Important information:ನಂದಿಬೆಟ್ಟ ವೀಕ್ಷಿಸಲು ಹೋಗುವವರಿಗೆ ಹೊಸ ರೂಲ್ಸ್ ಜಾರಿ!!! ಇನ್ಮುಂದೆ ಇದನ್ನು ಪಾಲಿಸಲೇಬೇಕು!
Important information for tourist About Nandi hills new rules here is complete detail
Nandi Hills: ಪ್ರವಾಸಿಗರೇ ಗಮನಿಸಿ(For tourists attention), ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ನಂದಿಬೆಟ್ಟಕ್ಕೆ (Nandi Hills) ಇನ್ಮುಂದೆ ಖಾಸಗಿ ಮತ್ತು ವೈಯಕ್ತಿಕ ವಾಹನಗಳ ಪ್ರವೇಶವನ್ನು ನಿಷೇಧಿಸಲು ಕರ್ನಾಟಕ ಸರ್ಕಾರ ತೀರ್ಮಾನ ಕೈಗೊಂಡಿದೆ.
ನಂದಿ ಬೆಟ್ಟವನ್ನು ಪ್ರವಾಸಿಗರಿಗೆ(Tourists)ಸುರಕ್ಷಿತ ಪ್ರವಾಸಿ ತಾಣವನ್ನಾಗಿ ಮಾಡುವ ದೆಸೆಯಲ್ಲಿ ಪ್ರವಾಸೋದ್ಯಮ ಇಲಾಖೆಯು ಖಾಸಗಿ ವಾಹನಗಳು ಬೆಟ್ಟಕ್ಕೆ ಪ್ರವೇಶಿಸುವುದನ್ನು ನಿಷೇಧಿಸಲು ಮುಂದಾಗಿದೆ. ಬೆಂಗಳೂರಿನಿಂದ 60 ಕಿ.ಮೀ ದೂರದಲ್ಲಿರುವ ಪ್ರವಾಸಿ ತಾಣ ನಂದಿಬೆಟ್ಟಕ್ಕೆ ವಾರಾಂತ್ಯದ ಸಂದರ್ಭ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ. ಇದರಿಂದಾಗಿ ಟ್ರಾಫಿಕ್ ಸಮಸ್ಯೆ (Traffic Problems)ಉಂಟಾಗುತ್ತಿದ್ದು, ಈ ಹಿನ್ನೆಲೆ ಪ್ರವಾಸಿಗರಿಗಾಗಿ ಎಲೆಕ್ಟ್ರಾನಿಕ್ ಬಸ್ಗಳನ್ನು (Electronic Bus)ಕಲ್ಪಿಸುವ ಕುರಿತು ಚಿಂತನೆ ನಡೆಯುತ್ತಿದೆ.
ಈ ಯೋಜನೆಯು ಪ್ರವಾಸೋದ್ಯಮ ಇಲಾಖೆ ಯೋಜನೆಯ ಒಂದು ಭಾಗವಾಗಿದ್ದು, ಮುಂದಿನ 6-8 ತಿಂಗಳಲ್ಲಿ ನಂದಿ ಬೆಟ್ಟವನ್ನು ಒಂದು ದಿನದ ಪ್ರವಾಸೋದ್ಯಮ ತಾಣವನ್ನಾಗಿ ಅಭಿವೃದ್ಧಿಪಡಿಸುವ ಗುರಿಯನ್ನು ಒಳಗೊಂಡಿದೆ. ಇದರಿಂದಾಗಿ ನಂದಿಬೆಟ್ಟ ಸುತ್ತಮುತ್ತಲಿನ ಪ್ರದೇಶದಲ್ಲಿ ಖಾಸಗಿ ಮತ್ತು ವೈಯಕ್ತಿಕ ವಾಹನಗಳ ಸಂಚಾರ ಕಡಿಮೆ ಮಾಡುವ ಮುಖಾಂತರ ಪ್ರವಾಸಿಗರಿಗೆ ಪ್ರಕೃತಿಯ ರಮಣೀಯ ಸೌಂದರ್ಯ ಮತ್ತು ಐತಿಹಾಸಿಕ ಸ್ಥಳದ ಮಹತ್ವವನ್ನು ಹೆಚ್ಚಿಸಲು ಸುರಕ್ಷಿತ ವಾತಾವರಣವನ್ನು ಸೃಷ್ಟಿಸಲು ಪ್ರವಾಸೋದ್ಯಮ ಇಲಾಖೆ ಮುಂದಾಗಿದೆ. ಹೀಗಾಗಿ, ಖಾಸಗಿ ವಾಹನಗಳ ಬದಲಾಗಿ ಪ್ರವಾಸಿಗರನ್ನು ಬೆಟ್ಟಕ್ಕೆ ತಲುಪಿಸಲು ಎಲೆಕ್ಟ್ರಾನಿಕ್ ಬಸ್ಗಳನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆ.
ನಂದಿ ಬೆಟ್ಟವನ್ನು ಅಪಘಾತ ವಲಯವೆಂದು ಈಗಾಗಲೇ ಪರಿಗಣಿಸಲಾಗಿರುವ ಹಿನ್ನೆಲೆ ಹೊಸ ವರ್ಷ ಹಾಗೂ ಇನ್ನಿತರ ರಜಾ ದಿನಗಳ ಸಂದರ್ಭ ಬೆಟ್ಟವನ್ನು ಸಾರ್ವಜನಿಕರ ಪ್ರವೇಶಕ್ಕೆ ಸಂಪರ್ಕಿಸುವ 2 ಕಿಮೀ ವ್ಯಾಪ್ತಿಯಲ್ಲಿ ಪೊಲೀಸರು ಈಗಾಗಲೇ ಬೈಕ್ಗಳು ಮತ್ತು ನಾಲ್ಕು ಚಕ್ರದ ವಾಹನಗಳನ್ನು ನಿಷೇಧ ಹೇರಿದ್ದಾರೆ. ನಂದಿ ಬೆಟ್ಟಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ವಿಶೇಷತೆಯೊಂದು ಕಾದಿದ್ದು, ಕೇಬಲ್ ಕಾರು ಆಯ್ಕೆ ಕೂಡ ಇರಲಿದೆಯಂತೆ. ಒಂದು ವರದಿಯ ಪ್ರಕಾರ ಕೇಬಲ್ ಕಾರಿನಲ್ಲಿ ಪ್ರಯಾಣಿಸಲು ಪ್ರತಿ ವ್ಯಕ್ತಿಗೆ ಸುಮಾರು 250-300 ರೂ. ಯಿರುವ ಸಾಧ್ಯತೆಯಿದೆ.
ಇದನ್ನೂ ಓದಿ: BPL Card Holders: ಹೊಸ ಬಿಪಿಎಲ್ ಕಾರ್ಡ್ ಇನ್ನೂ ಸಿಗೋದು ಡೌಟ್!! ಕಾರಣವೇನು ಗೊತ್ತಾ