Sowjanya case: ಸೌಜನ್ಯ ಹೋರಾಟದ ಪರ ಹಾಕಿದ್ದ ಬ್ಯಾನರ್!! ರಾತ್ರೋ ರಾತ್ರಿ ಕಿತ್ತೆಸೆದ ಕಿಡಿಗೇಡಿಗಳು
Dakshina Kannada news the favour of sowjanya murder case struggle banner stripped at nidle
Sowjanya case : ಧರ್ಮಸ್ಥಳದ ಪಾಂಗಳದಲ್ಲಿ ಕಳೆದ ಹನ್ನೊಂದು ವರ್ಷಗಳ ಹಿಂದೆ ನಡೆದಿದ್ದ ಕಾಲೇಜು ವಿದ್ಯಾರ್ಥಿನಿ ಕುಮಾರಿ ಸೌಜನ್ಯ ಗೌಡ ಅತ್ಯಾಚಾರ, ಕೊಲೆ ಪ್ರಕರಣದ(Sowjanya case) ನ್ಯಾಯಕ್ಕಾಗಿ ನಡೆಯುತ್ತಿರುವ ಹೋರಾಟದ ಪರ ಹಾಕಲಾಗಿದ್ದ ಬ್ಯಾನರ್ ಗಳನ್ನು ರಾತ್ರೋ ರಾತ್ರಿ ಕಿಡಿಗೇಡಿಗಳು ಕಿತ್ತೆಸೆದ ಘಟನೆಯು ಇಲ್ಲಿನ ಬೂಡುಜಾಲು, ನಿಡ್ಲೆ ಯಲ್ಲಿ ನಡೆದಿದೆ.
ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಆರೋಪಿ ಸಂತೋಷ್ ರಾವ್ ದೋಷಮುಕ್ತಗೊಂಡ ಬೆನ್ನಲ್ಲೇ ನೈಜ ಆರೋಪಿಗಳ ಪತ್ತೆಗಾಗಿ ಮರುತನಿಖೆಗೆ ಆಗ್ರಹಿಸಿ ರಾಜ್ಯಮಟ್ಟದಲ್ಲಿ ಹೋರಾಟ ನಡೆಯುತ್ತಿದ್ದು ಇದರ ಪರವಾಗಿ ಜಿಲ್ಲೆಯ ಹಲವೆಡೆ ಬ್ಯಾನರ್ ಗಳನ್ನು ನಾಗರೀಕ ಸಮಾಜ ಹಾಕಿತ್ತು.
ಆದರೆ ಸೌಜನ್ಯ ಹೋರಾಟವನ್ನು ಹತ್ತಿಕ್ಕುವ ಸಲುವಾಗಿ ಕೆಲ ಕಿಡಿಗೇಡಿಗಳು ದುಷ್ಕೃತ್ಯ ಎಸಗಿದ್ದು, ನ್ಯಾಯದ ಪರ ಹೋರಾಟಗಾರರು,ನಾಗರಿಕರು ಹಾಕಿದ್ದ ಬ್ಯಾನರ್ ಗಳನ್ನು ರಾತ್ರೋ ರಾತ್ರಿ ಕಿತ್ತೆಸೆದು ಕಿಡಿಗೇಡಿತನ ಪ್ರದರ್ಶಿಸಿದ್ದಾರೆ ಎನ್ನಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬ್ಯಾನರ್ ಹರಿದ ಚಿತ್ರಗಳನ್ನು ಹರಿಯಬಿಡಲಾಗಿದ್ದು, ಕಿಡಿಗೇಡಿಗಳ ವಿರುದ್ಧ ನಾಗರಿಕರು ಆಕ್ರೋಶಗೊಂಡಿದ್ದಾರೆ.
ಇದನ್ನೂ ಓದಿ: Dharmastala temple: ಧರ್ಮಸ್ಥಳ ಪ್ರೈವೇಟ್ ದೇವಸ್ಥಾನವೇ ಅಥವಾ ಸಾರ್ವಜನಿಕವೇ ? – ಇಲ್ಲಿದೆ ನೋಡಿ ನೀವು ಬೆಚ್ಚಿ ಬೀಳೋ ವಿವರ !