Realince Jio: ಜಿಯೋ ಬಳಕೆದಾರರಿಗೆ ಗುಡ್ ನ್ಯೂಸ್! ಇಲ್ಲಿದೆ ಹೆಚ್ಚು ಡೇಟಾ ಪ್ರಯೋಜನ ನೀಡೋ ಪ್ಲಾನ್

Reliance Jio: ಟೆಲಿಕಾಮ್ ಕಂಪನಿಗಳಲ್ಲಿ ತನ್ನ ಮುನ್ನಡೆ ಕಾಯ್ದುಕೊಂಡು ದೇಶದ ನಂಬರ್‌ ಒನ್‌ ಸಂಸ್ಥೆಯಾಗಿರುವ ರಿಲಯನ್ಸ್‌ ಜಿಯೋ (Reliance Jio)ಹೊಸ ಹೊಸ ಆಫರ್ ಮೂಲಕ ಗ್ರಾಹಕರ ಮನ ಸೆಳೆಯಲು ಸಿದ್ಧವಾಗುತ್ತಿದೆ. ಈ ನಡುವೆ ಎರಡನೇ ದೊಡ್ಡ ಟೆಲಿಕಾಂ ಪೂರೈಕೆದಾರ ಸಂಸ್ಥೆಯಾಗಿರುವ ಏರ್ಟೆಲ್ (Airtel)ಕೂಡ ಜಿದ್ದಿಗೆ ಬಿದ್ದಂತೆ ತಾನು ಕೂಡ ಮುಂಚೂಣಿ ಸಾಧಿಸಲು ಹೊಸ ಆಫರ್ ನೀಡುತ್ತಿದೆ.

ಹೆಚ್ಚು ಡೇಟಾ ಪ್ರಯೋಜನ ನೀಡುವ ಯೋಜನೆಗಳನ್ನು ಪ್ರತಿಯೊಬ್ಬರು ಬಯಸುವುದು ಸಹಜ. ಅದೇ ರೀತಿ, ಜಿಯೋ ಬಳಕೆದಾರರಿಗೆ 3 GB ಡೇಟಾ ಸೌಲಭ್ಯ ಒಳಗೊಂಡ ಪ್ಲ್ಯಾನ್‌ಗಳನ್ನು ನೀಡುತ್ತದೆ. ಹಾಗಿದ್ರೆ,ಅದು ಯಾವುದೆಲ್ಲ ಗೊತ್ತಾ?

# ಜಿಯೋ 219 ರೂ. ರೀಚಾರ್ಜ್‌ ಪ್ಲ್ಯಾನ್
ಜಿಯೋ ಟೆಲಿಕಾಂನ 219ರೂ. ಯೋಜನೆ ಕಡಿಮೆ ಅವಧಿಯ ಪ್ಲ್ಯಾನ್ ಆಗಿದ್ದು, ಇದು 14 ದಿನಗಳ ವ್ಯಾಲಿಡಿಟಿಯನ್ನ ಹೊಂದಿದೆ. ಈ ಅವಧಿಯಲ್ಲಿ ಪ್ರತಿದಿನ 3 GB ಡೇಟಾ ಸೌಲಭ್ಯ ದೊರೆಯಲಿದೆ. ಅದೇ ರೀತಿ, 2GB ಎಕ್ಸ್‌ಟ್ರಾ ಡೇಟಾ ಕೂಡ ದೊರೆಯಲಿದೆ. ಇದರೊಂದಿಗೆ ಅನಿಯಮಿತ ಕರೆ, ಪ್ರತಿದಿನ ಎಸ್‌ಎಮ್‌ಎಸ್(SMS)ಸೌಲಭ್ಯ ದೊರೆಯಲಿದ್ದು, ಕಡಿಮೆ ಅವಧಿಗೆ 44 GB ಡೇಟಾ ಹಾಗೂ ಜಿಯೋ ಆಪ್ಸ್‌ ಕೂಡ ದೊರೆಯುತ್ತವೆ.

# ಜಿಯೋ 399ರೂ. ರೀಚಾರ್ಜ್‌ ಪ್ಲಾನ್
ಜಿಯೋ ಟೆಲಿಕಾಂನ ಈ ಯೋಜನೆಯು ಒಟ್ಟು 28 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ. ಈ ಅವಧಿಯಲ್ಲಿ ಪ್ರತಿದಿನ 3 GB ಡೇಟಾ ಸೌಲಭ್ಯ ಮತ್ತು 2GB ಎಕ್ಸ್‌ಟ್ರಾ ಡೇಟಾ ಸೌಲಭ್ಯ ದೊರೆಯಲಿದೆ. ಇದರ ಜೊತೆಗೆ, ಅನಿಯಮಿತ ಕರೆ, ಪ್ರತಿದಿನ ಎಸ್‌ಎಮ್‌ಎಸ್‌ ಪ್ರಯೋಜನ ಮತ್ತು ಒಟ್ಟಾರೆ ಅವಧಿಗೆ 90 GB ಡೇಟಾ ಹಾಗೂ ಜಿಯೋ ಆಪ್ಸ್‌ ಕೂಡ ಸಿಗಲಿದೆ.

# ಜಿಯೋ 999ರೂ. ರೀಚಾರ್ಜ್‌ ಪ್ಲಾನ್:
ಜಿಯೋ ಟೆಲಿಕಾಂನ 999ರೂ. ಯೋಜನೆ ಮೂಲಕ ಒಟ್ಟು 84 ದಿನಗಳ ವ್ಯಾಲಿಡಿಟಿ ಸೌಲಭ್ಯವನ್ನು ಪಡೆಯಬಹುದು. ಈ ಅವಧಿಯಲ್ಲಿ ಪ್ರತಿದಿನ 3 GB ಡೇಟಾ ಸೌಲಭ್ಯ, ವ್ಯಾಲಿಡಿಟಿ ಅವಧಿಗೆ 252 GB ಡೇಟಾ ಪ್ರಯೋಜನ ಸಿಗಲಿದೆ. ಇದರ ಜೊತೆಗೆ, ಅನಿಯಮಿತ ಕರೆ, ಪ್ರತಿದಿನ ಎಸ್‌ಎಮ್‌ಎಸ್‌ ಸೌಲಭ್ಯ, ಜಿಯೋ ಆಪ್ಸ್‌ ಕೂಡ ದೊರೆಯಲಿದೆ.

# ಜಿಯೋ 1499ರೂ. ರೀಚಾರ್ಜ್‌ ಪ್ಲಾನ್:
ಜಿಯೋ ಟೆಲಿಕಾಂನ 999ರೂ. ಯೋಜನೆಯ ಮೂಲಕ 84 ದಿನಗಳ ವ್ಯಾಲಿಡಿಟಿ ಸೌಲಭ್ಯ ದೊರೆಯಲಿದೆ. ಈ ಅವಧಿಯಲ್ಲಿ ಪ್ರತಿದಿನ 3 GB ಡೇಟಾ ಪ್ರಯೋಜನ,ಅನಿಯಮಿತ ವಾಯಿಸ್‌ ಕರೆ, ಪ್ರತಿದಿನ ಎಸ್‌ಎಮ್‌ಎಸ್‌ ಸೌಲಭ್ಯ ದೊರೆಯಲಿದೆ.ಈ ಯೋಜನೆಯಲ್ಲಿ ನೆಟ್‌ಫ್ಲಿಕ್ಸ್‌ ಚಂದಾದಾರಿಕೆ ಜೊತೆಗೆ ವ್ಯಾಲಿಡಿಟಿ ಅವಧಿಗೆ 252 GB ಡೇಟಾ ಕೂಡ ಲಭ್ಯವಾಗುತ್ತದೆ.

Leave A Reply

Your email address will not be published.