Village of Bachelors: ಅಯ್ಯಯ್ಯೋ.. ಈ ಊರ ಯುವಕರಿಗೆ ಮದುವೆ ಭಾಗ್ಯವೇ ಇಲ್ಲ – ಹಣೆಯಲ್ಲಿ ಹೆಣ್ಣೇ ಬರೆದಿಲ್ಲ ?! ಏನಿದು ವಿಚಿತ್ರ !
Village of bachelors Bihar bachelor village parents reluctant to give daughters in marriage due to poor infrastructure
Village of Bachelors: ಭಾರತದಲ್ಲಿ (India) ಪ್ರತಿಯೊಬ್ಬ ಯುವಕ-ಯುವತಿ ಮದುವೆಯಾಗುತ್ತಾರೆ (Marriage). ಯಾರೋ ಒಂದು, ಎರಡು ಯುವಕರ ವಿವಾಹವಾಗದೇ ಇರಬಹುದು. ಆದರೆ, ಹೆಚ್ಚಿನ ಜನರು ಮದುವೆಯಾಗುತ್ತಾರೆ. ಅಂದಹಾಗೆ, ನಿಮಗೆ ಒಂದು ಅಚ್ಚರಿ ಹಾಗೂ ಆಸಕ್ತಿಕರ ವಿಷಯ ಇಲ್ಲಿದೆ. ಏನಪ್ಪಾ ಅಂದ್ರೆ, ಈ ಗ್ರಾಮದಲ್ಲಿ ಯುವಕರು ಮದುವೆ ಆಗೋದಿಲ್ಲ. ಇದು ಅವಿವಾಹಿತರ ಗ್ರಾಮ ! ಯಾವುದಾ ಗ್ರಾಮ? ಯಾಕೆ ಮದುವೆಯಾಗಲ್ಲ? ಬನ್ನಿ ಈ ಲೇಖನದ ಮೂಲಕ ಮಾಹಿತಿ ತಿಳಿಯೋಣ.
ಈ ಹಳ್ಳಿಯ ಹೆಸರು ‘ಬರ್ವಾನ್ ಕಲಾ’ (Barwan Kala) ಎಂದಾಗಿದೆ. ‘ಬರ್ವಾನ್ ಕಲಾ’ವನ್ನು ಅವಿವಾಹಿತರ ಗ್ರಾಮ (Village of Bachelors) ಎಂದೂ ಕರೆಯುತ್ತಾರೆ. ಈ ಗ್ರಾಮ
ಪಾಟ್ನಾದಿಂದ 300 ಕಿ.ಮೀ ದೂರದಲ್ಲಿದೆ. ಈ ಹಳ್ಳಿಯಲ್ಲಿ, ಹಲವು ವರ್ಷಗಳಿಂದ ಯಾವುದೇ ಹುಡುಗನಿಗೆ ಮದುವೆಯಾಗಿಲ್ಲ. ಯಾಕೆ ಗೊತ್ತಾ?
ಈ ಹಳ್ಳಿಯ ಹುಡುಗರು ಮದುವೆಯಾಗದಿರಲು ಹಲವು ವಿಭಿನ್ನ ಕಾರಣಗಳಿವೆ. ಈ ಗ್ರಾಮ ತುಂಬಾ ಹಿಂದುಳಿದ ಗ್ರಾಮವಾಗಿದೆ. ಈ ಗ್ರಾಮದಲ್ಲಿ ಸರಿಯಾದ ರಸ್ತೆ ಸೌಲಭ್ಯ ಇಲ್ಲ. ನೀರಿನ ಸಮಸ್ಯೆ. ಅಷ್ಟೇ ಅಲ್ಲ ಈ ಹಳ್ಳಿಯ ಶಾಲೆಗಳು ಮತ್ತು ಶಿಕ್ಷಣದ ಸ್ಥಿತಿಯೂ ಚಿಂತಾಜನಕವಾಗಿದೆ. ಹಾಗಾಗಿ ಯಾರೂ ಇಲ್ಲಿನ ಯುವಕರಿಗೆ ಹೆಣ್ಣು ಕೊಡುತ್ತಿಲ್ಲ. ಪೋಷಕರು ತಮ್ಮ ಮಗಳನ್ನು ಇಲ್ಲಿಗೆ ಮದುವೆ ಮಾಡಿ ಕೊಡಲು ಭಯಪಡ್ತಾರೆ, ಹಿಂಜರಿಯುತ್ತಾರೆ.
ಸುಮಾರು 50 ವರ್ಷಗಳಿಂದ ಈ ಗ್ರಾಮದಲ್ಲಿ ಯಾವುದೇ ಮದುವೆ ನಡೆದಿರಲಿಲ್ಲ. ಆದರೆ, 2017ರಲ್ಲಿ ಇಲ್ಲಿ ಒಬ್ಬ ಹುಡುಗನಿಗೆ ಮದುವೆ ಆಗಿತ್ತು ಎನ್ನಲಾಗಿದೆ. ಬಹಳ ವರ್ಷಗಳ ನಂತರ ಇಲ್ಲಿ ಮೊದಲ ಮದುವೆ ನಡೆದ ಕಾರಣ ವರನ ಸ್ವಾಗತವನ್ನು ಭಾರಿ ಅದ್ಧೂರಿಯಾಗಿ ನಡೆಸಲಾಗಿತ್ತು. ಗ್ರಾಮಸ್ಥರು ಗುಡ್ಡ-ಕಾಡು ಕಡಿದು 6 ಕಿ.ಮೀ ರಸ್ತೆ ಮಾಡಿ, ಮದುವೆಗೆ ತಯಾರಿ ನಡೆಸಿದ್ದರು ಎಂದು ಹೇಳಲಾಗಿದೆ. 2017ರ ನಂತರ ಇಲ್ಲಿ ಯಾವುದೇ ಮದುವೆ ನಡೆದಿಲ್ಲ.
ಗ್ರಾಮದಲ್ಲಿ ಅವ್ಯವಸ್ಥೆಯಿಂದಾಗಿ ಯಾವುದೇ ಹುಡುಗಿ ಮದುವೆಯಾದ ನಂತರ ಇಲ್ಲಿಗೆ ಬರುವುದಿಲ್ಲ. ಇಲ್ಲಿನ ಯುವಕ ಮದುವೆಯಾದರೆ ಹುಡುಗ ಮದುವೆಗೆ ಮುನ್ನವೇ ಗ್ರಾಮವನ್ನು ತೊರೆಯಬೇಕು. ಯಾಕೆಂದ್ರೆ ಈ ಗ್ರಾಮದಲ್ಲಿ ಮದುವೆಗೆ ಅವಶ್ಯವಿರುವ ಸೌಲಭ್ಯವಿಲ್ಲ.
ಇದನ್ನೂ ಓದಿ: Intresting News: ಹುಡ್ಗೀರು ನಿಮ್ಗೆ ಹೀಗೆಲ್ಲಾ ಟೆಕ್ಸ್ಟ್ ಮಾಡ್ತಾರಾ ?! ಹಾಗಿದ್ರೆ ನಿಮ್ಮೇಲೆ ಲವ್ ಆಗಿರೋದು ಪಕ್ಕಾ ! ಈಗಲೇ ಕನ್ಫರ್ಮ್ ಮಾಡ್ಕೊಳ್ಳಿ !