Uttar Pradesh: ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಶಿಕ್ಷಕಿಗೆ ವಿದ್ಯಾರ್ಥಿನಿಯರ ಸಮ್ಮುಖದಲ್ಲೇ ತ್ರಿವಳಿ ತಲಾಖ್ ನೀಡಿದ ಗಂಡ ! ಆಮೇಲೇನಾಯ್ತು?
Uttar Pradesh news School teacher given 'triple talaq' by husband in front of students
Uttar Pradesh: ಪತಿಯೊಬ್ಬ ಶಾಲೆಯಲ್ಲಿ ಪಾಠ ಮಾಡುತ್ತಿದ್ದ ಆತನ ಪತ್ನಿ ಶಿಕ್ಷಕಿಗೆ ವಿದ್ಯಾರ್ಥಿನಿಯರ ಸಮ್ಮುಖದಲ್ಲೇ ತ್ರಿವಳಿ ತಲಾಖ್ ನೀಡಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಬಾರಾಬಂಕಿ ಜಿಲ್ಲೆಯಲ್ಲಿ ನಡೆದಿದೆ. ಈ ಬಗ್ಗೆ ಪತ್ನಿ ಶಿಕ್ಷಕಿ ದೂರು ನೀಡಿದ್ದು, ಆರೋಪಿ ಪತಿ ಮೊಹಮ್ಮದ್ ಶಕೀಲ್ ಎಂಬಾತನ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೂರು ವರ್ಷಗಳ ಹಿಂದೆ ಖಾಸಗಿ ಶಾಲೆಯ ಶಿಕ್ಷಕಿ (teacher) ಹಾಗೂ ಶಕೀಲ್ ಇವರಿಬ್ಬರ ವಿವಾಹ (marriage) ನಡೆದಿದ್ದು, ಶಕೀಲ್ ಪತ್ನಿಗೆ ತಿಳಿಸದೇ ಸೌದಿ ಅರೇಬಿಯಾಗೆ ತೆರಳಿದ್ದರು. ಅಲ್ಲದೆ, ಪತಿ ಸಹಿತ ಅತ್ತೆ ಮನೆಯವರು ಮಹಿಳೆಯನ್ನು ವರದಕ್ಷಿಣೆಗಾಗಿ ಪೀಡಿಸುತ್ತಿದ್ದರು. ವರದಕ್ಷಿಣೆ (dowry) ತರದಿದ್ದರೆ ಮನೆಯಿಂದ ಹೊರಹಾಕುವುದಾಗಿ ಬೆದರಿಸಿ, ಮಹಿಳೆಯನ್ನು ತವರು ಮನೆಗೆ ಕಳುಹಿಸಿದ್ದರು ಎಂದು ಮಹಿಳೆ ದೂರಿನಲ್ಲಿ ಆರೋಪಿಸಿದ್ದಾರೆ.
ಅಂದಿನಿಂದ ತವರು ಮನೆಯಲ್ಲೇ ಇದ್ದುಕೊಂಡು ಮಹಿಳೆ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದರು. ಇದೀಗ ಶಿಕ್ಷಕಿಯ ಪತಿ ಸೌದಿ ಅರೇಬಿಯಾದಿಂದ ಹಿಂದಿರುಗಿದ್ದು, ಬಂದಾತ ಆಕೆಯ ತಾಯಿಯ ಮನೆಗೆ ಬಂದು ತನ್ನೊಂದಿಗೆ ಮನೆಗೆ ಹಿಂದಿರುಗುವಂತೆ ಹೇಳಿದ್ದಾನೆ. ತಕ್ಷಣ ಹಿಂತಿರುಗಲು ಸಾಧ್ಯವಿಲ್ಲ ಎಂದಿದ್ದಕ್ಕೆ ಮಹಿಳೆ ಶಾಲೆಯಲ್ಲಿ ಪಾಠ ಮಾಡುತ್ತಿರುವ ವೇಳೆ ಏಕಾಏಕಿ ಶಾಲೆಗೆ ಬಂದು ವಿದ್ಯಾರ್ಥಿನಿಯರ ಸಮ್ಮುಖದಲ್ಲೇ ತ್ರಿವಳಿ ತಲಾಖ್ ನೀಡಿದ್ದಾನೆ ಎನ್ನಲಾಗಿದೆ.