Car Accident: ಶಿವಮೊಗ್ಗ- ಕಾರುಗಳ ನಡುವೆ ಭೀಕರ ಅಪಘಾತ; ಅಪ್ಪ, ಮಗಳ ದಾರುಣ ಅಂತ್ಯ

Shivamogga Car Accident: ಸಾವು ಯಾವ ರೂಪದಲ್ಲಾದರೂ ಬರಬಹುದು. ಇದೀಗ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಜಾವಳ್ಳಿ ಬಳಿ 2 ಕಾರುಗಳ ನಡುವೆ ಡಿಕ್ಕಿಯಾಗಿ (Shivamogga Car Accident) ಕಾರಿನಲ್ಲಿಯೇ ಅಪ್ಪ, ಮಗಳ ಪ್ರಾಣ ಪಕ್ಷಿ ಹಾರಿ ಹೋದ ಘಟನೆ ನಡೆದಿದೆ.

 

ಈ ಭೀಕರ ಅಪಘಾತದಲ್ಲಿ ಶಿವಮೊಗ್ಗದ ಟಿಪ್ಪುನಗರದ ಅಫ್ತಾಬ್(35), ಅಫ್ತಾಬ್ ತಂಗಿ ಮಗಳು ಮದಿಯಾ(12) ಮೃತಪಟ್ಟಿದ್ದು, ಇನ್ನುಳಿದಂತೆ ಕಾರಿನಲ್ಲಿದ್ದ 6 ಜನರಿಗೆ ಸಣ್ಣಪುಟ್ಟ ಗಾಯಗಳಾಗಿದೆ. ಇಬ್ಬರಿಗೆ ಗಂಭೀರ ಗಾಯಗಳಾಗಿದೆ.

ಗಾಯಗೊಂಡ ಗಾಯಳುಗಳನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯರು ಚಿಕಿತ್ಸೆ ನೀಡುತ್ತಿದ್ದು ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ. ಈ ಕುರಿತು ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣವನ್ನು ವಿಚಾರಿಸಲಾಗುತ್ತಿದೆ.

Leave A Reply

Your email address will not be published.