Udupi : ಭರವಸೆ ಮೂಡಿಸಿದ್ದ ರಾಷ್ಟ್ರಮಟ್ಟದ ಬಾಕ್ಸಿಂಗ್‌‌ ಕ್ರೀಡಾಪಟು ನೇಣಿಗೆ ಶರಣು 

Share the Article

 

ಭರವಸೆ ಮೂಡಿಸಿದ್ದ ರಾಷ್ಟ್ರಮಟ್ಟದ ಬಾಕ್ಸಿಂಗ್‌‌ ಕ್ರೀಡಾಪಟು ನೇಣಿಗೆ ಶರಣು !

ವಿರಾಜ್ ಮೆಂಡನ್ ಜೀವನದ ಭರವಸೆ ಕಳೆದುಕೊಳ್ಳಲು ಏನು ಕಾರಣ?

ಉಡುಪಿ : ದೇಶದ ವಿವಿಧೆಡೆ ನಡೆಯುತ್ತಿದ್ದ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಪಡೆದುಕೊಂಡು ಭರವಸೆ ಮೂಡಿಸಿದ್ದ ಮಲ್ಪೆಯ ವಿರಾಜ್‌ ಮೆಂಡನ್‌ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

 

ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಶಾಂತಿನಗರದಲ್ಲಿ ವಿರಾಜ್ ಮೆಂಡನ್ (29) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮನೆಯ ಕೊಠಡಿಯಲ್ಲಿ ನೇಣು ಬಿಗಿದು ವಿರಾಜ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬಾಕ್ಸಿಂಗ್ ಕ್ಷೇತ್ರದಲ್ಲಿ ರಾಷ್ಟ್ರವನ್ನು ಪ್ರತಿನಿಧಿಸಿ ಹಲವು ಪದಕಗಳನ್ನು ವಿರಾಜ್ ಮೆಂಡನ್ ತಮ್ಮದಾಗಿಸಿಕೊಂಡಿದ್ದರೂ, ಮೂಲ ವೃತ್ತಿಯಾಗಿ ಮಲ್ಪೆ ಬಂದರಿನಲ್ಲಿ ಮೀನುಗಾರಿಕೆ ಕೆಲಸ ಮಾಡಿಕೊಂಡಿದ್ದರು. ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಕುರಿತು ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply