀವೂ ಶಾಕ್ ಆಗ್ತೀರಾ !!

Marriage: ಮದುವೆ ಅಂದ್ರೆ ಮದುಮಗ ಮತ್ತು ವಧುವಿಗೆ ಅಂದು ವಿಶೇಷ ದಿನ. ತಮ್ಮ ಕೌಟುಂಬಿಕ ಜೀವನ ರೂಪಿಸಿಕೊಳ್ಳುವ ವಿಶೇಷ ದಿನ. ಆದ್ರೆ ಯುವತಿಯೊಬ್ಬಳು ಮದುವೆಯ (Marriage) ದಿನ ಜೀವನದ ಎರಡು ಪರೀಕ್ಷೆಗಳನ್ನು ಎದುರಿಸಿದ್ದಾಳೆ.

ಹೌದು, ಆಕೆಯ ಮದುವೆ ದಿನಾಂಕ ಫಿಕ್ಸ್ ಆಗಿದ್ದ ದಿನದಂದು ಆಕೆಯ ಪದವಿಯ ಅಂತಿಮ ಸೆಮಿಸ್ಟರ್‌ನ ಪರೀಕ್ಷೆ ಕೂಡ ಇತ್ತು. ಇವೆರಡರಲ್ಲಿ ಯಾವುದು ಮುಖ್ಯ ಮದುವೆಯ? ಪದವಿಯ ಪರೀಕ್ಷೆಯ? ಎಂದು ನಿರ್ಧರಿಸಲಾಗದೆ ಕೊನೆಗೆ ತನ್ನ ಎನ್ಎಸ್ಎಸ್ ಸಂಘದ ಕಾರ್ಯಕ್ರಮ ಸಂಯೋಜನಾಧಿಕಾರಿ ಬಾಲಕೃಷ್ಣ ಹೆಗಡೆಯವರನ್ನು ಸಲಹೆ ಮೇರೆಗೆ ಈ ನಿರ್ಧಾರ ಮಾಡಿದ್ದಾಳೆ.

ತನ್ನ ವಿದ್ಯಾರ್ಥಿನಿಗೆ ಪರೀಕ್ಷೆ ಮತ್ತು ಮದುವೆ ಎರಡೂ ಕೂಡ ಜೀವನದಲ್ಲಿ ಮುಖ್ಯ ಎಂದು ಮನವರಿಕೆ ಮಾಡಿಕೊಟ್ಟ ಬಾಲಕೃಷ್ಣ ಹೆಗಡೆ ಎರಡನ್ನು ನಿಭಾಯಿಸುವಂತೆ ಸಲಹೆ ನೀಡಿದ್ದಾರೆ. ಇದರಿಂದ ಪ್ರೋತ್ಸಾಹಗೊಂಡ ವಿದ್ಯಾರ್ಥಿ ಮದುವೆಯ ಮನೆಯಲ್ಲಿ ತಾಳಿ ಶಾಸ್ತ್ರ ಮುಗಿಸಿ ಮಧ್ಯದಲ್ಲಿ ಪರೀಕ್ಷೆಗಾಗಿ ಬಿಡುವು ಮಾಡಿಕೊಂಡು, ಶಿವಮೊಗ್ಗದ ಕಮಲ ನೆಹರು ಕಾಲೇಜಿಗೆ ಬಂದು ಪರೀಕ್ಷೆ ಬರೆದು ಎರಡರಲ್ಲೂ ಸೈ ಎನಿಸಿಕೊಂಡಿದ್ದಾಳೆ.

ಪರೀಕ್ಷೆ ಬರೆದ ಬಳಿಕ ಸುಮಾರು ಒಂದು ಗಂಟೆಗೆ ಹೋಗಿ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ವಧು ಸತ್ಯವತಿ. ಹೀಗೆ ಒಂದೇ ದಿನ ಜೀವನದ ಎರಡು ಪರೀಕ್ಷೆಗಳನ್ನು ಸತ್ಯವತಿ ತನ್ನ ಬಾವಿಪತಿಯ ಸಹಕಾರದಿಂದ ಮನೆಯವರ ಪ್ರೋತ್ಸಾಹದಿಂದ ಉಪನ್ಯಾಸಕರ ನೆರವಿನಿಂದ ಬರೆದಿದ್ದಾಳೆ.

ಪ್ರತಿಭಾನ್ವಿತೆ ವಿದ್ಯಾರ್ಥಿನಿ ಸತ್ಯವತಿ ಚೆನ್ನೈನಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿರುವ ಫ್ರಾನ್ಸಿಸ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ, ಅದೇ ದಿನ ಬಿಎ ಪದವಿಯ ಅಂತಿಮ ವರ್ಷದ 8ನೇ ಸೆಮಿಸ್ಟರ್ ಅರ್ಥಶಾಸ್ತ್ರ ವಿಷಯದ ಪರೀಕ್ಷೆ ಬರೆದಿದ್ದು ಇತರರಿಗೆ ಮಾದರಿಯಾಗಿದ್ದಾಳೆ.

Leave A Reply

Your email address will not be published.