Awareness Programme: ದ್ವಿಚಕ್ರ ವಾಹನ ಸವಾರರೇ ಇತ್ತ ಗಮನಿಸಿ: ಹೆಲ್ಮೆಟ್ ಧರಿಸದಿದ್ದವರ ಮೇಲೆ ಕ್ಯಾಮರಾ ಕಣ್ಣು!! ಬೀಳುತ್ತೆ ನಿಮ್ಮ ಮೇಲೆ ಭಾರೀ ದಂಡ, ಕೇಸು!!!

Karnataka news awareness programme camera in rural area case registered if not wearing helmet

Awareness Programme:ಸರ್ಕಾರ(Government )ಎಷ್ಟೇ ರೂಲ್ಸ್(Rules)ಮಾಡಿದರು ಕೂಡ ಕ್ಯಾರೇ ಎನ್ನದೆ ರೂಲ್ಸ್ ಬ್ರೇಕ್ ಮಾಡಿ.. ನಾವಿರೋದೆ ಹಿಂಗೆ ಅನ್ನೋ ರೀತಿ ಸಂಚಾರಿ ಪೊಲೀಸರನ್ನು ಕಂಡ ಕೂಡಲೇ ಜೂಟ್ ಹೇಳುವವರೇ ಹೆಚ್ಚು. ಈ ರೀತಿ ಸಂಚಾರಿ ನಿಯಮಗಳನ್ನು ಪಾಲಿಸದೆ ಅಪಾಯಗಳಿಗೆ ಆಹ್ವಾನ ಕೊಟ್ಟಂತೆ ಆಗಿರುವ ಅನೇಕ ಪ್ರಸಂಗಗಳು ದಿನಂಪ್ರತಿ ವರದಿಯಾಗುತ್ತಲೇ ಇರುತ್ತವೆ.

ಹೆಚ್ಚುತ್ತಿರುವ ಅಪಘಾತ (Road Accident)ನಿಯಂತ್ರಣ ಮಾಡುವ ಸಲುವಾಗಿ ಪೊಲೀಸ್‌ ಇಲಾಖೆ ಮಾಸ್ಟರ್ ಪ್ಲಾನ್ ಮಾಡಿದೆ (Awareness Programme). ಹೆಲ್ಮೆಟ್ (Helmet )ಧರಿಸದೆ ಇರುವ ಮಂದಿಗೆ ಬಿಸಿ ಮುಟ್ಟಿಸುವ ಸಲುವಾಗಿ ಪೋಲಿಸ್ ಇಲಾಖೆ ಹೊಸ ಹೆಜ್ಜೆ ಇರಿಸಲು ಮುಂದಾಗಿದೆ. ಹೊಸ ಟೆಕ್ನಾಲಜಿ (New Technology)ಬಳಸಿಕೊಂಡು ತಾಲೂಕಿನ ಗ್ರಾಮಾಂತರ ಪ್ರದೇಶದ ಪ್ರಮುಖ ಗ್ರಾಮಗಳ ವೃತ್ತಗಳಲ್ಲಿ ಎಪಿಆರ್‌ ಕ್ಯಾಮರಾ ಅಳವಡಿಸಿ ಹೆಲ್ಮೆಟ್‌ ಇಲ್ಲದೆ ಸಂಚರಿಸುವ ದ್ವಿಚಕ್ರ ವಾಹನ (Two – Wheeler Vechicle)ನಂಬರ್‌ ಆಧರಿಸಿ ಕೇಸ್‌ ದಾಖಲಿಸಲು ಶಿರಾ ಗ್ರಾಮಾಂತರ ಸಿಪಿಐ ಕೆ .ಆರ್‌. ರಾಘವೇಂದ್ರ ಮುಂದಾಗಿದ್ದಾರೆ.

ಶಿರಾ ತಾಲೂಕಿನ ಬರಗೂರು ಗ್ರಾಮದಲ್ಲಿ ಪಟ್ಟನಾಯಕನಹಳ್ಳಿ ಪೊಲೀಸ್‌ ಠಾಣಾ ವತಿಯಿಂದ ರಸ್ತೆ ಸುರಕ್ಷತಾ ಅಭಿಯಾನ ನಡೆಸಿ ಜನರಿಗೆ ಅರಿವು ಮೂಡಿಸುವ(Awareness Programme)ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಳೆದ ಮೂರು ವರ್ಷದಿಂದ ಶಿರಾ ಗ್ರಾಮಾಂತರ ಪ್ರದೇಶದಲ್ಲಿ ಹೆಲ್ಮೆಟ್‌ ಇಲ್ಲದೆ ಪ್ರಯಾಣ ಮಾಡಿ ಅಪಘಾತ ಸಂಭವಿಸಿ ಸುಮಾರು 22 ಮಂದಿ ವಾಹನ ಅಪಘಾತದಲ್ಲಿ ಅಸುನೀಗಿದ್ದಾರೆ. ಗ್ರಾಮೀಣ ಪ್ರದೇಶದಲ್ಲಿ ರೈತರು, ಜನಸಾಮಾನ್ಯರು ನಿತ್ಯದ ಚಟುವಟಿಕೆಗಳಿಗೆ ದ್ವಿಚಕ್ರ ವಾಹನವನ್ನು ಅವಲಂಬಿಸಿರುವುದರಿಂದ ಸುರಕ್ಷತಾ ಕ್ರಮಗಳನ್ನು ಅನುಸರಿಸಿದರೆ ರಸ್ತೆ ಅಪಘಾತ ತಡೆಯುವುದು ಸುಲಭ!

ಪೊಲೀಸ್‌ ಠಾಣಾ ವತಿಯಿಂದ ಬರಗೂರು ಗ್ರಾಮದಲ್ಲಿ ಪಟ್ಟನಾಯಕನಹಳ್ಳಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಅಭಿಯಾನ ಕಾರ್ಯಕ್ರಮದ ಉದ್ಘಾಟನೆ ಬಳಿಕ ಗ್ರಾಮಾಂತರ ಸಿಪಿಐ ಕೆ .ಆರ್‌. ರಾಘವೇಂದ್ರ ಅವರು ಮಾತನಾಡಿದ್ದಾರೆ. ಹೆಲ್ಮೆಟ್‌ ಇಲ್ಲದೆ ಮೂರು ಬಾರಿ ವಾಹನ ಚಾಲನೆ ಮಾಡುವುದು ನಮ್ಮ ಗಮನಕ್ಕೆ ಬಂದರೆ ಅಂತಹ ವಾಹನ ಮಾಲೀಕರ ಡಿಎಲ್‌ ಮತ್ತು ಆರ್‌ಸಿ ರದ್ದು ಮಾಡಲು ಪೋಲಿಸ್‌ ಇಲಾಖೆ ಕ್ರಮ ಕೈಗೊಂಡಿದೆ ಎಂದು ತಿಳಿಸಿದ್ದಾರೆ.ಇದೇ ವೇಳೆ 30 ಪೊಲೀಸರಿಗೆ ಉಚಿತವಾಗಿ ಹೆಲ್ಮೆಟ್‌ ವಿತರಣೆ ಮಾಡುವ ಮೂಲಕ ಸಂಚಾರಿ ನಿಯಮ ಪೊಲೀಸ್‌ ಇಲಾಖೆಯಿಂದಲೇ ಪಾಲನೆಯಾಗಲಿ ಎಂದು ಪೊಲೀಸರಿಗೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: LPG ಗ್ಯಾಸ್ ಸಿಲಿಂಡರ್ ಬೆಲೆ ಭಾರೀ ಇಳಿಕೆ! BPL ಕಾರ್ಡ್ ದಾರರಿಗೆ ಮತ್ತೊಂದು ಗುಡ್ ನ್ಯೂಸ್ ಕೊಟ್ಟ ಸರ್ಕಾರ!

Leave A Reply

Your email address will not be published.