

Viral video: ಜಾರ್ಖಂಡ್ ನ ಸಾಹೀಬ್ ಗಂಜ್ ಸಮೀಪದ ಬರ್ಹಾವಾ ರೈಲು ಮಾರ್ಗದಲ್ಲಿ ರೈಲಿನ 4 ಬೋಗಿಗಳು ಎಂಜಿನ್ ಇಲ್ಲದೆ ಚಲಿಸಿರುವ ಅಚ್ಚರಿಯ ಘಟನೆ ನಡೆದಿದೆ. ಇದರ ವಿಡಿಯೋ ಈಗಾಗಲೇ ಸಾಮಜನಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಘಟನೆಯು ಮಾಲ್ಡ ರೈಲು ವಿಭಾಗದ ವ್ಯಾಪ್ತಿಯಲ್ಲಿ ನಡೆದಿದೆ. ಆ ರೈಲಿನಲ್ಲಿ ಚಾಲಕನಿರಲಿ ಅಥವಾ ಈ ನಾಲ್ಕು ಭೋಗಿಗಳಿಗೆ ಇಂಜಿನ್ ಕೂಡ ಇರಲಿಲ್ಲ. ಆದರೂ ಈ ರೈಲಿನ ಭೋಗಿಗಳು ಸಹ ಅತ್ಯಂತ ನಿಧಾನವಾಗಿ ಚಲಿಸಿದೆ. ಈ ರೈಲಿನ ನಾಲ್ಕು ಭೋಗಿಗಳನ್ನು ನಿರ್ವಹಣೆ ಕಾರಣಕ್ಕಾಗಿ ಈ ರೈಲನ್ನು ನಿಲ್ಲಿಸಲಾಗಿತ್ತು ಎಂದು ಹೇಳಲಾಗಿದೆ.
ಜಾರ್ಖಂಡ್ ನ ಸಾಹೀಬ್ ಗಂಜ್ ಸಮೀಪದ ಬರ್ಹಾವಾ ರೈಲು ಮಾರ್ಗದಲ್ಲಿ ರೈಲಿನ 4 ಬೋಗಿಗಳು ಎಂಜಿನ್ ಇಲ್ಲದೆ ಚಲಿಸಿರುವ ಘಟನೆಯನ್ನು ಎಲ್ಲರೂ ನಿಬ್ಬೆರಾಗಿ ನಿಂತು ನೋಡಿದ ಸಾರ್ವಜನಿಕರು. ಅದೃಷ್ಟ ವಶಾತ್, ರೈಲಿನ ಭೋಗಿಗಳಲ್ಲಿ ಯಾರು ಇರಲಿಲ್ಲ. ಆಗ ಚಾಲಕನಿರಲ್ಲಿ ಅಥವಾ ಈ ನಾಲ್ಕು ಭೋಗಿಗಳಿಗೆ ಇಂಜಿನ್ ಸಹ ಇರಲಿಲ್ಲ. ಅದು ಅಲ್ಲದೆ, ರೈಲಿನ ನಾಲ್ಕು ಭೋಗಿಗಳು ಸಹ ಅತ್ಯಂತ ನಿದಾನವಾಗಿ ಚಲಿಸುತ್ತಿದ್ದ ಕಾರಣ ಯಾವುದೇ ರೀತಿಯಾದ ಅಪಾಯ ಸಂಭವಿಸಲಿಲ್ಲ.
ಈ ಘಟನೆ ಕುರಿತಂತೆ ಮಾಲ್ಡಾ ರೈಲು ವಿಭಾಗದ ಅಧಿಕಾರಿಗಳು ಯಾವುದೇ ರೀತಿಯಾದ ಸ್ಪಷ್ಟನೆ ನೀಡಿರಲಿಲ್ಲ . ಆದರೆ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್(Viral video) ಆದ ಬಳಿಕ ರೈಲು ಅಧಿಕಾರಿಗಳ ನಿರ್ಲಕ್ಷಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
https://twitter.com/UtkarshSingh_/status/1698401467638620647?t=L7Vl2Lk-eUYyiGK-1WZrYA&s=08













