Ex Minister Govind Karajol : ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ಬಗ್ಗೆ ಸುಳಿವು ಕೊಟ್ಟ ಬಿಜೆಪಿಯ ಪ್ರಬಲ ನಾಯಕ- ಭಾರೀ ಕುತೂಹಲ ಕೆರಳಿಸಿದ ಹೇಳಿಕೆ !

Share the Article

Ex Minister Govind Karajol : ಕಾಂಗ್ರೆಸ್ (congress) ಸರ್ಕಾರ ಈಗಾಗಲೇ ಐದು ಗ್ಯಾರಂಟಿ ಘೋಷಿಸಿದಂತೆ ಜಾರಿಗೆ ತಂದಿದೆ. ಈ ಮೂಲಕ ಜನತೆಗೆ ಸಿಹಿಸುದ್ದಿ ನೀಡಿದೆ. ಇದೀಗ ಬಿಜೆಪಿಯ (bjp) ಪ್ರಬಲ ನಾಯಕರೊಬ್ಬರು ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಸದ್ಯ ಇವರ ಹೇಳಿಕೆ ಭಾರೀ ಕುತೂಹಲ ಕೆರಳಿಸಿದೆ.

ನಗರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಗೋವಿಂದ ಕಾರಜೋಳ (Ex Minister Govind Karajol) ಅವರು ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ರಾಜ್ಯದ ನಾಲ್ಕು ಕಡೆ ಥರ್ಮಲ್‌ ಪವರ್ ಫ್ಲಾಂಟ್ ಇವೆ. ಕೇಂದ್ರ ಸರ್ಕಾರದ ಪವರ್ ಪ್ರಾಜೆಕ್ಟ್ ಕೂಡ ಇದೆ.

31 ಸಾವಿರ ಮೆಗಾವ್ಯಾಟ್ ವಿದ್ಯುತ್ ರಾಜ್ಯಕ್ಕೆ ಸಿಗುತ್ತಿದೆ. ರಾಜ್ಯಕ್ಕಾಗುವಷ್ಟು 15 ಸಾವಿರ ಮೆಗಾವ್ಯಾಟ್ ವಿದ್ಯುತ್‌ ಸದ್ಭಳಕೆ ಮಾಡಿಕೊಳ್ಳದ ರಾಜ್ಯ ಸರ್ಕಾರ ಲೋಡ್ ಶೆಡ್ಡಿಂಗ್ ಮಾಡುತ್ತಿದೆ. ಲೋಡ್ ಶೆಡ್ಡಿಂಗ್ ಆಗುತ್ತಿರುವುದನ್ನು ನೋಡಿದ್ರೆ ಕಾಂಗ್ರೆಸ್‌ ಸಚಿವರು ಗಾಢ ನಿದ್ದೆಗೆ ಜಾರಿದ್ದಾರೆ ಎಂದೆನಿಸುತ್ತದೆ. ಕಾಂಗ್ರೆಸ್ ಸರ್ಕಾರದ ಆರನೇ ಗ್ಯಾರಂಟಿ ಯಾವುದು ಗೊತ್ತಾ? ರಾಜ್ಯವನ್ನು ಕತ್ತಲೆಯಲ್ಲಿಡುವುದನ್ನೇ ಆರನೇ ಗ್ಯಾರಂಟಿ ಯೋಜನೆ ಎಂದು ಟೀಕಿಸಿದರು.

ಹೌದು, ಸಿದ್ದರಾಮಯ್ಯ ಸರ್ಕಾರ ಅಧಿಕಾರಕ್ಕೆ ಬಂದ ಮೂರುವರೆ ತಿಂಗಳಲ್ಲೇ ರಾಜ್ಯದಲ್ಲಿ ಆಡಳಿತ ಯಂತ್ರ ಕುಸಿದಿದೆ. ಕಾಂಗ್ರೆಸ್‌ ನ ಸಚಿವರು-ಶಾಸಕರು ವರ್ಗಾವಣೆಯಲ್ಲಿ ಬ್ಯುಸಿಯಾಗಿದ್ದು, ಕಾಮಗಾರಿಗಳಲ್ಲೂ ಕಮಿಷನ್‌ ಕೇಳುತ್ತಿದ್ದಾರೆ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಕಿಡಿಕಾರಿದ್ದಾರೆ.

Leave A Reply