Husband Wife: ದಿನಾ ಬಿಯರ್ ಕೇಳೋ ಹೆಂಡ್ತಿ; ಅತ್ತೆಗೆ ದೂರು ಕೊಟ್ರೆ ”ನಿನ್ ಅದನ್ನು ಕೇಳ್ತಿಲ್ಲವಲ್ಲ, ಸುಮ್ನಿರಿ ಅಳಿಯಂದ್ರೆ” ಅನ್ನೋದಾ?

Husband-Wife:
ಕುಡಿತದ ಚಟ ಇರುವ ಗಂಡಸರು ಸಾಮಾನ್ಯ. ಆದ್ರೆ ಇಲ್ಲಿ ಹೆಂಡತಿ ಕುಡಿತದ ಚಟಕ್ಕೆ ಬಿದ್ದಿದ್ದಾಳೆ. ಬಡಪಾಯಿ ಗಂಡನ ಜೇಬು ಖಾಲಿಯಾಗಿ, ಪತ್ನಿ ಹೊಡೆತ ತಾಳಲಾರದೆ ವ್ಯಕ್ತಿಯೊಬ್ಬ ಪೊಲೀಸ್ ಮೊರೆ ಹೋಗಿದ್ದಾನೆ.
ಕೆಲ ಪುರುಷರು ಕುಡಿತದ ಚಟದಲ್ಲಿ ಮನೆ, ಬಂಗಾರ ಎಲ್ಲವನ್ನೂ ಮಾರಿದ್ರೆ ಮತ್ತೆ ಕೆಲವರು ಕುಡಿದು ಬಂದ ಪತ್ನಿಗೆ (Husband – Wife) ಮನ ಬಂದಂತೆ ಥಳಿಸುತ್ತಾರೆ. ಆದ್ರೆ ಇಲ್ಲಿ ಪಕ್ಕಾ ಉಲ್ಟಾ ಕಥೆ ಒಂದು ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಆಗಿದೆ.

ಉತ್ತರ ಪ್ರದೇಶದ ಮೈನ್‌ಪುರಿ (Mainpuri) ಯಲ್ಲಿ ಬಂಜಾರ ಸಮುದಾಯದ ವ್ಯಕ್ತಿ ಪ್ರಕಾರ, ತನ್ನ ಪ್ರೀತಿಯ ಪತ್ನಿ ಮದುವೆಯಾದ ಮೊದಲು ಒಂದು ದಿನ ಬಿಯರ್ (Beer) ಕೇಳಿದಲೆಂದು ಕೊಡಿಸಿದೆ. ಆದ್ರೆ ದಿನ ಕಳೆದಂತೆ ಪತ್ನಿಯ ಬಿಯರ್ ಚಟದಿಂದ ಪತಿ ಬಡವಾಗಿದ್ದಾನೆ. ಮನೆ ನಿಭಾಯಿಸುವುದು ಕಷ್ಟವಾಗಿದೆ. ಪತ್ನಿ ಬಿಯರ್ ಗೆ ಖರ್ಚು ಮಾಡ್ತಿರುವ ಹಣ ನೋಡಿ ಕಂಗಾಲಾದ ಪತಿ, ಬಿಯರ್ ತಂದುಕೊಡಲು ನಿರಾಕರಿಸಿದ್ದಾನೆ. ಆದ್ರೆ ಪತ್ನಿ ಅದಕ್ಕೆ ಒಪ್ಪುತ್ತಿಲ್ಲ ಎಂದು ಪತ್ನಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.

ಅದಲ್ಲದೆ ನಾನು ಒಂದು ದಿನ ಬಿಯರ್ ತಂದುಕೊಟ್ಟಿಲ್ಲವೆಂದ್ರೂ ಪತಿಗೆ ಒದೆ ಬೀಳುತ್ತೆ. ಕೋಪಗೊಳ್ಳುವ ಪತ್ನಿ ಮನೆಯನ್ನು ರಣರಂಗ ಮಾಡ್ತಾಳೆ. ಕಂಡ ಕಂಡ ವಸ್ತುವಿನಲ್ಲಿ ಪತಿಗೆ ಹೊಡೆಯುತ್ತಾಳೆ. ಕೊಡಲಿಯಿಂದ ಒಂದೆರಡು ಬಾರಿ ಹಾಗೂ ಕಬ್ಬಿಣದ ರಾಡ್ ನಿಂದ ಒಂದೆರಡು ಬಾರಿ ಹಲ್ಲೆ ನಡೆಸಿದ್ದಾಳೆ ಎಂದು, ಪತ್ನಿ ಕುಡಿತದ ಚಟದಿಂದ ಬೇಸತ್ತ ಪತಿ, ಆಕೆ ಕುಟುಂಬಸ್ಥರಿಗೆ ದೂರು ನೀಡಿದ್ದಾನೆ. ಆದ್ರೆ ಕುಟುಂಬಸ್ಥರ ಕಡೆಯಿಂದ ಬಂದ ಉತ್ತರ ಆತನನ್ನು ತಬ್ಬಿಬ್ಬಾಗಿಸಿದೆ.

ಹೌದು, ಪತ್ನಿಗೆ ಮದ್ಯ ತಂದುಕೊಡಲು ಆಗಲ್ಲ ಅಂದ್ರೆ ನೀನ್ಯಾಕೆ ಮದುವೆಯಾದೆ ಎಂದು ಪತ್ನಿಯ ಅಮ್ಮ ಪ್ರಶ್ನೆ ಮಾಡಿದ್ದಾಳಂತೆ. ಆಕೆ ಮದ್ಯಪಾನ ಮಾಡ್ತಿದ್ದಾಳೆಯೇ ವಿನಃ ರಕ್ತವನ್ನು ಕುಡಿಯುತ್ತಿಲ್ಲವಲ್ಲ ಎಂದು ಅತ್ತೆ ಧಮಕಿ ಹಾಕಿದ್ದಾಳಂತೆ. ಇದ್ರಿಂದ ಪತಿ ಮತ್ತಷ್ಟು ಬೇಸರಗೊಂಡಿದ್ದಾನೆ.

ಕೊನೆಗೆ ದಿಕ್ಕು ತೋಚದಾಗಿ ಪೊಲೀಸ್ ಠಾಣೆಯಲ್ಲಿ ಪತಿ ರಕ್ಷಣೆ ಕೋರಿದ್ದಾನೆ. ಪತ್ನಿ ನನ್ನ ಮೇಲೆ ಹಲ್ಲೆ ನಡೆಸುವ ಕಾರಣ ನನ್ನ ಮನೆ ಮುಂದೆ ಒಬ್ಬ ಪೊಲೀಸರನ್ನು ನೇಮಿಸಬೇಕು. ಇಲ್ಲವೆ ಪತ್ನಿಯ ಮದ್ಯ ಚಟವನ್ನು ಬಿಡಿಸಬೇಕು ಎಂದು ಪೊಲೀಸರಿಗೆ ಪತಿ ಮನವಿ ಸಲ್ಲಿಸಿದ್ದಾನೆ.

Leave A Reply

Your email address will not be published.