Mumbai Police & Molestation Case: ಲೈಂಗಿಕ ದೌರ್ಜನ್ಯ ಎಸಗಿದ ವ್ಯಕ್ತಿ, ವರ್ಷದ ನಂತರ ಜೈಲಿನಿಂದ ಬಂದು ಯುವತಿ ಮನೆ ಬಾಗಿಲಲ್ಲಿ ನಿಂತಾಗ….
ಒಂದು ವರ್ಷದ ಹಿಂದೆ ಮುಂಬೈನ್ ಲೋಕಲ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಓರ್ವ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ವ್ಯಕ್ತಿಯೋರ್ವನ್ನು ರೈಲಿನಲ್ಲಿದ್ದ ಪ್ರಯಾಣಿಕರು ಸೇರಿ ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ್ದರು. ರೈಲ್ವೆ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿ ಜೈಲಿಗೆ ಹಾಕಿದ್ದರು. ಆದರೆ ಇದೀಗ ಈ ಆರೋಪಿ ಮತ್ತೆ ಯುವತಿಯ ಮನೆ ಬಾಗಿಲಿಗೆ ಬಂದಿದ್ದಾನೆ.
ಆರೋಪಿಯನ್ನು ನೋಡಿ ಯುವತಿ ಇದೀಗ ಮತ್ತೆ ಆಘಾತಕ್ಕೊಳಗಾಗಿದ್ದಾಳೆ. ನಿನಗೆ ನನ್ನ ಮನೆಯ ವಿಳಾಸ ಕೊಟ್ಟದ್ದು ಯಾರು ಎಂದು ಕೇಳಿದ್ದು, ಆಗ ಆತನ ನನಗೆ ಪೊಲೀಸರೇ ಕೊಟ್ಟಿದ್ದಾರೆ ಎಂದು ಹೇಳಿದ್ದಾನೆ. ನಾನು ಓರ್ವ ದಿನಗೂಲಿ ನೌಕರ ನನ್ನ ಮೇಲೆ ಹಾಕಿದ ಕೇಸ್ ವಾಪಾಸು ತೆಗೆಯಿರಿ ಎಂದು ಆತ ಯುವತಿಗೆ ಒತ್ತಾಯ ಮಾಡುತ್ತಿದ್ದಾನೆ. ಕೂಡಲೇ ಯುವತಿ ಮನೆಯವರು ರೈಲ್ವೇ ಪೊಲೀಸರನ್ನು ಸಂಪರ್ಕ ಮಾಡಿದ್ದು, ನನ್ನ ಮನೆಯ ವಿಳಾಸ ಕೊಟ್ಟದ್ದು ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಆದರೆ ಪೊಲೀಸರು ತಾವು ಆತನಿಗೆ ವಿಳಾಸ ನೀಡಿಲ್ಲ ಎಂದು ಹೇಳುತ್ತಿದ್ದಾರೆ. ಕಾನೂನಿನ ಪ್ರಕಾರ ಆರೋಪ ಪಟ್ಟಿಯ ಪ್ರತಿಯನ್ನು ಆರೋಪಿಗೆ ನೀಡಬೇಕು. ಇದರಲ್ಲಿದ್ದ ಯುವತಿಯ ಮನೆ ವಿಳಾಸವನ್ನು ಆತ ಹುಡುಕಿಕೊಂಡು ಆತ ಬಂದಿರಬಹುದು ಎಂದು ಪೊಲೀಸರು ಅಂದಾಜು ಮಾಡಿದ್ದಾರೆ.
ಇದೀಗ ಆರೋಪಿಗೆ ಮನೆ ವಿಳಾಸ ಗೊತ್ತಾಗಿರುವುದರಿಂದ ಯುವತಿ ಕಚೇರಿಗೆ ಹೋಗಿ ಕೆಲಸ ಮಾಡಲು ಕೂಡಾ ಹೆದರುತ್ತಿದ್ದಾಳೆ. ಹೆದರಿಕೆಯಿಂದ ಮನೆಯಲ್ಲೇ ವರ್ಕ್‌ಫ್ರಂ ಹೋಂ ಮಾಡಿ ಕೊಂಡಿದ್ದಾಳೆ. ಆಕೆಯ ಹೆತ್ತವರಿಗೂ ಮಗಳ ಸುರಕ್ಷತೆಯ ಕುರಿತು ಆತಂಕ ಉಂಟಾಗಿದೆ.
ಈ ಲೈಂಗಿಕ ದೌರ್ಜನ್ಯವು 2022ರ ಸೆಪ್ಟೆಂಬರ್ 21ರಂದು ಮುಂಬೈನ ಲೋಕಲ್ ರೈಲಿನಲ್ಲಿ ನಡೆದಿತ್ತು. ಲೇಡಿಸ್ ಕೋಚ್‌ಗೆ ನುಗ್ಗಿದ್ದ ಆರೋಪಿ ಯುವತಿಯೋರ್ವಳ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದ. ಯುವತಿ ನಂತರ ಅಂಧೇರಿ ಬಂದಾಗ ರೈಲ್ವೇ ಪೊಲೀಸರನ್ನು ಸಂಪರ್ಕ ಮಾಡಿದ್ದಳು. ಆಗ ಪೊಲೀಸರು ನೀವ್ಯಾಕೆ ಆತನನ್ನು ಥಳಿಸಿಲ್ಲ ಎಂದು ಪ್ರಶ್ನೆ ಮಾಡಿದ್ದರಂತೆ. ಹಲವು ಪ್ರಶ್ನೆ ಕೇಳಿದ ನಂತರ ಪೊಲೀಸರು ಎಫ್‌ಐಆರ್ ದಾಖಲು ಮಾಡಿದ್ದಾರೆಂದು ಯುವತಿ ಹೇಳಿಕೆ ನೀಡಿದ್ದಾಳೆ.