New Home: ಮನೆ ಖರೀದಿಸುವ ನಿರೀಕ್ಷೆಯಲ್ಲಿರೋರಿಗೆ ಭರ್ಜರಿ ಆಫರ್ ನೀಡಿದ ಸರ್ಕಾರ- ಅರ್ಜಿ ಹಾಕಲು ಮುಗಿಬಿದ್ದ ಜನ
New Home: ಜೀವನದಲ್ಲಿ ತಮ್ಮದೇ ಆದ ಒಂದು ಪುಟ್ಟ ಗೂಡು (New Home) ಕಟ್ಟಿಕೊಳ್ಳಬೇಕು ಎಂದು ಪ್ರತಿಯೊಬ್ಬ ಫ್ಯಾಮಿಲಿ ಮ್ಯಾನ್ ಗೆ ಆಸೆ ಇದ್ದೇ ಇರುತ್ತದೆ. ಆದರೆ ಆರ್ಥಿಕವಾಗಿ ಮಧ್ಯಮ ಹಾಗೂ ಕೆಳ ಮಧ್ಯಮ ವರ್ಗದ ವ್ಯಕ್ತಿಗಳಿಗೆ ಈ ಆಸೆ ಈಡೇರಿಸಲು ಸಾಧ್ಯವಾಗದೆ ಇರಬಹುದು. ಅದರಲ್ಲೂ ಸ್ಮಾರ್ಟ್ ನಗರಗಳಲ್ಲಿ ಜಾಗ ಅಥವಾ ಮನೆಯಂಥ ಆಸ್ತಿಗಳನ್ನು ಖರೀದಿ ಮಾಡೋ ನಿರ್ಧಾರ ಮಾಡಿದರೆ, ಸರ್ಕಾರಕ್ಕೆ ಹೆಚ್ಚಿನ ಹಣವನ್ನು ನೋಂದಣಿಯ ರೂಪದಲ್ಲಿ ಸುರಿಯಬೇಕು.
ಆದರೆ ದೂರದ ಪೋಲೆಂಡ್ ದೇಶ ಆಸ್ತಿ ಖರೀದಿಯ ವಿಚಾರದಲ್ಲಿ ಒಂದು ಹೊಸ ನಿರ್ಧಾರ ಮಾಡಿದೆ. ಈ ದೇಶದಲ್ಲಿ ಮೊದಲ ಬಾರಿಗೆ ಯಾರಾದರೂ ಮನೆ ಖರೀದಿ ಮಾಡಿದಲ್ಲಿ ಅವರಿಗೆ ಆಸ್ತಿ ತೆರಿಗೆ ವಿನಾಯಿತಿಯನ್ನು ಘೋಷಣೆ ಮಾಡಿದೆ. ಯುವ ಜನಾಂಗ ಹಾಗೂ ಬಡವರಿಗೆ ಮನೆಗಳು ಸಿಗಬೇಕು. ಸ್ವಂತ ಸೂರು ಅವರದು ಕೂಡ ಆಗಬೇಕು ಎನ್ನುವ ನಿಟ್ಟಿನಲ್ಲಿ ಪೋಲೆಂಡ್ ಸರ್ಕಾರ ಈ ನಿರ್ಧಾರ ಮಾಡಿದೆಯಂತೆ.
ಹೌದು, ಪೋಲೆಂಡ್ ಮೊದಲ ಬಾರಿಗೆ ಗೃಹ ಖರೀದಿದಾರರಿಗೆ 2% ವಹಿವಾಟು ತೆರಿಗೆ ವಿನಾಯಿತಿಯನ್ನು ಪರಿಚಯಿಸಿದೆ. ಈ ವಿನಾಯಿತಿಯು ತಮ್ಮ ಮೊದಲ ಮನೆಯನ್ನು ಖರೀದಿಸಲು ಪ್ರಯತ್ನಿಸುತ್ತಿರುವ ಯುವಜನರ ಮೇಲಿನ ಹಣಕಾಸಿನ ಹೊರೆಯನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿದೆ. ಇದು ಸೆಕೆಂಡರಿ ಮಾರುಕಟ್ಟೆಯಲ್ಲಿ ಎಲ್ಲಾ ಮೊದಲ ಬಾರಿಗೆ ಖರೀದಿದಾರರಿಗೆ ಅನ್ವಯಿಸುತ್ತದೆ.
ಉದಾಹರಣೆಗೆ, ಯಾರಾದರೂ 500,000 ಜೋಲ್ಟಿ (€111,940) ಮೌಲ್ಯದ ಆಸ್ತಿಯನ್ನು ಖರೀದಿಸಿದರೆ, ಅವರು 10,000 ಜೋಲ್ಟೆ (€ 2,239 ) ವರೆಗೆ ವಿನಾಯಿತಿ ಗಳಿಸಬಹುದು. ಆಸ್ತಿಯ ಮೌಲ್ಯದೊಂದಿಗೆ ತೆರಿಗೆ ವಿನಾಯಿತಿ ಮೌಲ್ಯ ಕೂಡ ಹೆಚ್ಚಾಗುತ್ತದೆ. ಭಾರತೀಯ ರೂಪಾಯಿ ಲೆಕ್ಕಾಚಾರದಲ್ಲಿ ಹೇಳುವುದಾದರೆ, 1 ಕೋಟಿ ರೂಪಾಯಿ ಆಸ್ತಿಯನ್ನು ಖರೀದಿ ಮಾಡಿದಲ್ಲಿ, 2 ಲಕ್ಷ ರೂಪಾಯಿ ತೆರಿಗೆ ವಿನಾಯಿತಿ ಇವರಿಗೆ ಸಿಗಲಿದೆ.
ಇನ್ನು 2024ರ ಜನವರಿ 1 ರಿಂದ, 6% ವಹಿವಾಟು ತೆರಿಗೆಯನ್ನು ವೈಯಕ್ತಿಕವಾಗಿ ಆರನೇ ಅಥವಾ ಹೆಚ್ಚಿನ ಕಟ್ಟಡವನ್ನು ಖರೀದಿಸುವುದರ ಮೇಲೆ ವಿಧಿಸಲಾಗುತ್ತದೆ. ಈ ತೆರಿಗೆ ಹೆಚ್ಚಳವು ಬೃಹತ್ ಆಸ್ತಿಯ ಖರೀದಿಗಳನ್ನು ಮತ್ತು ವಸತಿ ಮಾರುಕಟ್ಟೆಯಲ್ಲಿ ನಿರ್ದಿಷ್ಟ ಹೂಡಿಕೆಯನ್ನು ಪ್ರೋತ್ಸಾಹಿಸಲು ಉದ್ದೇಶಿಸಲಾಗಿದೆ.
ಒಟ್ಟಿನಲ್ಲಿ ಪೋಲೆಂಡ್ ದೇಶದ ಪ್ರತಿಯೊಬ್ಬ ನಾಗರೀಕ ನಿರ್ದಿಷ್ಟ ಆಸ್ತಿ ಹೂಡಿಕೆಗಳನ್ನು ಪ್ರೋತ್ಸಾಹಿಸುವ ನಡುವೆ ಸಮತೋಲನವನ್ನು ಸಾಧಿಸುವ ಗುರಿಯನ್ನು ಹೊಂದಲು ಈ ನಿರ್ಧಾರ ಕೈಗೊಳ್ಳಲಾಗಿದೆ.