Cleaning Gas Stove: ಜಿಡ್ಡುಗಟ್ಟಿದ ಗ್ಯಾಸ್ ಸ್ಟವ್- ಗ್ಯಾಸ್ ಬರ್ನರ್ ಫಳಫಳ ಹೊಳೆಯುವಂತೆ ಮಾಡುವ ಸುಲಭ ಟಿಪ್ಸ್ ಇಲ್ಲಿದೆ!!!
Lifestyle kitchen tips gas stove cleaning tips Simple tips to clean your gas stove and burners at home
Cleaning Gas Stove: ಇಂದಿನ ದಿನದಲ್ಲಿ ಗ್ಯಾಸ್ ಸಿಲಿಂಡರ್ (Gas cylinder) ಇಲ್ಲದಿರುವ ಮನೆಯೇ ಇರಲಿಕ್ಕಿಲ್ಲ. ಗ್ಯಾಸ್ ಸಿಲಿಂಡರ್ ಇದ್ದರೆ ಸಾಲದು ಸ್ಟವ್ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಹೆಚ್ಚಾಗಿ ಗ್ಯಾಸ್ ಸ್ಟವ್ ಬಳಸಿ ಅಡುಗೆ ಮಾಡುವ ಸಂದರ್ಭದಲ್ಲಿ, ಅಕ್ಕ ಪಕ್ಕದಲ್ಲಿ ಅಡುಗೆ ಎಣ್ಣೆ, ಇತ್ಯಾದಿ ಸುರಿದು ಹಾಗೆಯೇ ದಪ್ಪಗೆ ಸ್ಟವ್ ಮೇಲೆ ಅಂಟಿಕೊಂಡು ಬಿಡುತ್ತದೆ. ಕೆಲವೊಮ್ಮೆ ಅವಸರದಲ್ಲಿರುವಾಗ, ಇದನ್ನು ಆ ಕೂಡಲೇ ಸ್ವಚ್ಚ ಮಾಡಿಟ್ಟು ಕೊಳ್ಳಲು ಸಾಧ್ಯವಾಗುವುದಿಲ್ಲ. ನಂತರ ದಿನಗಳಲ್ಲಿ ಈ ಕಲೆಗಳು ಗ್ಯಾಸ್ ಸ್ಟವ್ ನಲ್ಲಿ ಹಾಗೆಯೇ ಉಳಿದು ಬಿಡುತ್ತದೆ. ಹಾಗಿದ್ದಾಗ ಜಿಡ್ಡುಗಟ್ಟಿದ ಗ್ಯಾಸ್ ಸ್ಟವ್, ಗ್ಯಾಸ್ ಬರ್ನರ್ ಫಳಫಳ ಹೊಳೆಯುವಂತೆ (Cleaning Gas Stove) ಮಾಡುವ ಸುಲಭ ಟಿಪ್ಸ್ ಇಲ್ಲಿದೆ ನೋಡಿ!!!
ವಿನೆಗರ್ : ಬರ್ನರ್ ಮೇಲೆ ಕೆಲವು ಹನಿ ವಿನೆಗರ್ ಸಿಂಪಡಿಸಿ, ಅದನ್ನು ಸ್ವಲ್ಪ ಹೊತ್ತು ಹಾಗೆ ಬಿಡಿ. ನಂತರ ಸ್ಪಂಜಿನ ಸಹಾಯದಿಂದ ಉಜ್ಜಿ. ಡಿಶ್ ವಾಶ್‌ನಿಂದ ಅದನ್ನು ಚೆನ್ನಾಗಿ ತೊಳೆಯಿರಿ. ವಾರದಲ್ಲಿ ಎರಡು ಬಾರಿ ಈ ವಿಧಾನ ಅನುಸರಿಸಿ.
ನಿಂಬೆರಸ: ಬರ್ನರ್ ಅನ್ನು ಕೆಲವು ಸೆಕೆಂಡುಗಳ ಕಾಲ ಬಿಸಿ ಮಾಡಿ. ನಂತರ ಅದರ ಮೇಲೆ ನಿಂಬೆ ಸಿಪ್ಪೆ ಮತ್ತು ರಸವನ್ನು ಉಜ್ಜಿ. ಕೆಲವು ನಿಮಿಷಗಳ ಕಾಲ ನಿಂಬೆರಸ ಅದರಲ್ಲಿ ಉಳಿಯುವಂತೆ ಮಾಡಿ. ನಂತರ ಡಿಶ್ ವಾಶರ್‌ನಿಂದ ತೊಳೆಯಿರಿ.
ಈರುಳ್ಳಿ : ಈರುಳ್ಳಿ ತುಂಡುಗಳನ್ನು 20 ನಿಮಿಷಗಳ ಕಾಲ ನೀರಿನಲ್ಲಿ ಚೆನ್ನಾಗಿ ಕುದಿಸಿ. ಆ ನೀರನ್ನು ತಣ್ಣಗಾಗಲು ಬಿಡಿ. ಸ್ಪಂಜಿನ ಸಹಾಯದಿಂದ ಜಿಡ್ಡಿನ ಕಲೆಗಳನ್ನು ಸ್ವಚ್ಛ ಮಾಡಿ. ನಂತರ ನೋಡಿ ಗ್ಯಾಸ್ ಸ್ಟವ್ ಹಾಗೂ ಬರ್ನರ್ ಪಳ ಪಳ ಹೊಳೆಯುತ್ತದೆ.
ಅಡುಗೆ ಸೋಡಾ: ನಿಂಬೆ ರಸ ಮತ್ತು ವಿನೆಗರ್ ಜೊತೆಗೆ ಅಡುಗೆ ಸೋಡಾವನ್ನು ಮಿಶ್ರಣ ಮಾಡಿ. ಗ್ಯಾಸ್ ಓವನ್ ಮತ್ತು ಬರ್ನರ್ ಅನ್ನು ಈ ಮಿಶ್ರಣದಿಂದ ಸ್ವಚ್ಛವಾದ ಬಟ್ಟೆಯಿಂದ ಒರೆಸಿ. ವಾರಕ್ಕೆರಡು ಬಾರಿ ಈ ರೀತಿ ಮಾಡಿದರೆ ಒಲೆಯ ಮೇಲಿರುವ ಜಿಡ್ಡಿನಿಂದ ಸುಟ್ಟ ಕಲೆಗಳು ಮಾಯವಾಗುತ್ತೆ.
ಬಿಸಿ ನೀರು & ಉಪ್ಪು: ಗ್ಯಾಸ್ ಸ್ಟವ್- ಗ್ಯಾಸ್ ಬರ್ನರ್ ಫಳಫಳ ಹೊಳೆಯುವಂತೆ ಮಾಡಲು ಬಿಸಿ ನೀರಿಗೆ ಒಂದು ಚಮಚ ಉಪ್ಪು ಹಾಕಿ. ಬರ್ನರ್ ಗಳನ್ನು ಅದರಲ್ಲಿ ಹಾಕಿ, 15-20 ನಿಮಿಷ ನೆನೆಸಿಡಿ. ಸ್ವಲ್ಪ ತಣ್ಣಗಾದ ನಂತರ ಬರ್ನರ್‌ಗಳನ್ನು ತೆಗೆದು ಡಿಶ್ ವಾಷರ್ ಅಥವಾ ಸೋಪಿನಿಂದ ಉಜ್ಜಿದರೆ ಬರ್ನರ್‌ಗಳು ಶುಚಿಯಾಗುತ್ತದೆ.
ಇದನ್ನೂ ಓದಿ: Bengaluru: ಮದ್ಯದ ಅಮಲಿನಲ್ಲಿ ಬಟ್ಟೆ ಬಿಚ್ಚಿ ವಿದ್ಯಾರ್ಥಿಗಳ ಜೊತೆ ಅನುಚಿತ ವರ್ತನೆ ತೋರಿದ ಶಿಕ್ಷಕ!!!