GruhaJyoti Scheme: ಗೃಹಜ್ಯೋತಿ ಯೋಜನೆ ಶುರುವಾದ ಒಂದೇ ತಿಂಗಳಲ್ಲಿ ಇನ್ನೊಂದು ಆಘಾತ! ಈ ನಿಯಮ ದಿಢೀರ್‌ ಬದಲಾವಣೆ ಮಾಡಿದ ಸರಕಾರ

Karnataka news Congress gurantee effect Karnataka government decide to suddenly changed this rule

GruhaJyoti Scheme: ಕಾಂಗ್ರೆಸ್‌ ಸರಕಾರವು ಐದು ಭರವಸೆಗಳನ್ನು ರಾಜ್ಯದ ಜನರಿಗೆ ಹೆಚ್ಚಾಗಿ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್‌ ಸರಕಾರ ತಾವು ನೀಡಿದ ಭರವಸೆಯನ್ನು ಉಳಿಸಿಕೊಳ್ಳುವತ್ತ ಜನರ ಭರವಸೆಯನ್ನು ಗೆದ್ದಿದೆ.

ಶಕ್ತಿಯೋಜನೆಯ ಮೂಲಕ ರಾಜ್ಯಾದ್ಯಂತ ಹೆಣ್ಣುಮಕ್ಕಳು ಉಚಿತ ಪ್ರಯಾಣ ಮಾಡುತ್ತಿದ್ದಾರೆ. ಗೃಹಲಕ್ಷ್ಮಿ ಯೋಜನೆಯಿಂದ ಮನೆ ನಡೆಸುವ ಗೃಹಿಣಿಯರಿಗೆ ತಿಂಗಳಿಗೆ ರೂ.2000 ದೊರೆಯುತ್ತಿದೆ. ಹಾಗೆನೇ ಅನ್ನಭಾಗ್ಯದ ಮೂಲಕ ಐದು ಕೆಜಿ ಅಕ್ಕಿ, ಉಳಿದ ಐದು ಕೆಜಿ ಅಕ್ಕಿಗೆ ಹಣವನ್ನು ನೀಡಲಾಗುತ್ತಿದೆ. ಯುವ ನಿಧಿ ವರ್ಷಾಂತ್ಯಕ್ಕೆ ಚಾಲನೆ ದೊರಕಲಿದೆ. ಗೃಹಜ್ಯೋತಿ(GruhaJyoti Scheme) ಯೋಜನೆ ಮೂಲಕ ರಾಜ್ಯದ ಜನರಿಗೆ 200 ಯೂನಿಟ್‌ ಉಚಿತ ವಿದ್ಯುತ್‌ ನೀಡುವ ಭರವಸೆಯನ್ನು ನೀಡಿದೆ.

ಇದೆಲ್ಲಾ ಯೋಜನೆಗಳನ್ನು ಜನರಿಗೆ ನೀಡಿದ ಸರಕಾರ ಇದೀಗ ಆರ್ಥಿಕವಾಗಿ ತೊಂದರೆಯಾಗಿದೆ. ಹಾಗಾಗಿ ಈ ಸಮಸ್ಯೆಯನ್ನು ಸರಿಮಾಡಿಕೊಳ್ಳಲು ಸರಕಾರ ಹೊಸದಾದ ನಿರ್ಧಾರ ಮಾಡಿದೆ. ಈ ಹಣಕಾಸಿನಿಂದ ತೊಂದರೆ ಉಂಟಾಗಿರುವುದರಿಂದ ಸರಕಾರ ಈಗ ಜನರ ಮೇಲೆ ಟ್ಯಾಕ್ಸ್‌ ಹಾಕಲಾಗುತ್ತಿದೆ. ಇದರಿಂದ ಬರುವ ಹಣದಿಂದ ಎಲ್ಲ ಸರಿದೂಗಿಸಲು ನೋಡಲಾಗುತ್ತಿದೆ ಎಂದು ಹೇಳಲಾಗಿದೆ.

ಮೊದಲಿಗೆ ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡಲಾಯಿತು. ಗೃಹಜ್ಯೋತಿ ಯೋಜನೆ ಫ್ರೀ ಎಂದು ನೀಡಿದ ಮೇಲೆ, ಇದೀಗ ವಿದ್ಯುತ್‌ ಬೆಲೆಯನ್ನು ಏರಿಕೆ ಮಾಡಲಾಗುತ್ತದೆ. ವಿದ್ಯುತ್‌ ದರ ಏರಿಕೆ ಮಾಡಬೇಕೆಂದು ಎಸ್ಕಾಂನಿಂದ ಸರಕಾರಕ್ಕೆ ಮನವಿ ಬಂದಿದೆ. ಮೊದಲು ಸರಕಾರ ಬಜೆಟ್‌ ಹಣ ಖಾಲಿ ಆಗುವವರೆಗೂ ವಿದ್ಯುತ್‌ ದರ ಏರಿಸುವುದಿಲ್ಲ ಎಂದು ಹೇಳಿಕೆ ನೀಡಿತ್ತು. ಇಂಧನ ಶುಲ್ಕ ಮತ್ತು ಹೊಂದಾಣಿಕೆ ಬೆಲೆಯ ಆಧಾರದ ಮೇಲೆ ನಿರ್ಧಾರ ಮಾಡಬಹುದು ಎಂದು ಹೇಳಲಾಗುತ್ತಿದೆ.

ಅಂದ ಹಾಗೆ ಈ ಬೆಲೆ ಏರಿಕೆ ಗೃಹಜ್ಯೋತಿ ಅಪ್ಲೈ ಮಾಡಿದ ಜನರಿಗೆ ಅಲ್ಲ, ಬದಲಾಗಿ ವಾಣಿಜ್ಯ ಬಳಕೆಗೆ ವಿದ್ಯುತ್‌ ಬಳಕೆ ವಿಷಯಕ್ಕೆ ಸಂಬಂಧಪಟ್ಟಿದ್ದು.

ಇದನ್ನೂ ಓದಿ: KMF ನಲ್ಲಿ ಭರ್ಜರಿ ಉದ್ಯೋಗಾವಕಾಶ! ಆನ್‌ಲೈನ್‌ ಮೂಲಕ ಅರ್ಜಿ ಆಹ್ವಾನ! ಉದ್ಯೋಗದ ಹೆಚ್ಚಿನ ವಿವರ ಇಲ್ಲಿದೆ!!!

Leave A Reply

Your email address will not be published.