Ceiling fan: ನಿಮ್ಮ ಮನೆಯ ಸೀಲಿಂಗ್ ಫ್ಯಾನ್ ನಲ್ಲಿ ಉತ್ತಮವಾದ ಗಾಳಿ ಬರುತ್ತಿಲ್ಲವೇ ?! ಸರಿಪಡಿಸಿ ಸಾಕಾಗಿದೆಯೇ? ಹಾಗಿದ್ರೆ ಜಸ್ಟ್ ಹೀಗ್ ಮಾಡಿ, ನೆಮ್ಮದಿಯ ಗಾಳಿ ಪಡೆಯಿರಿ
Technology news Do this if the Ceiling fan is not blowing properly more details in kannada
Ceiling Fan: ಇತ್ತೀಚಿನ ಹವಾಮಾನದಲ್ಲಿ ಫ್ಯಾನ್, ಎಸಿ, ಕೂಲರ್ ಗಳ ಅಗತ್ಯ ತುಂಬಾ ಇದೆ. ಎಸಿ ಇರಲಿ, ಕೂಲರ್ ಇರಲಿ ಜೊತೆಗೆ ಸೀಲಿಂಗ್ ಫ್ಯಾನ್ (ceiling fan) ಉಪಯೋಗಿಸದ ಮನೆಯಿಲ್ಲ. ಆದರೆ ಸೀಲಿಂಗ್ ಫ್ಯಾನ್ ಮೊದಲು ಕೆಲಸ ಮಾಡಿದಂತೆ ಕಾಲ ಸರಿದಂತೆ ಅದರ ಸಾಮರ್ಥ್ಯ ಕಡಿಮೆ ಆದಂತೆ ಕಾಣಿಸುತ್ತದೆ. ಈ ವೇಳೆ ನೀವು ಈ ಕೆಲಸ ಮಾಡಿದ್ರೆ ಖಂಡಿತಾ ಯಾವುದೇ ಸಮಸ್ಯೆ ಇರುವುದಿಲ್ಲ.
ಕೆಲವರಿಗೆ ದಿನದ 24 ಗಂಟೆನೂ ಫ್ಯಾನ್ ಓಡ್ತಾನೆ ಇರಬೇಕು. ಅದರಲ್ಲೂ ಫುಲ್ ಸ್ಫೀಡ್ ನಲ್ಲಿ ಫ್ಯಾನ್ ತಿರುಗುತ್ತಾ ಇರಬೇಕು. ಎಸಿ, ಏರ್ ಕೂಲರ್ಗೆ ಹೋಲಿಸಿದರೆ ಫ್ಯಾನ್ ಕಡಿಮೆ ವ್ಯಾಟ್ಸ್ನಲ್ಲಿ ವರ್ಕ್ ಆಗುತ್ತೆ.ಮುಖ್ಯವಾಗಿ ನೀವು ಫ್ಯಾನ್ ಅನ್ನು ಕಡಿಮೆ ವೇಗದಲ್ಲಿ ಬಳಕೆ ಮಾಡಿದ್ರೆ ಖಂಡಿತಾ ಉತ್ತಮ ಅನುಭವ ಸಾಧ್ಯ. ಇದರಿಂದ ತಾಜಾ ಗಾಳಿ ಮತ್ತು ತಂಪಾದ ವಾತಾವರಣ ನಿರ್ಮಾಣ ಆಗಲಿದ್ದು, ಚೆನ್ನಾಗಿ ನಿದ್ದೆ ಮಾಡಲು ಅನುಕೂಲವಾಗಲಿದೆ.
ಇನ್ನು ಫ್ಯಾನ್‌ನಿಂದ ಸರಿಯಾಗಿ ಗಾಳಿ ಬಾರದೆ ಇದ್ದರೆ ತಕ್ಷಣಕ್ಕೆ ಹೊಸ ಫ್ಯಾನ್ ಖರೀದಿ ಮಾಡಲು ಮುಂದಾಗಬೇಡಿ. ಇದರ ಹೊರತು , ಸ್ವಲ್ಪ ಎಚ್ಚರಿಕೆಯ ನಿರ್ವಹಣೆಯೊಂದಿಗೆ, ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸೀಲಿಂಗ್ ಫ್ಯಾನ್ ಅನ್ನು ಹೊಸ ರೀತಿಯಲ್ಲಿ ಚಾಲನೆ ಆಗುವಂತೆ ಮಾಡಬಹುದು. ಮನೆಯಲ್ಲಿ ಸೀಲಿಂಗ್ ಫ್ಯಾನ್ ಕಡಿಮೆ ಆಗುತ್ತಿದ್ದರೆ ಅದಕ್ಕೆ ಮುಖ್ಯ ಕಾರಣ ಬಹುಶಃ ಸೀಲಿಂಗ್ ಫ್ಯಾನ್ ಬ್ಲೇಡ್ ಗಳ ಮೇಲಿನ ಧೂಳು ಅಷ್ಟೇ.
ಹೌದು, ಫ್ಯಾನ್ ಬ್ಲೇಡ್ ಸ್ವಚ್ಛವಾಗಿದ್ದರೆ ಫ್ಯಾನ್ ವೇಗವಾಗಿ ತಿರುಗುತ್ತದೆ. ಆದ್ದರಿಂದ ಫ್ಯಾನ್ ಬ್ಲೇಡ್‌ಗಳನ್ನು ಸ್ವಚ್ಛವಾಗಿರಿಸಿಕೊಳ್ಳಬೇಕು. ನೀವು ಫ್ಯಾನ್ ಬ್ಲೇಡ್‌ಗಳನ್ನು ವಾರಕ್ಕೆ ಒಮ್ಮೆಯಾದರೂ ಬಟ್ಟೆಯಿಂದ ಸ್ವಚ್ಛಗೊಳಿಸಿ. ಯಾಕೆಂದರೆ ಅತಿಯಾದ ಕಸ ಕೂತರೆ ಫ್ಯಾನ್ ನಿಧಾನವಾಗಿ ಬಾಗಿಕೊಳ್ಳುತ್ತದೆ.
ಇನ್ನು ತುಂಬಾ ಹಳೆಯದಾದ ಬ್ಲೇಡ್‌ಗಳನ್ನು ಬದಲಾಯಿಸುವುದು ಒಳ್ಳೆಯದು. ಅದರಲ್ಲೂ ಗಾಳಿ ಸರಿಯಾಗಿ ಬರಬೇಕು ಎಂದರೆ ಸೀಲಿಂಗ್ ಫ್ಯಾನ್ ಅನ್ನು ಕೋಣೆಯ ಮಧ್ಯಭಾಗದಲ್ಲಿ ಇರಿಸಬೇಕು. ಜತೆಗೆ ನೆಲದಿಂದ ಕನಿಷ್ಠ 7 ಅಡಿ ಎತ್ತರದಲ್ಲಿರಬೇಕು.
ಅದಲ್ಲದೆ ಸೀಲಿಂಗ್ ಫ್ಯಾನ್ ಮಾದರಿಗಳಲ್ಲಿ 29 ಇಂಚುಗಳಿಂದ 54 ಇಂಚುಗಳವರೆಗೆ ಲಭ್ಯವಿದೆ. ಇವುಗಳಲ್ಲಿ 52 ಇಂಚಿನ ಮಾದರಿಯ ಫ್ಯಾನ್ ಅತ್ಯುತ್ತಮ ಗಾಳಿಯನ್ನು ನೀಡುತ್ತದೆ. ಸೀಲಿಂಗ್ ಫ್ಯಾನ್‌ನ ತಿರುಗುವ ವೇಗವು ಉಪಕರಣದ ಗಾತ್ರ ಮತ್ತು ನಿರ್ಮಾಣದಂತಹ ಹಲವಾರು ಅಂಶಗಳ ಮೇಲೆ ಆಧಾರವಾಗಿರುತ್ತದೆ. ಸರಾಸರಿ, ಸೀಲಿಂಗ್ ಫ್ಯಾನ್ ಆರ್‌ಪಿಎಮ್ 50 ಮತ್ತು 100 ರ ನಡುವೆ ಇರುತ್ತದೆ ಎನ್ನುವುದು ತಿಳಿದುಕೊಳ್ಳಿ.
ಇನ್ನು 48 ಇಂಚಿನ ಫ್ಯಾನ್ 315 ಮತ್ತು 365 ಆರ್‌ಪಿಎಂ ನಡುವೆ ತಿರುಗುತ್ತದೆ. ಹಾಗೆಯೇ ವೇಗಕ್ಕೆ ಸಂಬಂಧಿಸಿದ ಇತರ ಪ್ರಮುಖ ಅಂಶವೆಂದರೆ ಸೀಲಿಂಗ್ ಫ್ಯಾನ್‌ನಲ್ಲಿರುವ ಕೆಪಾಸಿಟರ್‌ಗಳು ಫ್ಯಾನ್ ಅನ್ನು ವೇಗವಾಗಿ ತಿರುಗುವಂತೆ ಮಾಡುತ್ತದೆ ಮತ್ತು ಅದನ್ನು ಸರಾಗವಾಗಿ ಚಲಾಯಿಸಲು ಅವಕಾಶ ಮಾಡಿಕೊಡುತ್ತದೆ.
ಜೊತೆಗೆ ಫ್ಯಾನ್ ವೇಗವು ಕಡಿಮೆಯಿದ್ದರೆ ಗುಣಮಟ್ಟದ ಕೆಪಾಸಿಟರ್ ಅನ್ನು ಖರೀದಿ ಮಾಡಿ ಬದಲಾಯಿಸಿ. ಈ ಕಾರಣಗಳ ಹೊರತಾಗಿ, ಫ್ಯಾನ್ ಮೋಟಾರ್ ಸಮಸ್ಯೆಗಳು, ವೈರಿಂಗ್ ಸಮಸ್ಯೆಗಳು, ಇನ್‌ಸ್ಟಾಲಿಂಗ್ ದೋಷಗಳು ಸಹ ಫ್ಯಾನ್ ನಿಧಾನಗೊಳ್ಳಲು ಕಾರಣವಾಗಬಹುದು.
ಇನ್ನೊಂದು ವಿಷಯ ನೆನಪಿರಲಿ, ಕೆಲವರು ಫ್ಯಾನ್ ಸ್ಪೀಡ್ ಹೆಚ್ಚಾದ್ರೆ ವಿದ್ಯುತ್ ಬಿಲ್ ಹೆಚ್ಚಾಗುತ್ತೆ ಅಂದುಕೊಂಡಿರುತ್ತಾರೆ. ಇದು ತಪ್ಪು. ಫ್ಯಾನ್ ಸ್ಪೀಡ್ ಹೆಚ್ಚಿದ್ದರೂ, ಕಡಿಮೆಯಿದ್ದರೂ ಒಂದೇ ರೀತಿಯ ವ್ಯಾಟ್ ಎಳೆದುಕೊಳ್ಳುತ್ತದೆ.
ಇದನ್ನೂ ಓದಿ: ವೇತನ ನಿಯಮದಲ್ಲಿ ಮಹತ್ವದ ಬದಲಾವಣೆ: ಈ ತಿಂಗಳಿಂದಲೇ ಕೈ ಸೇರಲಿದೆ ಅಧಿಕ ವೇತನ – ಸರ್ಕಾರದಿಂದ ಮಹತ್ವದ ನಿರ್ಧಾರ !!