Bigg Boss Kannada 10: ಬಿಗ್ ಬಾಸ್ ಎಫೆಕ್ಟ್: ದಾರವಾಹಿ ಪ್ರಿಯರಿಗೆ ಬಿಗ್ ಶಾಕ್- ಕೊನೆಗೊಳ್ಳಲಿದೆ ಈ ಮೂರು ಜನಪ್ರಿಯ ಸೀರಿಯಲ್!!!

Entertainment Bigg Boss Kannada season 10 will start the serials will end

Bigg Boss kannada 10: ಕಲರ್ಸ್ ಕನ್ನಡ ವಾಹಿನಿ ಮನರಂಜನೆಯ ರಸದೌತಣ ಬಡಿಸುವ ಕಾರ್ಯಕ್ರಮಗಳ ಮೂಲಕ ಜನಮಾನಸದಲ್ಲಿ ವಿಶೇಷ ಸ್ಥಾನ ಪಡೆದಿದೆ. ಕರ್ನಾಟಕದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 10 (Bigg Boss Kannada season 10) ಕಾರ್ಯಕ್ರಮ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಮೂಲಕ ಅಭಿಮಾನಿಗಳಿಗೆ ಭರ್ಜರಿ ಮನರಂಜನೆ ನೀಡಲು ಬಿಗ್ ಬಾಸ್ ತಂಡ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ.

 

ಇತ್ತೀಚೆಗೆ ಕಾರ್ಯಕ್ರಮದ ತಯಾರಕರು ಸೀಸನ್ 10 ರ ಮೊದಲ ಪ್ರೋಮೋವನ್ನು ಬಿಡುಗಡೆ ಮಾಡಲಾಗಿದೆ. ಬಿಗ್ ಬಾಸ್ 10 ಈಗಾಗಲೇ ಇದರ ಭರ್ಜರಿ ಟೀಸರ್ ಜೊತೆಗೆ ಎಂಟ್ರಿ ಕೊಡಲು ಸಜ್ಜಾಗಿದ್ದು, ಹೀಗಾಗಿ, ಈ ಬಾರಿ ಏನೆಲ್ಲ ವಿಶೇಷತೆ ಇರಲಿದೆ ಅಲ್ಲದೇ ದೊಡ್ಮನೆ ಆಟಕ್ಕೆ ಯಾರೆಲ್ಲ ಭಾಗವಹಿಸಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ. ಈ ಬಾರಿಯ ಅನುಬಂಧ ಅವಾರ್ಡ್ 10 ನೇ ವರ್ಷಕ್ಕೆ ಸಾಕ್ಷಿಯಾಗಿದ್ದು, ಅದೇ ರೀತಿ ಕಲರ್ಸ್ ಕನ್ನಡದಲ್ಲಿ ಹೊಚ್ಚ ಹೊಸ ಧಾರವಾಹಿ ಶುರುವಾಗಲಿದೆ. .

ಇನ್ನು ಬಿಗ್ ಬಾಸ್ ಸೀಸನ್ 10 ಆರಂಭವಾಗುತ್ತಿರುವ ಹಿನ್ನೆಲೆ ಕಲರ್ಸ್ ಕನ್ನಡದಲ್ಲಿ ಯಾವುದೆಲ್ಲಾ ಧಾರವಾಹಿಗಳು ಮುಕ್ತಾಯ ಆಗುತ್ತೆ ಗೊತ್ತಾ?

ರಾತ್ರಿ 8. 30 ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಲಕ್ಷಣ ಧಾರಾವಾಹಿಯನ್ನು ಬಿಗ್ ಬಾಸ್ ಆರಂಭವಾಗುವ ಹಿನ್ನಲೆಯಲ್ಲೇ ಈ ಧಾರವಾಹಿಯನ್ನು ನಿಲ್ಲಿಸಲಾಗುತ್ತಿದೆ. 9:30 ಕ್ಕೆ ಪ್ರಸಾರವಾಗುತ್ತಿರುವ ತ್ರಿಪುರ ಸುಂದರಿ ಧಾರವಾಹಿ ಮುಕ್ತಾಯ ಹಂತ ತಲುಪಿದೆ. ಬಿಗ್ ಬಾಸ್ ಮೂಲಕ ಖ್ಯಾತಿ ಪಡೆದ ದಿವ್ಯಾ ಸುರೇಶ್ ಈ ಧಾರವಾಹಿಯ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದೇ ರೀತಿ,ಬಿಗ್ ಬಾಸ್ ಸೀಸನ್ 9 ಮುಗಿದ ಸಂದರ್ಭ ಆರಂಭವಾಗಿದ್ದ ಪುಣ್ಯವತಿ ಧಾರವಾಹಿ ಇದೀಗ, ಸೀಸನ್ 10 ಆರಂಭವಾಗುವ ವೇಳೆಗೆ ಕೊನೆಗೊಳ್ಳಲಿದೆ. ಒಟ್ಟಿನಲ್ಲಿ ಬಿಗ್ ಬಾಸ್ ಸೀಸನ್ 10 ಆರಂಭವಾಗುವ ಬೆನ್ನಲ್ಲೇ ಕಲರ್ಸ್ ಕನ್ನಡದ ಈ 3 ಧಾರವಾಹಿಗಳು ಮುಕ್ತಾಯವಾಗುತ್ತಿದೆ.

ಇದನ್ನೂ ಓದಿ: Hit and Run: ಕಾರು ಅಪಘಾತ ಪ್ರಕರಣ: ಕೊನೆಗೂ ಕಾಮಿಡಿ ಸ್ಟಾರ್ ಚಂದ್ರಪ್ರಭರಿಂದ ತಪ್ಪೊಪ್ಪಿಗೆ- ಕೊಟ್ಟೇ ಬಿಟ್ರು ಟ್ವಿಸ್ಟ್ ಮೇಲೆ ಟ್ವಿಸ್ಟ್!!!

Leave A Reply

Your email address will not be published.