Interesting News: ದಸರಾದಲ್ಲಿ ಭಾಗವಹಿಸುವ ಆನೆಗಳ ತೂಕ ಎಷ್ಟಿರಬಹುದು ? ಅದರಲ್ಲೂ ಕ್ಯಾಪ್ಟನ್ ಅಭಿಮನ್ಯು ತೂಕ ಕೇಳಿದ್ರೆ ಶಾಕ್ ಆಗ್ತೀರಾ !

Mysore news Mysuru Dasara 2023 age weight height details of the elephants participating in Jumboo sawari

Dasara elephants: ಮೈಸೂರು: ವಿಶ್ವ ವಿಖ್ಯಾತ ಮೈಸೂರು (Mysuru) ದಸರಾ (Dasara) ಮಹೋತ್ಸವಕ್ಕೆ ಕ್ಷಣಗಣನೆ ಶುರುವಾಗಿದೆ. ಮೈಸೂರು ದಸರಾಗೆ ಸಿಂಗಾರಗೊಳ್ಳುತ್ತಿದೆ. ಈ ಹಿನ್ನೆಲೆಯಲ್ಲಿ ಇದೀಗ ಕಾಡಿನಿಂದ ಅರಮನೆಯ ಆವರಣಕ್ಕೆ ಗಜಪಡೆಗಳು ಕುಟುಂಬ ಸಮೇತರಾಗಿ ಬಂದಿವೆ. ಈ ಸಂದರ್ಭ ಬಂದಿರುವ ಗಜಪಡೆಯ ತೂಕ ಪರೀಕ್ಷೆ ನಡೆಸಲಾಯಿತು. ಮೈಸೂರಿನ ದೇವರಾಜ ಮೊಹಲ್ಲಾದಲ್ಲಿನ ವೇ ಬ್ರಿಡ್ಜ್ ಮೇಲೆ ಆನೆಗಳನ್ನು ನಿಲ್ಲಿಸಿ ತೂಕ ಮಾಡಲಾಗಿದೆ. ಅಲ್ಲಿನ ಸಾಯಿರಾಮ್ ತೂಕ ಮಾಪನ ಕೇಂದ್ರದಲ್ಲಿ ತೂಕ ಪರೀಕ್ಷೆ ಒಳಪಡಿಸಲಾಯಿತು. ಈ ವೇಳೆ ಆನೆಗಳ ತೂಕ ಆರೋಗ್ಯಕರವಾಗಿರುವುದು ಕಂಡು ಬಂದಿದೆ. ಆನೆಗಳ ತೂಕದ ಪ್ರಮಾಣ ಕಂಡು ಅಲ್ಲಿದ್ದವರು ಸಕತ್ ಆಶ್ಚರ್ಯ ಚಕಿತರಾಗಿದ್ದಾರೆ. ಆನೆಗಳ ತೂಕ ಎಷ್ಟಿರಬಹುದು ಅನ್ನುವ ಕುತೂಹಲ ಮತ್ತು ಆಸಕ್ತಿ ನಿಮ್ಮಲ್ಲಿ ಇದೆ ಅಂದುಕೊಂಡು ಈ ಪೋಸ್ಟ್.

ಇವತ್ತು ಮೈಸೂರು ಅರಮನೆಯಿಂದ ಹೊರಟ ಆನೆಗಳ ದಂಡು ಪೊಲೀಸರ ಬಿಗಿ ಭದ್ರತೆಯಲ್ಲಿ ತೂಕ ಮಾಪನ ಕೇಂದ್ರಕ್ಕೆ ಆಗಮಿಸಿದವು. ಈ ವೇಳೆ ಗಜಪಡೆಯ( Dasara elephants) ಕ್ಯಾಪ್ಟನ್ ಅಭಿಮನ್ಯು (Abhimanyu) ತೂಕ ಕಂಡು ಜನರು ಚಕಿತರಾಗಿದ್ದಾರೆ. ಅಭಿಮನ್ಯು ಬರೋಬ್ಬರಿ 5,160 ಕೆಜಿ ತೂಗಿದ್ದಾನೆ. ಈ ಮೂಲಕ ಅಭಿ ಆರೋಗ್ಯವಂತ ತೂಕವನ್ನು ಹೊಂದಿದ್ದಾನೆ ಎಂದು ವೈದ್ಯರು ಗುರುತಿಸಲಾಗಿದೆ.

ದಸರಾ ಉತ್ಸವದ ಆನೆಗಳು ಆರೋಗ್ಯವಂತ ತೂಕವನ್ನು ಹೊಂದಿದ್ದು, ಆನೆಗಳ (Elephant) ತೂಕದ ಆಧಾರದ ಮೇಲೆ ಅವುಗಳ ಆಹಾರ ನಿಗದಿಯಾಗುವ ಕಾರಣ ಆಗಾಗ ಅವುಗಳ ತೂಕ ಮಾಡಲಾಗುತ್ತದೆ. ಆನೆಗಳಿಗೆ ಸೂಕ್ತ ಆಹಾರ ಹಾಗೂ ತರಬೇತಿಗೆ ಸಜ್ಜುಗೊಳಿಸಲು ಕಾರ್ಯಕ್ರಮ ರೂಪಿಸಲಾಗಿದೆ. ದಸರಾದಲ್ಲಿ ಕ್ಯಾಪ್ಟನ್ ಅಭಿಮನ್ಯು ಅಂಬಾರಿ ಹೊತ್ತರೆ, ಉಳಿದ ಆಯ್ದ ಆನೆಗಳು ಆತನ ಎಡ ಬಲದಲ್ಲಿ ನಡೆಯುತ್ತವೆ. ಬರೋಬ್ಬರಿ 750 ಕೆಜಿ ತೂಕದ ಚಿನ್ನದ ಅಂಬಾರಿ ಹೊರಲು ಅಭಿಮನ್ಯು ಸಾಕಷ್ಟು ವ್ಯಾಯಾಮ, ಟ್ರೇನಿಂಗ್ ಪಡೆಯಬೇಕಾಗುತ್ತದೆ. ಜತೆಗೆ ಪೂರಕವಾಗಿ ಆತನಿಗೆ ಒಳ್ಳೆಯ ಆಹಾರ ಮತ್ತು ತಯಾರಿ ಬೇಕಾಗುತ್ತದೆ. ಅದಕ್ಕಾಗಿ ಪೂರ್ವತಯಾರಿಯಾಗಿ ಈಗ ಆನೆಗಳ ತೂಕ ಮಾಡಲಾಗಿದೆ. ಎಲ್ಲಾ ಆನೆಗಳೂ ಸಾಕಷ್ಟು ತೂಕ ಹೊಂದಿದ್ದು ಪೂರ್ಣವಾಗಿ ಆರೋಗ್ಯವಾಗಿವೆ. ಈಗ ಉಳಿದ ಆನೆಗಳ ತೂಕ ಎಷ್ಟಿತ್ತು ಎಂದು ನೋಡೋಣ.

ದಸರಾ ಗಜಪಡೆಯ ತೂಕದ ವಿವರ:

  • ವಿಜಯ:– 2,830 ಕಿಲೋ ಗ್ರಾಂ
  • ಭೀಮ:– 4,370 ಕಿಲೋ ಗ್ರಾಂ
  • ವರಲಕ್ಷ್ಮಿ:– 3,020 ಕಿಲೋ ಗ್ರಾಂ
  • ಮಹೇಂದ್ರ:– 4,530 ಕಿಲೋ ಗ್ರಾಂ
  • ಧನಂಜಯ:– 4,940 ಕಿಲೋ ಗ್ರಾಂ
  • ಕಂಜನ್:– 4,240 ಕಿಲೋ ಗ್ರಾಂ
  • ಗೋಪಿ:– 5,080 ಕಿಲೋ ಗ್ರಾಂ

ಇದನ್ನೂ ಓದಿ: Actress Ramya: ಮೋಹಕತಾರೆ ನಟಿ ರಮ್ಯಾಗೆ ಹೃದಯಾಘಾತ ?!! ಏನಿದು ಶಾಕಿಂಗ್ ನ್ಯೂಸ್?

Leave A Reply

Your email address will not be published.