Sonu Gowda: ಮಾಲ್ಡೀವ್ಸ್ ನಲ್ಲಿ ಸೋನುಗೌಡ ಬಿಕಿನಿ ಅವತಾರ; ತಂದಿಡ್ತು ಸಂಕಷ್ಟ, ಏನದು?

Sonu Gowda: ಸ್ಯಾಂಡಲ್ವುಡ್ ನಟಿ ಸೋನು ಗೌಡ (Sonu Gowda) ಆರಾಮವಾಗಿ ಮಾಲ್ಡೀವ್ಸ್ನಲ್ಲಿ ವೆಕೇಷನ್ ಎಂಜಾಯ್ ಮಾಡಿ, ಅಲ್ಲಿ ಸೆರೆ ಹಿಡಿದ ಆಕೆಯ ಹಲವಾರು ವಿಡಿಯೋ, ಫೋಟೋಸ್, ಅಪ್ಡೇಟ್ಸ್ಗಳನ್ನು ಅಭಿಮಾನಿಗಳ ಜೊತೆ ಶೇರ್ ಮಾಡಿ ಇದೀಗ ಹೊಸ ಸಂಕಷ್ಟಕ್ಕೆ ಸಿಲುಕಿದ್ದಾಳೆ.
ಈ ಹಿಂದೆ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಕೇಸರಿ ಬಿಕಿನಿ ಧರಿಸಿ ಭಾರೀ ಟೀಕೆ ಎದುರಿಸಿದ್ದರು. ಈಗ ಕನ್ನಡದಲ್ಲಿ ನಟಿ ಸೋನು ಗೌಡ ಇದೇ ಕೇಸರಿ ಬೀಚ್ವೇರ್ನಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಹೌದು, ಟಿಕ್ ಟಾಕ್ ಸ್ಟಾರ್, ಇನ್ಸ್ಟಾಗ್ರಾಂ ರೀಲ್ಸ್ ಕ್ವೀನ್ ಹಾಗೂ ಬಿಗ್ ಬಾಸ್ ಓಟಿಟಿ ಸ್ಪರ್ಧಿ ಸೋನು ಶ್ರೀನಿವಾಸ್ ಗೌಡ ಸಾಮಾಜಿಕ ಜಾಲತಾಣದಲ್ಲಿ ಸಖತ್ ಆಕ್ಟಿವ್ ಆಗಿದ್ದು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿ ಜನರಿಗೆ ಗೂಬೆ ಕೂರಿಸುತ್ತಾಳೆ. ಅಲ್ಲದೇಇತ್ತೀಚೆಗೆ ಮೋಜು ಮಸ್ತಿ ಮಾಡಲು ಮಾಲ್ಡೀವ್ಸ್ ಕಡೆ ಪ್ರಯಾಣ ಮಾಡಿದ್ದು, ಸೋನು ಬಿಕಿನಿ ವಿಡಿಯೋ, ಫೋಟೋ ಗಳನ್ನು ಮನಸೋ ಇಚ್ಛೆ ಶೇರ್ ಮಾಡಿದ್ದಾಳೆ.
ಸದ್ಯ ಸೋನು ಕೆಂಪು ಬಣ್ಣದ ಬಿಕಿನಿ ಧರಿಸಿಕೊಂಡು ಕೇಸರಿ ಬಟ್ಟೆ ಸುತ್ತಿಕೊಂಡು, ಬೋಲ್ಡ್ ಬಟ್ಟೆ ಧರಿಸಿದ ಕಾರಣಕ್ಕೆ ನಟಿಯನ್ನು ಜನ ಟ್ರೊಲ್ ಮಾಡುತ್ತಿದ್ದಾರೆ. ಅಲ್ಲದೇ ಕೇಸರಿ ಬಟ್ಟೆಯನ್ನು ಬಿಕಿನಿಯಾಗಿ ಧರಿಸಿದ್ದೀಯಾ ಎಂದು ಕೇಸರಿಪಡೆಗಳು ಸೋನು ಗೌಡ ವಿರುದ್ಧ ಕಿಡಿಕಾರಿದ್ದಾರೆ. ನಿನ್ನ ವಿಚಿತ್ರ ಅವತಾರಕ್ಕಾಗಿ ಕೇಸರಿ ಬಣ್ಣವನ್ನು ಯಾಕೆ ಅವಮಾನಿಸುತ್ತೀಯಾ ಎಂದು ಕಮೆಂಟ್ ಮಾಡುತ್ತಿದ್ದಾರೆ.
ಸೋನು ಗೌಡ ವೆಕೇಷನ್ ಸ್ಪಾಟ್, ದ್ವೀಪರಾಷ್ಟ್ರ ಮಾಲ್ಡೀವ್ಸ್ಗೆ ಹೋಗಿ ಅಲ್ಲಿ ಆಕರ್ಷಕವಾದ ಡ್ರೆಸ್ ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದೇನೋ ಓಕೆ ಆದ್ರೆ ಕೇಸರಿ ನಾಟ್ ಓಕೆ ಅಂದಿದ್ದಾರೆ. ಆದರೆ ಈ ಟ್ರೋಲ್ಗಳ ಬಗ್ಗೆ ಸೋನು ಗೌಡ ಪ್ರತಿಕ್ರಿಯಿಸಿಲ್ಲ. ಒಟ್ಟಿನಲ್ಲಿ ಸೋನು ಮಳ್ಳಿಯಂತೆ ಮೌನವಾಗಿದ್ದಾಳೆ.