Home Karnataka State Politics Updates PM Modi: ಪ್ರಧಾನಿ ಮೋದಿ ಕುರಿತು ಅಚ್ಚರಿಯ ಮಾಹಿತಿ ಬಹಿರಂಗಗೊಳಿಸಿದ RTI – ಇದನ್ನು ತಿಳಿದರೆ...

PM Modi: ಪ್ರಧಾನಿ ಮೋದಿ ಕುರಿತು ಅಚ್ಚರಿಯ ಮಾಹಿತಿ ಬಹಿರಂಗಗೊಳಿಸಿದ RTI – ಇದನ್ನು ತಿಳಿದರೆ ನೀವೂ ಕೂಡ ಶಾಕ್ ಆಗ್ತೀರಾ !!

PM Modi

Hindu neighbor gifts plot of land

Hindu neighbour gifts land to Muslim journalist

PM Modi: ಪ್ರಧಾನಿ ನರೇಂದ್ರ ಮೋದಿ(Naremdra modi) ಅವರು ಶ್ರಮಜೀವಿ ಮತ್ತು ಯಾವುದೇ ಸಮಯ ವಿರಾಮ ತೆಗೆದುಕೊಂಡಿಲ್ಲ ಎಂಬುದು ಈಗ ಎಲ್ಲರಿಗೂ ತಿಳಿದಿದೆ. ಅವರ ನಿರಂತರ ಚಟುವಟಿಕೆ ಯುವಕರನ್ನೇ ನಾಚಿಸುವಂತದ್ದು. ಅಷ್ಟೇ ಏಕೆ ಅವರ ಕಾರ್ಯ ವೈಖರಿಗೆ ಇಡಿ ವಿಶ್ವವೇ ತಲೆಭಾಗಿದೆ. ಆದರೀಗ ಈ ವಿಚಾರವಾಗಿ RTI ಅಚ್ಚರಿಯ ಮಾಹಿತಿಯೊಂದನ್ನು ಬಹಿರಂಗಗೊಳಿಸಿದೆ.

ಹೌದು, ಪ್ರಧಾನಿ ನರೇಂದ್ರ ಮೋದಿ(PM Modi) ಅವರು ಪರಿಶ್ರಮ ಜೀವಿ, ಅವರು ಯಾವಾಗಲೂ ಒಂದಲ್ಲ ಒಂದು ಕೆಲಸ, ಚಟುವಟಿಕೆಯಲ್ಲಿ ತೊಡಗಿರುತ್ತಾರೆ ಎಂಬುದು ಜನಜನಿತವಾಗಿದೆ. ಮೋದಿ ಅವರ ಆಡಳಿತ, ವಿಚಾರಗಳನ್ನು ಟೀಕಿಸಿರುವವರೂ ಅವರ ಶ್ರಮ, ದಣಿವರಿಯದ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವವರಿದ್ದಾರೆ. ಇದರ ಬೆನ್ನಲ್ಲೇ, ಕಳೆದ ಒಂಬತ್ತು ವರ್ಷದಲ್ಲಿ ನರೇಂದ್ರ ಮೋದಿ ಅವರು ಭಾರತದ ಪ್ರಧಾನಿ ಆಗಿ 2014 ರಲ್ಲಿ ಅಧಿಕಾರಕ್ಕೆ ಬಂದಾಗಿನಿಂದ ಅಂದರೆ ಈ 9 ವರ್ಷಗಳ ಅವಧಿಯಲ್ಲಿ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ ಎಂದು ಆರ್ ಟಿಐ ನಲ್ಲಿ ಮಾಹಿತಿ ಬಹಿರಂಗವಾಗಿದೆ.

ಅಂದಹಾಗೆ ಪ್ರಫುಲ್ ಪಿ ಸರ್ದಾ ಎಂಬವರು 2023ರ ಜುಲೈ 31ರಂದು ಸಲ್ಲಿಸಿದ್ದ ಮಾಹಿತಿ ಹಕ್ಕು ಅರ್ಜಿಯಲ್ಲಿ ಎರಡು ಪ್ರಶ್ನೆಗಳನ್ನು ಕೇಳಿದ್ದರು. ಅದರಲ್ಲಿ ಮೊದಲನೆಯದಾಗಿ ಪ್ರಧಾನಿಯಾದ ನಂತರ ಪ್ರಧಾನಿ ಮೋದಿ ಎಷ್ಟು ದಿನ ಕಚೇರಿಗೆ ಹಾಜರಾಗಿದ್ದರು ಎಂಬುದು. ಇದಕ್ಕೆ ಉತ್ತರಿಸಿದ RTI ಪ್ರಧಾನಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡ ನಂತರ ಯಾವುದೇ ರಜೆಯನ್ನು ಪಡೆದಿಲ್ಲ” ಎಂದು ತಿಳಿಸಿದೆ.

ಇನ್ನು ಎರಡನೇ ಪ್ರಶ್ನೆಯು “ಭಾರತದ ಪ್ರಧಾನಿಯಾದ ನಂತರ ಇಲ್ಲಿಯವರೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವಿವಿಧ ಕಾರ್ಯಕ್ರಮಗಳು ಮತ್ತು ಸಮಾರಂಭಗಳಲ್ಲಿ ಹಾಜರಿದ್ದ ಮತ್ತು ಭಾಗವಹಿಸಿದ ದಿನಗಳ ಸಂಖ್ಯೆಯ ವಿವರಗಳನ್ನು ಕೇಳಿದೆ” ಎಂದು ಕೇಳಿದೆ. ಉತ್ತರದಲ್ಲಿ ಪಿಎಂಒಗೆ ವೆಬ್ಸೈಟ್ ಲಿಂಕ್ ಅನ್ನು ಒದಗಿಸಲಾಗಿದೆ, ಇದು ಒಟ್ಟು ಘಟನೆಗಳ ಸಂಖ್ಯೆ 3,000 ಮೀರಿದೆ ಎಂದು ತೋರಿಸುತ್ತದೆ.

ನರೇಂದ್ರ ಮೋದಿ ಅವರು ದಿನಕ್ಕೆ 18 ತಾಸು ಕೆಲಸ ಮಾಡುತ್ತಾರೆ, ಅವರು ಗುಜರಾತ್‌ ಮುಖ್ಯಮಂತ್ರಿಯಾದಾಗಿನಿಂದ ಇದುವರೆಗೆ ಒಂದು ದಿನವೂ ರಜೆ ತೆಗೆದುಕೊಂಡಿಲ್ಲ ಎಂದು ಬಿಜೆಪಿ ನಾಯಕರು ಆಗಾಗ ಹೇಳುತ್ತಾರೆ.

ಇದನ್ನೂ ಓದಿ: Vijay devarakonda – samanta : ಸಮಂತಾ-ವಿಜಯ್ ದೇವರಕೊಂಡ ಬೆಡ್ ರೂಮ್ ವಿಡಿಯೋ ಲೀಕ್ !! ಇಬ್ಬರ ರೊಮ್ಯಾನ್ಸ್ ನೋಡಿ ಹೌಹಾರಿದ ಫ್ಯಾನ್ಸ್