State BJP: ರಾಜ್ಯ ಬಿಜೆಪಿಗೆ ಶಾಕ್ ಮೇಲೆ ಶಾಕ್- ಬಿಜೆಪಿಯ ಪ್ರಬಲ ವಿಕೆಟ್ ಪತನ !!

State BJP: ಕಳೆದ ವಿಧಾನಸಭಾ ಚುನಾವಣೆಯಲ್ಲಿ(Assembly election) ಸೋತ ಬಳಿಕ ಯಾಕೋ ರಾಜ್ಯ ಬಿಜೆಪಿಯ ನಸೀಬೇ ಚೆನ್ನಾಗಿಲ್ಲ ಕಾಣುತ್ತಿದೆ. ಇಷ್ಟು ದಿನ ಕಾಂಗ್ರೆಸ್ ಸರ್ಕಾರ(Congress Government) ಬಿಜೆಪಿಯ (BJP) ಕೆಲವು ಯೋಜನೆಗಳನ್ನು ರದ್ಧುಗೊಳಿಸಿ ಶಾಕ್ ನೀಡಿದರೆ, ಇದೀಗ ಸ್ವ ಪಕ್ಷದವರೇ ಬಿಜೆಪಿಗೆ ಶಾಕ್ ನೀಡುತ್ತಿದ್ದಾರೆ.

ಹೌದು, ವಿಪಕ್ಷ ನಾಯಕನಿಲ್ಲ, ರಾಜ್ಯಾಧ್ಯಕ್ಷರ ಆಯ್ಕೆಯಾಗದೆ ಪಕ್ಷವನ್ನು ಸಮರ್ಥ ರೀತಿಯಲ್ಲಿ ನಡೆಸೋ ಸಮರ್ಥ ನಾಯಕತ್ವ ಇಲ್ಲದೆ ರಾಜ್ಯದಲ್ಲಿ ಬಿಜೆಪಿ ತನ್ನ ಅವನತಿಯನ್ನು ಕಾಣುತ್ತಿದೆ. ಈ ನಡೆವೆ ಉಡುಪಿ(Udupi) ಜಿಲ್ಲೆಯ ಬೈಂದೂರಿನ ಬಿಜೆಪಿ ಮಾಜಿ ಶಾಸಕರಾದ ಬಿ.ಎ. ಸುಕುಮಾರ ಶೆಟ್ಟಿ(BA Sukumara shetty) ಅವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಿದ್ದಾರೆ. ಈ ವಿಚಾರವಾಗಿ ಸ್ವತಃ ಸುಕುಮಾರ ಶೆಟ್ಟರೇ ಬಹಿರಂಗವಾಗಿ ಹೇಳಿಕೆ ನೀಡಿದ್ದು ರಾಜ್ಯ ಬಿಜೆಪಿಗೆ ಶಾಕ್ ನೀಡಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಮೊದಲಿಂದಲೂ ಕಾಂಗ್ರೆಸ್ ಮಯವಾಗಿದ್ದ ಬೈಂದೂರು ಕ್ಷೇತ್ರದಲ್ಲಿ ಹಿಂದುತ್ವವು ನೆಲೆಯೂರವಂತೆ ಮಾಡಿ, ಪಣ ತೊಟ್ಟು ಬಿಜೆಪಿಗಾಗಿ ದುಡಿದೆ. ಆದರೆ ಒಬ್ಬರು ಬೆಳೆಯುತ್ತಿದ್ದಾರೆ ಎಂದರೆ ಪಕ್ಷವು ಸಹಿಸಲ್ಲ, ಕಾಲೆಳೆಯುವುದೇ ಹೆಚ್ಚು. ಜನ ನನಗೆ ತೋರಿದ ಪ್ರೀತಿಯನ್ನು, ಸ್ಪಂದನೆಯನ್ನು ಯಾವ ನಾಯಕನೂ ಗಮನಿಸಲಿಲ್ಲ. ಈ ಸಲ ಟಿಕೆಟ್ ನೀಡದೆ ಅವಮಾನ ಮಾಡಿದ್ದಾರೆ. ಇದರಿಂದ ತುಂಬಾ ಮನನೊಂದಿದ್ದೇನೆ ಎಂದಿದ್ದಾರೆ.

ಅಲ್ಲದೆ ಇದೆಲ್ಲವನ್ನೂ ಗಮನಿಸುತ್ತಿದ್ದ ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್(DK Shivkumar) ಅವರು ಎರಡು, ಮೂರು ಸಲ ಪಕ್ಷಕ್ಕೆ ಬನ್ನಿ ಎಂದು ಆಹ್ವಾನ ನೀಡಿದರು. ಬಿಜೆಪಿ ಕಡೆಗಣನೆಯಿಂದ ರೋಸಿ ಹೋಗಿದ್ದ ನಾನು ಸದ್ಯ ಮಾನ್ಯ ಡಿಕೆ ಶಿವಕುಮಾರ್ ಅವರಿಗೆ ಪಕ್ಷಕ್ಕೆ ಬರುವುದಾಗಿ, ಕಾಂಗ್ರೆಸ್ ಸೇರುವುದಾಗಿ ಗ್ರೀನ್ ಸಿಗ್ನಲ್ ನೀಡಿದ್ದೇನೆ ಎಂದು ಹೇಳಿದ್ದಾರೆ. ಇದರಿಂದ ರಾಜ್ಯ ಬಿಜೆಪಿಗೆ ಬಹಳ ದೊಡ್ಡ ಆಘಾತ ಉಂಟಾಗಿದೆ.

Leave A Reply

Your email address will not be published.