Uttar Pradesh: ಹೊಲವನ್ನು ಮೇಕೆ ಹಾಳು ಮಾಡಿದ್ದಕ್ಕೆ, ಪಕ್ಕದ ಮನೆಯವನ ‘ಅದನ್ನೇ’ ಕಚ್ಚಿದ ವ್ಯಕ್ತಿ!

Uttarpradesh news farmers property damaged by goat

 

Uttar Pradesh: ಮೇಕೆ ಮುಟ್ಟದ ಸೊಪ್ಪಿಲ್ಲ. ಹಾಗಿರುವಾಗ ಸೊಗಸಾಗಿ ಬೆಳೆದ ಹೊಲವನ್ನು ಮೇಕೆ ಮೇಯದೇ ಬಿಡುತ್ತಾ. ಇದೀಗ ಹೊಲವನ್ನು ಹಾಳು ಮಾಡಿದ್ದಕ್ಕಾಗಿ ಜಮೀನಿನ ಒಡೆಯ ಪಕ್ಕದ ಮನೆಯವನ ಗುಪ್ತಾಂಗವನ್ನೇ ಕಚ್ಚಿದ ಘಟನೆ ನಡೆದಿದೆ.

ಹೌದು, ಉತ್ತರ ಪ್ರದೇಶದ (Uttar Pradesh) ಷಹಜಹಾನ್​ಪುರದ ರೋಜಾದಲ್ಲಿ ಈ ಘಟನೆ ನಡೆದಿದ್ದು, ರಾತ್ರಿ ಹೊತ್ತು ಪಕ್ಕದ ಮನೆಯವರ ಮೇಕೆಗಳು ಹೊಲದಲ್ಲಿ ಓಡಾಡಿ ಬೆಳೆಯನ್ನು ನಾಶಪಡಿಸಿದ್ದವು. ಈ ಕಾರಣಕ್ಕಾಗಿ 28 ವರ್ಷದ ವ್ಯಕ್ತಿಯೊಬ್ಬ ಪಕ್ಕದ ಮನೆಯವನ ಖಾಸಗಿ ಅಂಗವನ್ನು ಕಚ್ಚಿದ್ದಾನೆ.

ಸದ್ಯ ಗಾಯಗೊಂಡಿರುವ ಕುರಿ ಮಾಲೀಕನನ್ನು ಶಹಜಹಾನ್​ಪುರ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆತನಿಗೆ ನಾಲ್ಕು ಹೊಲಿಗೆಗಳನ್ನು ಹಾಕಲಾಗಿದ್ದು, ವೈದ್ಯರ ಪ್ರಕಾರ ಮೇಲ್ಮೈ ಗಾಯಗಳಷ್ಟೇ ಆಗಿದೆ, ಆಂತರಿಕ ನಾಳಗಳಿಗೆ ಯಾವುದೇ ಹಾನಿಯಾಗಿಲ್ಲ, ಕಾಲಾನಂತರದಲ್ಲಿ ರೋಗಿ ಗುಣಮುಖರಾಗುತ್ತಾರೆ ಎಂದು ತಿಳಿಸಿದ್ದಾರೆ.

ಮೇಕೆಗಳ ವಿಚಾರವಾಗಿ ಗಂಗಾರಾಮ್ ಸಿಂಗ್ ಜತೆಗೆ ಪದೇ ಪದೇ ಜಗಳವಾಗುತ್ತಿತ್ತು, ಈ ಬಾರಿ ಕೋಪ ತಾರಕಕ್ಕೇರಿತ್ತು, ಕೋಪದಲ್ಲಿ ತನ್ನನ್ನು ಕೆಳಗೆ ಒದ್ದು ಬೀಳಿಸಿ ಗುಪ್ತಾಂಗವನ್ನು ಕಚ್ಚಿದ್ದಾನೆ ಎಂದಿದ್ದಾರೆ. ಸದ್ಯ ರೋಜಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

 

Leave A Reply

Your email address will not be published.