Homa in Cm Siddaramaiah Home : ಸಿಎಂ ಸಿದ್ದರಾಮಯ್ಯನ ಮನೆಯಲ್ಲಿ ಹೋಮ-ಹವನ !! ಮೊಮ್ಮಗನ ಕೈಯಿಂದಲೇ ನೆರವೇರಿತು ಶಾಸ್ತ್ರಬದ್ಧವಾದ ಪೂಜೆ- ಪುನಸ್ಕಾರ !!

Homa in Cm Siddaramaiah Home: ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಲ್ಲಿ ಹೋಮ-ಹವನ ನಡೆದಿದೆ. ಸಿದ್ದರಾಮಯ್ಯ ಕೆಲ ದಿನಗಳ ಹಿಂದಷ್ಟೇ ಕಾವೇರಿ ನಿವಾಸಕ್ಕೆ ಶಿಫ್ಟ್ ಆಗಿದ್ದರು. ಸದ್ಯ ಸೋಮವಾರದಂದು ಸಿಎಂ ಸಿದ್ದರಾಮಯ್ಯ ಸರ್ಕಾರಿ ನಿವಾಸ ಕಾವೇರಿಯಲ್ಲಿ ಹೋಮ ಹವನವನ್ನು (Homa in Cm Siddaramaiah Home) ನಡೆಸಿದ್ದಾರೆ. ಮೊಮ್ಮಗನ ಕೈಯಿಂದಲೇ ಶಾಸ್ತ್ರಬದ್ಧವಾದ ಪೂಜೆ- ಪುನಸ್ಕಾರ ನೆರವೇರಿದೆ.

 

ವಿಶೇಷ ಏನಪ್ಪಾ ಅಂದ್ರೆ, ಸಿದ್ದರಾಮಯ್ಯ (Cm Siddaramaiah) ಇದೇ ಮೊದಲ ಬಾರಿಗೆ ಹೋಮ-ಹವನ ನೆರವೇರಿಸಿದ್ದಾರೆ ಎನ್ನಲಾಗಿದೆ. ಸಿಎಂ ಸಿದ್ದರಾಮಯ್ಯ ಅವರ ಮೊಮ್ಮಗ ಅಂದರೆ, ದಿವಂಗತ ರಾಕೇಶ್ ಅವರ ಪುತ್ರ ಧವನ್​ ರಾಕೇಶ್ ಪೂಜೆ ಮಾಡಿದ್ದಾರೆ. ಸದ್ಯ ಈ ಫೋಟೋಸ್ ವೈರಲ್ ಆಗಿದೆ.

 

ವಿಧಾನಸಭಾ ಚುನಾವಣೆಯಲ್ಲಿ (Election) ತಾತನ ಪರವಾಗಿ ಧವನ್ ರಾಕೇಶ್​ ಅವರು ಪ್ರಚಾರ ಮಾಡಿದ್ದರು. ವಿಧಾನಸಭಾ ಚುನಾವಣೆಯ ಬಳಿಕ ಧವನ್​ ರಾಕೇಶ್​​ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ಆಗಾಗ ಕಾಣಿಸಿಕೊಳ್ಳುತ್ತಿದ್ದಾರೆ. ಈ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಈ ಬೆನ್ನಲ್ಲೇ ಮೊಮ್ಮಗ ಧವನ್​ ರಾಕೇಶ್​​ ರಾಜಕಾರಣಕ್ಕೆ ಎಂಟ್ರಿ ಕೊಡುವ ಬಗ್ಗೆ ಸುದ್ದಿ ಹರಿದಾಡಿದೆ. ಇದೀಗ ಮೊಮ್ಮಗನ ಕೈಯಲ್ಲಿ ಪೂಜೆ ಮಾಡಿಸಿದ್ದಾರೆ.

ಇದನ್ನೂ ಓದಿ : ಧರ್ಮಸ್ಥಳ ಸೌಜನ್ಯ ಪ್ರಕರಣ ಮತ್ತೆ ಆದಿಚುಂಚನಗಿರಿ ಶಾಖಾ ಮಠಕ್ಕೆ ತೆರಳಿದ ಸೌಜನ್ಯ ಕುಟುಂಬ ಶ್ರೀಗಳೊಂದಿಗೆ ನಡೆದ ಚರ್ಚೆ, ಭರವಸೆಯೇನು ಗೊತ್ತಾ?

 

Leave A Reply

Your email address will not be published.