Uma bharti: ಬಿಜೆಪಿ ವಿರುದ್ಧವೇ ಸಿಡಿದೆದ್ದ ಬಿಜೆಪಿ ಫ್ರೈರ್ ಬ್ರಾಂಡ್ ಉಮಾಭಾರತಿ- ರಾಜ್ಯ ರಾಜಕೀಯದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದ ನಾಯಕಿ !!
Political news Maybe They Are Nervous Uma Bharti On No BJP Invite For Mega Yatra
Uma bharti: ಮಧ್ಯಪ್ರದೇಶದಲ್ಲಿ (Madhyapradesh) ತಮ್ಮದೇ ಬಿಜೆಪಿ ಪಕ್ಷ ಹಮ್ಮಿಕೊಂಡಿರುವ ಜನಾಶೀರ್ವಾದ್ ಯಾತ್ರೆಗೆ ಆಹ್ವಾನಿಸದಿದ್ದಕ್ಕೆ ನಿರಾಶೆ ವ್ಯಕ್ತಪಡಿಸಿದ್ದ ಬಿಜೆಪಿ ಫೈರ್ ಬ್ರಾಂಡ್ ನಾಯಕಿ ಉಮಾಭಾರತಿ(Uma bharti) ಇದೀಗ ಪಕ್ಷದ ನಾಯಕರ ವಿರುದ್ದವೇ ತಿರುಗಿಬಿದ್ದಿದ್ದಾರೆ.
ಹೌದು, ಜನಾಶೀರ್ವಾದ್ ಯಾತ್ರೆಗೆ ಆಹ್ವಾನಿಸದಿದ್ದಕ್ಕೆ ನಿರಾಶೆ ವ್ಯಕ್ತಪಡಿಸಿದ್ದ ಉಮಾಭಾರತಿ ಇದೀಗ ಯಾತ್ರೆಗೆ ಆಹ್ವಾನ ನೀಡಿದರೂ ಹೋಗುವುದಿಲ್ಲ ಎಂದು ಖಡಕ್ ಆಗಿ ಹೇಳಿದ್ದಾರೆ. ಉಮಾಭಾರತಿ ಅವರ ಹೇಳಿಕೆ ಸದ್ಯ ಬಿಜೆಪಿ ಪಕ್ಷದೊಳಗೆ ಬಿರುಗಾಳಿ ಎಬ್ಬಿಸಿದ್ದು ಮಧ್ಯಪ್ರದೇಶ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಸಿದೆ.
ಈ ಕುರಿತು ಪ್ರತಿಕ್ರಿಯಿಸಿದ ಅವರು ‘ಯಾತ್ರೆಯ ಸಮಯದಲ್ಲಿ ಹಾಜರಿದ್ದರೆ ಬಿಜೆಪಿ ನಾಯಕರು ಮುಜುಗರಕ್ಕೊಳಪಡಬೇಕಾಗುತ್ತದೆ ಎಂದು ಆಗ ಅಲ್ಲಿ ನೆರೆದಿದ್ದವರೆಲ್ಲರ ಗಮನ ನನ್ನ ಮೇಲೆ ಕೇಂದ್ರಿತವಾಗುತ್ತದೆ. ನಾನು ಅಲ್ಲಿದ್ದರೆ, ಇಡೀ ಸಾರ್ವಜನಿಕ ಗಮನವು ನನ್ನ ಮೇಲೆ ಬೀಳುತ್ತದೆ. ಇದರಿಂದ ನಾಯಕರು ಹೆದರುತ್ತಾರೆ” ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅಲ್ಲದೆ ಆರಂಭದಲ್ಲಿ ನನಗೆ ಜನಾಶೀರ್ವಾದ ಯಾತ್ರೆಗೆ ಆಹ್ವಾನ ಬಂದಿರಲಿಲ್ಲ ನಿಜ.ಆದರೆ, ಆಮಂತ್ರಣ ಬಂದಿರೋ ಇಲ್ಲವೋ ನನಗೆ ಯಾವುದೇ ಪ್ರಾಮುಖ್ಯತೆ ಇಲ್ಲ, ಈಗ ಆಹ್ವಾನ ಬಂದರೆ ಹೋಗುವುದಿಲ್ಲ. ನಾನು ಸೆಪ್ಟೆಂಬರ್ 25 ರಂದು ಪ್ರಾರಂಭ ಅಥವಾ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವುದಿಲ್ಲ ಎಂದು ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಇಷ್ಟೇ ಅಲ್ಲದೆ ರಾಜ್ಯ ಬಿಜೆಪಿ ಘಟಕದ ಟೀಕೆಗಳ ಹೊರತಾಗಿಯೂ, ಫೈರ್‌ಬ್ರಾಂಡ್ ನಾಯಕಿ ಅವರು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರೊಂದಿಗಿನ ತನ್ನ ಬಾಂಧವ್ಯವನ್ನು ಮುಂದುವರಿಸುವುದಾಗಿ ಮತ್ತು ಕೇಳಿದಾಗ ಮತ್ತು ಪಕ್ಷದ ಪರವಾಗಿ ಪ್ರಚಾರ ಮಾಡುವುದಾಗಿ ಹೇಳಿದರು.
ಏನಿದು ಜನಾಶೀರ್ವಾದ್ ಯಾತ್ರೆ?
ಸದ್ಯದಲ್ಲೇ ವಿಧಾನಸಭಾ ಚುನಾವಣೆಯನ್ನು ಎದುರಿಸಲು ಮುಂದಾಗಿರುವ ಮಧ್ಯಪ್ರದೇಶದಲ್ಲಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಬಿಜೆಪಿ ಜನಾಶೀರ್ವಾದ್ ಯಾತ್ರೆಯನ್ನು ಆರಂಭಿಸಿದೆ. ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಭಾನುವಾರ ಯಾತ್ರೆಗೆ ಚಾಲನೆ ನೀಡಿದ್ದು, 2018 ರ ವಿಧಾನಸಭಾ ಚುನಾವಣೆಯಲ್ಲಿ 30 ಸ್ಥಾನಗಳ ಪೈಕಿ 24 ಸ್ಥಾನಗಳನ್ನು ಬಿಜೆಪಿ ಗೆದ್ದಿರುವ ರಾಜ್ಯದ ವಿಂಧ್ಯ ಪ್ರದೇಶದ ಮೂಲಕ ಯಾತ್ರೆ ಸಾಗಲಿದೆ.
1) कल दिनांक 3 सितंबर 2023 की तीन बाते बहुत चर्चा में आ गई थी ।
2) उम्मीदवारों की सूची, जिसपर मैंने कल रात को ही ट्वीट कर वस्तुस्थिति बता दी ।
— Uma Bharti (@umasribharti) September 4, 2023