Lucky plants: ನೀವು ಅತೀ ಶೀಘ್ರದಲ್ಲಿ ಲಕ್ಷಾಧಿಪತಿಗಳಾಗಬೇಕೇ? ಹಾಗಿದ್ದರೆ ಈ ಗಿಡಗಳನ್ನು ನಿಮ್ಮ ಮನೆಯಲ್ಲಿ ಬೆಳೆಸಿ

Lucky Plants: ಮನೆಯ ಸೌಂದರ್ಯ ಹೆಚ್ಚಿಸಲು ಸುತ್ತಮುತ್ತ ಗಿಡ ಮರಗಳನ್ನು (Plants) ಹೆಚ್ಚಾಗಿ ನೆಡುತ್ತಾರೆ. ಜೊತೆಗೆ ತಂಪಾದ ಶುದ್ಧವಾದ ಗಾಳಿಯ ಜೊತೆಗೆ ಆರೋಗ್ಯಕ್ಕೂ (Health) ಒಳ್ಳೆಯದು. ಇವುಗಳ ಪೈಕಿ ಕೆಲವೊಂದು ಸಸ್ಯಗಳನ್ನು ಅದೃಷ್ಟ ಸಸ್ಯಗಳು ಎಂದೇ ಕರೆಯುತ್ತಾರೆ. ಈ ಅದೃಷ್ಟ ಸಸ್ಯಗಳು (Lucky Plants) ಎಲ್ಲರ ಮನೆಯನ್ನು ಅಲಂಕರಿಸುವ ಜೊತೆಗೆ ಅದೃಷ್ಟ ತಂದುಕೊಡುತ್ತದೆಯಂತೆ.

 

ಹೌದು, ಈ ಗಿಡಗಳನ್ನು ನೆಟ್ಟರೆ ಮನೆಯಿಂದ ನೆಗೆಟಿವ್ ಎನರ್ಜಿ ನಾಶವಾಗಿ ಮನೆಯಲ್ಲಿ ಪಾಸಿಟಿವ್ ಎನರ್ಜಿ ಜೊತೆಗೆ ಹಣದ ಆಗಮನ ಹೆಚ್ಚುತ್ತದೆ. ವಾಸ್ತು ಶಾಸ್ತ್ರದಲ್ಲಿ ಇಂತಹ ಅನೇಕ ಸಸ್ಯಗಳಿವೆ. ಅಂತಹ ಸಸ್ಯಗಳನ್ನು ಇಲ್ಲಿ ನಿಮಗೆ ತಿಳಿಸಲಿದ್ದೇವೆ.

ಮನಿ ಪ್ಲಾಂಟ್ ಅಥವಾ ಡೆವಿಲ್ಸ್ ಐವಿ, ಎಪಿಪ್ರೆಮ್ನಮ್ ಆರಿಯಮ್ ಗಿಡ:

ಯಾರ ಮನೆಯಲ್ಲಿ ಮನಿ ಪ್ಲಾಂಟ್ ಇರುತ್ತದೆ ಅವರಿಗೆ ಹಣದ ಕೊರತೆಯಿಲ್ಲ ಮತ್ತು ಅವರು ಯಾವಾಗಲೂ ಸಂತೋಷವಾಗಿರುತ್ತಾರೆ ಎಂಬುದು ನಂಬಿಕೆ. ಈ ಸಸ್ಯವನ್ನು ಮನೆಯ ಆಗ್ನೇಯ ಮೂಲೆಯಲ್ಲಿ ಇರಿಸಬೇಕು. ಇದರಿಂದ ಮನೆಯೊಳಗೆ ಧನಾತ್ಮಕ ಶಕ್ತಿ ಇರುತ್ತದೆ ಎಂದು ಹೇಳಲಾಗುತ್ತದೆ.

ತುಳಸಿ ಗಿಡ :

ತುಳಸಿ ಗಿಡವನ್ನು ಮನೆಯಲ್ಲಿ ನೆಡುವುದರಿಂದ ಲಕ್ಷ್ಮಿ ದೇವಿಯು ಮನೆಯಲ್ಲಿ ನೆಲೆಸುತ್ತಾಳೆ ಮತ್ತು ಆರ್ಥಿಕ ಸಮೃದ್ಧಿಯನ್ನು ಕಾಪಾಡಿಕೊಳ್ಳಲಾಗುತ್ತದೆ ಮತ್ತು ನಿಮ್ಮ ಖಜಾನೆಯಲ್ಲಿ ಹಣದ ಕೊರತೆ ಇರುವುದಿಲ್ಲ. ತುಳಸಿ ಗಿಡವು ಮನೆಯ ಋಣಾತ್ಮಕ ಶಕ್ತಿಯನ್ನು ಹೋಗಲಾಡಿಸುತ್ತದೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಶಾಂತಿಯನ್ನು ಕಾಪಾಡುತ್ತದೆ ಎಂದು ಹೇಳಲಾಗುತ್ತದೆ.

ಮಲ್ಲಿಗೆ ಹೂವಿನ ಗಿಡ :

ದುರ್ಗಾ ದೇವಿ ಮಲ್ಲಿಗೆ ಹೂವಿನ ಗಿಡದಲ್ಲಿ ನೆಲೆಸಿದ್ದಾಳೆ. ಆದ್ದರಿಂದ ಮಲ್ಲಿಗೆ ಗಿಡವನ್ನು ನೆಡುವುದರಿಂದ ದುರ್ಗಾ ಮಾತೆಯು ಮನೆಯಲ್ಲಿ ನೆಲೆಸುತ್ತಾಳೆ ಮತ್ತು ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ಹೆಚ್ಚಾಗುತ್ತದೆ.

ಮೋರ್ ಪಂಖ್ ಗಿಡ:

ಮೋರ್ ಪಂಖ್ ಗಿಡವನ್ನು ‘ಜ್ಞಾನದ ಸಸ್ಯ’ ಎಂದೂ ಕರೆಯುತ್ತಾರೆ. ನವರಾತ್ರಿಯಲ್ಲಿ ನವಿಲು ಗಿಡವನ್ನು ನೆಟ್ಟರೆ ವೃತ್ತಿ ಜೀವನದಲ್ಲಿ ಯಶಸ್ಸು ಸಿಗುತ್ತದೆ ಎಂಬ ನಂಬಿಕೆ ಇದೆ. ನವಿಲು ಗಿಡ ಇರುವ ಮನೆಯಲ್ಲಿ ಹಣದ ಕೊರತೆ ಇರುವುದಿಲ್ಲ.

ಅದೃಷ್ಟ ಬಿದಿರು:

ಅದೃಷ್ಟ ಬಿದಿರನ್ನು ಲಕ್ಕಿ ಬ್ಯಾಂಬು ಎಂದು ಕರೆದರೂ ಇದು ಬಿದಿರಿನ ಗಿಡವಲ್ಲ. ಅದರ ಮೂಲ ಹೆಸರು ಡ್ರಾಕೇನಾ ಸ್ಯಾಂಡೆರಿಯಾನಾ. ಇದು ಮೂಲತಃ ಮಧ್ಯ ಆಫ್ರಿಕಾದ ಸಸ್ಯ. ಇದರ ಕಾಂಡಗಳ ಸಂಖ್ಯೆಗಳ ಆಧಾರದ ಮೇಲೆ ಅವುಗಳು ಒಂದೊಂದು ಅರ್ಥವನ್ನು ಸೂಚಿಸುತ್ತದೆ. ಎರಡು ಕಾಂಡಗಳಿದ್ದರೆ ಪ್ರೀತಿಯ ಸಂಕೇತವಾಗಿದೆ. ಐದು ಕಾಂಡಗಳಿದ್ದರೆ ಸಂಪತ್ತಿನ ಪ್ರತೀಕವಾಗಿದೆ.

ಜಡೆ ಗಿಡ ಅಥವಾ ಕ್ರಾಸುಲ್ಲಾ ಒವಾಟಾ:

ಯಶಸ್ಸು ಮತ್ತು ಅದೃಷ್ಟ ಬೇಕೆಂದರೆ ಜಡೆ ಗಿಡವು ತಪ್ಪದೇ ನಿಮ್ಮ ಮನೆಯ ಆಯ್ಕೆಯಾಗಿರಲಿ. ಇದರ ವೈಜ್ಞಾನಿಕ ಹೆಸರು ಕ್ರಾಸುಲ್ಲಾ ಒವಾಟಾ. ಕೆಲವೆಡೆ ಇದನ್ನು ಮನಿ ಪ್ಲಾಂಟ್ ಎಂದೇ ಕರೆಯಲಾಗುತ್ತದೆ. ಇದು ಸಮೃದ್ಧತೆ ಮತ್ತು ಆರೋಗ್ಯವನ್ನು ವೃದ್ಧಿಸುತ್ತದೆ ಎಂದು ನಂಬಲಾಗಿದೆ.

ಲಿಲ್ಲಿ:

ಇದರ ಬಣ್ಣ ಬಿಳಿ. ಇದು ಕೇವಲ ಅಲಂಕಾರಿಕ ಸಸ್ಯ ಮಾತ್ರವಲ್ಲ. ಇದರ ವೈಜ್ಞಾನಿಕ ಹೆಸರು ಸ್ಪಾಥಿಫಿಲಮ್. ಇದು ಮನೆಯೊಳಗಿನ ಪರಿಸರವನ್ನು ಶುದ್ಧಿಕರಿಸುವಲ್ಲಿ ಪ್ರಮುಖವಾಗಿದೆ. ಮನೆಯನ್ನು ಶಾಂತಿ ನೆಲೆಸುವಂತೆ ಮಾಡುವುದಲ್ಲದೇ ವಿಷಾನಿಲವನ್ನು ಶುದ್ಧಿಕರಿಸುತ್ತದೆ.

ರಬ್ಬರ್ ಗಿಡ ಅಥವಾ ಫಿಕಸ್ ಎಲಾಸ್ಟಿಕಾ:

ಫಿಕಸ್ ಎಲಾಸ್ಟಿಕಾ ಅಥವಾ ರಬ್ಬರ್ ಗಿಡವು ಸಂಪತ್ತು ಮತ್ತು ಸಮೃದ್ಧಿಯ ಸಂಕೇತವಾಗಿದೆ. ಹಾಗಾಗಿ ಇದನ್ನು ಅದೃಷ್ಟದ ಗಿಡವೆಂದೇ ಹೇಳಲಾಗುತ್ತದೆ.

ಹಾವಿನ ಗಿಡ (ಅತ್ತೆಯ ನಾಲಿಗೆ/Snake plant):

ಇದರ ಎಲೆಗಳು ನೇರವಾಗಿದ್ದು, ಕತ್ತಿಯಂತೆ ಚೂಪಾಗಿರುತ್ತದೆ. ಇದರ ವೈಜ್ಞಾನಿಕ ಹೆಸರು ಸನ್ಸೆವೀರಿಯಾ ಟ್ರೈಫಸಿಟಾ. ಇದು ದುಷ್ಟ ಶಕ್ತಿಗಳನ್ನು ದೂರವಿರಿಸಿ ಮನೆಯಲ್ಲಿ ಧನಾತ್ಮಕ ಶಕ್ತಿ ತುಂಬುತ್ತದೆ.

ಈ ಮೇಲಿನ ಕೆಲವು ಸಸ್ಯಗಳಿಗೆ ಸೂರ್ಯನ ಬೆಳಕು ಅತಿಯಾಗಿ ಬೇಕು, ಮತ್ತೆ ಕೆಲವು ಗಿಡಗಳು ಕತ್ತರಿಸಿದಷ್ಟು ಸಮೃದ್ಧವಾಗಿ ಬೆಳೆಯುತ್ತದೆ. ನೀವು ಯಾವುದೇ ಸಸ್ಯವನ್ನು ನೆಡುವ ಮೊದಲು ಅದು ಎಷ್ಟು ಉದ್ದ, ಅಗಲ ಬೆಳೆಯುತ್ತದೆ. ಮಣ್ಣು, ನೀರು ಬೆಳಕ ಎಷ್ಟು ಅಗತ್ಯವಿದೆ ಇವುಗಳನ್ನು ನೋಡಿಕೊಳ್ಳಬೇಕು. ಜೊತೆಗೆ ಅವುಗಳನ್ನು ವಾಸ್ತು ಶಾಸ್ತ್ರದ ಪ್ರಕಾರ ಯಾವ ಸ್ಥಳದಲ್ಲಿ ಇರಿಸಲು ಹೇಳುತ್ತಾರೋ ಆ ಸ್ಥಳವನ್ನೇ ಆಯ್ಕೆ ಮಾಡಿಕೊಂಡು ವ್ಯವಸ್ಥಿತವಾಗಿ ಬೆಳಿಸಿದರೆ ಅದೃಷ್ಟ ಒಳಿಸಿಕೊಳ್ಳಬಹುದಾಗಿದೆ.

Leave A Reply

Your email address will not be published.