Kalladka prabhakar bhat: ಸೌಜನ್ಯ ಪ್ರಕರಣದ ಕುರಿತು ಕೊನೆಗೂ ಮೌನ ಮುರಿದ ಕಲ್ಲಡ್ಕ ಪ್ರಭಾಕರ್ ಭಟ್- ರೊಚ್ಚಿಗೆದ್ದ ಹಿಂದೂ ಹುಲಿ ಕೊನೆಗೂ ಹೇಳಿದ್ದೇನು ?
Dakshina Kannada news kalladka Prabhakar Bhatt on Dharmasthala Sowjanya murder case
Kalladka prabhakar bhat: ಧರ್ಮಸ್ಥಳ ಸೌಜನ್ಯ(Dharmastala Sowjanya) ಪ್ರಕರಣ ಇಂದು ಕೇವಲ ರಾಜ್ಯ ಮಾತ್ರವಲ್ಲ ರಾಷ್ಟ್ರವ್ಯಾಪಿ ಹಬ್ಬುವ ಎಲ್ಲಾ ಲಕ್ಷಣಗಳು ಕಾಣುತ್ತಿವೆ. ಇದನ್ನು ದೇಶದ ಮತ್ತೊಂದು ನಿರ್ಭಯ ಪ್ರಕರಣ ಎಂದರೂ ಬಹುಶಹ ತಪ್ಪಾಗಲಾರದು. ಆದರೆ ಕೊಂಚ ವ್ಯತ್ಯಾಸ ಅಂದ್ರೆ ನಿರ್ಭಯ ಪ್ರಕರಣದ ಆರೋಪಿಗಳು ಯಾರೆಂದು ತಿಳಿದು ಶಿಕ್ಷಿಸಲಾಯಿತು. ಆದರೆ 11 ವರ್ಷಗಳಾದರು ನಮ್ಮ ಮನೆ ಮಗಳು ಸೌಜನ್ಯಳನ್ನು ಕೊಂದ ಪಾಪಿಗಳು ಇನ್ನೂ ಸಿಗಲಿಲ್ಲ. ಸದ್ಯ ಎಲ್ಲೆಡೆ ಹಬ್ಬಿರುವ ಹೋರಾಟದ ಕಾವು ಮಾತ್ರ ಈ ಸಲ ಸುಮ್ಮನಿರದು.ನ್ಯಾಯ ಕೊಡಿಸೇ ತೀರುತ್ತದೆ. ಮುಖ್ಯವಾಗಿ, ಇಂದು ಒಂದು ಮಾತು ಹೇಳಿದರೆ ಸಾಕು ದಂಗೆ ಏಳುವ, ಏನು ಬೇಕಾದರೂ ಮಾಡಲು ಶಕ್ತಿ ಇರುವ, ಇಷ್ಟು ದಿನ ಬಾಯಿ ಮುಚ್ಚಿಕೊಂಡು ಕೂತಿದ್ದ ಹಿಂದೂ ಸಂಘಟನೆಗಳೂ ಕೂಡ ಇದೀಗ ಹೋರಾಟಕ್ಕೆ ದುಮುಕುತ್ತಿವೆ. ಕರಾವಳಿಯ ಹಿಂದೂ ಹುಲಿ ಕಲ್ಲಡ್ಕ ಪ್ರಭಾಕರ್ ಭಟ್(Kalladka prabhakar bhat) ರಂತಹ ನಾಯಕರ ಸಾಥ್ ಕೂಡ ಸಿಗುತ್ತಿದೆ.
ಹೌದು, ದೂರದ ಎಲ್ಲೋ ಒಂದು ಮೂಲೆಯಲ್ಲಿ ಹುಟ್ಟಿ ಇಂದು ನಾಡಿನ ಪ್ರಮುಖ ಹಿಂದೂ ಸಂಘಟನೆಗಳಲ್ಲಿ ಒಂದಾದ ಶ್ರೀ ರಾಮ ಸೇನೆಯ(Shri rama sene) ಮುಖ್ಯಸ್ಥರಾದ ಪ್ರಮೋದ್ ಮುತಾಲಿಕ್(Pramod muthalik) ಅವರಿಗೆ ಕರಾವಳಿ ಮೂಲೆಯ ಒಂದು ಕುಗ್ರಾಮದಲ್ಲಿರೋ ತಾಯಿಯ ರೋದನೆ ಕೇಳುತ್ತದೆ ಅಂದ್ರೆ ಹಿಂದೂಗಳ ಭದ್ರ ಕೋಟೆ ಎಂದು ಬೀಗುವ ಇದೇ ಕರಾವಳಿಯಲ್ಲಿ ಇರುವ ಹಿಂದೂ ನಾಯಕರಿಗೇಕೆ ಸೌಜನ್ಯಳ ಅಮ್ಮನ ಕೂಗು ಕೇಳಲಿಲ್ಲ. 11 ವರ್ಷಗಳಿಂದ ನ್ಯಾಯಕ್ಕಾಗಿ ಹಾತೊರೆಯುತ್ತಿರುವ ಆ ತಾಯಿಯ ಸಂಕಟ ಅರ್ಥವಾಗಲಿಲ್ಲ? ಹಾಗಿದ್ರೆ ಮಹೇಶ್ ಶೆಟ್ಟಿ ತಿಮರೋಡಿ ಅವರಿಗೆ ಮಾತ್ರವೇ ಕೇಳಿಸಿದ್ದು?. ಇಲ್ಲಾ.. ಮುಂಬೈ ಕರಾವಳಿಗರಿಗಷ್ಟೆ ಇದು ಕಂಡದ್ದು?. ಅಥವಾ ಇತ್ತೀಚೆಗೆ ಮಾತನಾಡಿದರೂ ಹಿಂದೂಗಳ ಪವಿತ್ರ ಕ್ಷೇತ್ರಕ್ಕೆ ಅಪಪ್ರಚಾರ ಮಾಡಬೇಡಿರೆನ್ನುವುದಕ್ಕಷ್ಟೇ ಸೀಮಿತವಾಗಿದ್ದು? ಇರಲಿ ಏನೇ ಇರಲಿ ಅಂತೂ ಕರಾವಳಿ ಹಿಂದೂ ಹುಲಿ ಕಲ್ಲಡ್ಕ ಪ್ರಭಾಕರ್ ಭಟ್ ಸೌಜನ್ಯ ಪ್ರಕರಣ ಕುರಿತು ಮೌನ ಮುರಿದರಲ್ಲಾ.. ಅಷ್ಟೇ ಸಾಕು ಈ ಹೋಟಕ್ಕೆ ಮತ್ತಷ್ಟು ಬಲ ಬರಲು.
ಏನಂದ್ರು ಕಲ್ಲಡ್ಕ ಪ್ರಭಾಕರ್ ಭಟ್?
ವಿಶ್ವ ಹಿಂದೂ ಪರಿಷತ್ತ್ ಹಾಗೂ ಭಜರಂಗದಳದ ವತಿಯಿಂದ ನಡೆದ ಹಿಂದೂ ಜಾಗೃತಿ ವೇದಿಕೆಯಲ್ಲಿ ಮಾತನಾಡಿದ ಕಲ್ಲಡ್ಕ ಪ್ರಭಾಕರ್ ಭಟ್ ಅವರು ‘ಸೌಜನ್ಯಳನ್ನು ಯಾರು ಅತ್ಯಾಚಾರ ಮಾಡಿದ್ರು, ಯಾರು ಕೊಂದ್ರು? ಇದುವರೆಗೂ ತಿಳಿಯಲಿಲ್ಲ. ಏನಿದು ವಿಚಿತ್ರ ಮರಾರಯರೇ.. ಆ ಹದಿನೇಳು ವರ್ಷದ ಹುಡುಗಿಯನ್ನು ಒಬ್ಬನೇ ಒಬ್ಬ ಎತ್ತಿಕೊಂಡು ಹೋಗಲು ಸಾಧ್ಯವಾ? ಒಬ್ಬನೇ ಅತ್ಯಾಚಾರ ಮಾಡುಲು ಸಾಧ್ಯವಿಲ್ಲ. ಅತ್ಯಂತ ಕೆಟ್ಟ ರೀತಿಯಲ್ಲಿ ಅತ್ಯಾಚಾರ ಮಾಡಿದ್ದಾರೆ. ಇದಕ್ಕೆ ಸರಿಯಾದ ನ್ಯಾಯ ಸಿಗಬೇಕು. ಆ ನಿಟ್ಟಿನಲ್ಲಿ ನಾವು ಹೋರಾಡಬೇಕು. ಸೌಜನ್ಯಳಿಗೆ ನ್ಯಾಯ ಸಿಕ್ಕರೆ ಇಡೀ ಹೆಣ್ಣು ಕುಲಕ್ಕೆ ನ್ಯಾಯ ಸಿಕ್ಕಂತೆ. ಹೀಗಾಗಿ ಹೆಣ್ಣು ಮಕ್ಕಳ ರಕ್ಷಣೆ ಮಾಡುವುದು ಹಿಂದೂ ಸಮಾಜದ ಕೆಲಸ. ಸೌಜನ್ಯ ಇಂದು ದೇವಿಯಾಗಿದ್ದಾಳೆ. 11 ವರ್ಷಗಳ ಬಳಿಕ ದೇವಿ ಆಗಿ ಬಂದಿದ್ದಾಳೆ’ ಎಂದು ಹೇಳಿದರು.
ಸದ್ಯ ಕರಾವಳಿ ಭಾಗದಲ್ಲಿ ಇದೀಗ ಸೌಜನ್ಯ ಪರ ಹೋರಾಟಕ್ಕೆ ಹಿಂದೂ ನಾಯಕರ ಸಾಥ್ ಸಿಕ್ಕಿದ್ದು, ಅಲ್ಲದೆ ಪ್ರಬಲ ಒಕ್ಕಲಿಗ ಸಮುದಾಯದ ಮಠವಾದ ಆದಿಚುಂಚನಗಿರಿ(Adichunchanagiri) ಶ್ರೀಗಳ ಬೆಂಬಲ ದೊರೆತದ್ದು ಈ ಹೋರಾಟಕ್ಕೆ ಆನೆ ಬಲ ಬಂದಂತಾಗಿದೆ. ಇದೆಲ್ಲವನ್ನು ನೋಡುತ್ತಿರುವ ಆರೋಪಿ ಪಾಪಿಗಳಿಗೆ ನಡುಕವೂ ಶುರುವಾಗಿದೆ. ಒಟ್ಟಿನಲ್ಲಿ ಆರಂಭದಲ್ಲಿ ಜನಾಭಿಪ್ರಾಯವಾಗಿದ್ದ ಹೋರಾಟ ಇದೀಗ ಜನಾಕ್ರೋಶಕ್ಕೆ ಕಾರಣವಾಗಿದೆ. ಇನ್ನು ಕೆಲವೇ ಕೆಲವು ದಿನಗಳಲ್ಲಿ ಉಗ್ರ ಸ್ವರೂಪವನ್ನೂ ಪಡೆಯುತ್ತದೆ ಎಂಬುದರಲ್ಲಿ ಅನುಮಾನವೇ ಇಲ್ಲ.
https://fb.watch/mTHzlKL6r8/?mibextid=FggW5e