Clothes Cleaning Tips: ಬಿಳಿ ಬಟ್ಟೆಯ ಕಲೆಗಳು ಈಸಿಯಾಗಿ ಮಾಯ ಮಾಡಬಹುದು; ಈ ಟಿಪ್ಸ್ ಫಾಲೋ ಮಾಡಿ ಸಾಕು
Clothes Cleaning Tips: ಅನೇಕ ಜನರು ಬಿಳಿ ಬಟ್ಟೆ ಧರಿಸುವುದನ್ನು ತಪ್ಪಿಸುತ್ತಾರೆ. ಯಾಕೆಂದರೆ ಕಲೆ ಹಿಡಿದ ನಂತರ ಅದು ಹಾಳಾಗುತ್ತದೆ ಎಂಬ ಸಣ್ಣ ಕಾರಣಕ್ಕಾಗಿ. ಇನ್ನು ಬಿಳಿ ಬಟ್ಟೆಯಿಂದ ಕಲೆ ತೆಗೆದುಹಾಕಲು ನಾವು ವಿವಿಧ ದುಬಾರಿ ಉತ್ಪನ್ನಗಳನ್ನು ಬಳಸುತ್ತೇವೆ.
ಆದರೆ ಬಿಳಿ ಶರ್ಟ್‌ನಿಂದ ಕಲೆಗಳನ್ನು ಸುಲಭವಾಗಿ ತೆಗೆಯಲು ನಿಮಗೆ ಇಲ್ಲಿ ಸಲಹೆ (Clothes Cleaning Tips) ನೀಡಲಾಗಿದೆ.
ಹೌದು, ನೀವು ಕಾಸ್ಟಿಕ್ ಸೋಡಾವನ್ನು ಬಳಸಿ ಬಿಳಿ ಬಟ್ಟೆ ಕಲೆ ತೆಗೆಯಬಹುದು. ಕಾಸ್ಟಿಕ್ ಸೋಡಾದ ರಾಸಾಯನಿಕ ಹೆಸರು ಸೋಡಿಯಂ ಹೈಡ್ರಾಕ್ಸೈಡ್. ಇದನ್ನು ಲೈ ಎಂದೂ ಕರೆಯುತ್ತಾರೆ. ಮಾರುಕಟ್ಟೆಯಲ್ಲಿ ಎರಡು ರೀತಿಯ ಕಾಸ್ಟಿಕ್ ಸೋಡಾ ಲಭ್ಯವಿದೆ.
ಆದರೆ ಕಾಸ್ಟಿಕ್ ಸೋಡಾ ಬಳಸುವಾಗ ಚರ್ಮಕ್ಕೆ ಹಾನಿಯಾಗಬಹುದು ಆದ್ದರಿಂದ ಅದನ್ನು ಕೈಗಳಿಂದ ಮುಟ್ಟಬಾರದು. ನೀವು ಕಾಸ್ಟಿಕ್ ಸೋಡಾ ಬಳಸುವ ಮೊದಲು ಯಾವಾಗಲೂ ಕೈಗವಸುಗಳನ್ನು ಧರಿಸಿ. ಹಾಗೆಯೇ ಕಣ್ಣುಗಳನ್ನು ಮುಟ್ಟದಂತೆ ವಿಶೇಷ ಕಾಳಜಿ ವಹಿಸಬೇಕು. ಕಾಸ್ಟಿಕ್ ಸೋಡಾವನ್ನು ವಿಶೇಷವಾಗಿ ಮಕ್ಕಳಿಂದ ದೂರವಿಡಬೇಕು.
ಕಾಸ್ಟಿಕ್ ಸೋಡಾವನ್ನು ಬಳಸುವ ವಿಧಾನ :
ಬಕೆಟ್‌ನಲ್ಲಿ ನೀರನ್ನು ತೆಗೆದುಕೊಂಡು ಸ್ವಲ್ಪ ಸರ್ಫ್ ಹಾಕಿ ನಂತರ ಅದರಲ್ಲಿ ಎರಡು-ಮೂರು ಚಮಚ ಕಾಸ್ಟಿಕ್ ಸೋಡಾವನ್ನು ಸೇರಿಸಿ. ನಂತರ ಈ ದ್ರಾವಣದಲ್ಲಿ ಬಟ್ಟೆಯನ್ನು ಅದ್ದಿ ಮತ್ತು ಎರಡರಿಂದ ಮೂರು ಗಂಟೆಗಳ ಕಾಲ ಇರಿಸಿ. ನಂತರ ಸಾಮಾನ್ಯ ನೀರಿನಲ್ಲಿ ಬಟ್ಟೆಗಳನ್ನು ತೊಳೆಯಿರಿ. ಇದು ಬಟ್ಟೆಗಳನ್ನು ಹೊಸದರಂತೆ ಹೊಳೆಯುವಂತೆ ಮಾಡುತ್ತದೆ.
ಇನ್ನು ವಾಷಿಂಗ್ ಮೆಷಿನ್ ನಲ್ಲಿ ಬಟ್ಟೆ ಒಗೆಯಲು ಎರಡರಿಂದ ಮೂರು ಸ್ಪೂನ್ ಕಾಸ್ಟಿಕ್ ಸೋಡಾವನ್ನು ಡಿಟರ್ಜೆಂಟ್ ಪೌಡರ್ ಅಥವಾ ಲಿಕ್ವಿಡ್ ಡಿಟರ್ಜೆಂಟ್ ನೊಂದಿಗೆ ಮಿಶ್ರಣ ಮಾಡಿ. ಮೆಷಿನ್ ಆನ್ ಮಾಡಿ.
ಇನ್ನು ಸ್ಟೇನ್ ಮೇಲೆ ಹೈಡ್ರೋಜನ್ ಪೆರಾಕ್ಸೈಡ್ ಅನ್ನು ಉಜ್ಜಿಕೊಳ್ಳಿ ಮತ್ತು ನಂತರ ಸೋಪ್ ಮತ್ತು ಹೈಡ್ರೋಜನ್ ಪೆರಾಕ್ಸೈಡ್ ಅನ್ನು ನೀರಿನಲ್ಲಿ ಹಾಕಿ ಸ್ವಲ್ಪ ಸಮಯದವರೆಗೆ ನೆನೆಸಿ. 3 ಗಂಟೆಗಳ ನಂತರ ಉಗುರು ಬೆಚ್ಚಗಿನ ನೀರಿನಿಂದ ಬಟ್ಟೆಯನ್ನು ತೊಳೆಯಿರಿ. ಒಂದು ವೇಳೆ ಸ್ಟೇನ್ ಕಣ್ಮರೆಯಾಗದಿದ್ದರೆ, ನೀವು ಅದನ್ನು ಮತ್ತೆ ಬಳಸಬಹುದು.
ಇನ್ನು ನಿಂಬೆ ಮತ್ತು ಅಡಿಗೆ ಸೋಡಾ ಬಿಳಿ ಬಟ್ಟೆಗಳ ಕಲೆಗಳನ್ನು ತೆಗೆದುಹಾಕುವಲ್ಲಿ ಪರಿಣಾಮಕಾರಿಯಾಗಿದೆ. ಇದಕ್ಕಾಗಿ, 1 ಚಮಚ ಅಡಿಗೆ ಸೋಡಾ ಮತ್ತು 1-2 ಚಮಚ ನಿಂಬೆ ರಸವನ್ನು ಮಿಶ್ರಣ ಮಾಡಿ ಮತ್ತು ಅದನ್ನು ಕಲೆಗೆ ಹಚ್ಚಿ ಚೆನ್ನಾಗಿ ಉಜ್ಜಿಕೊಳ್ಳಿ. ಇದರ ನಂತರ ಸ್ವಲ್ಪ ಸಮಯದವರೆಗೆ ಇರಿಸಿ. ಒಂದು ಗಂಟೆ ನಂತರ ಬಟ್ಟೆಯನ್ನು ಹೊರತೆಗೆದು ಉಗುರು ಬೆಚ್ಚಗಿನ ನೀರಿನಿಂದ ತೊಳೆದರೆ, ಕಲೆಯು ಸುಲಭವಾಗಿ ಹೊರಬರುತ್ತದೆ.