Viral Video: ಮುಸ್ಲಿಂ ಜೋಡಿಯಿಂದ ‘ಜೈ ಶ್ರೀರಾಮ್’ ಘೋಷಣೆ! ವೀಡಿಯೋ ವೈರಲ್!
Viral video: ದಿನಂಪ್ರತಿ ಅದೆಷ್ಟೋ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುತ್ತದೆ. ಇದೀಗ, ವೈರಲ್(Viral Video)ಆದ ವೀಡಿಯೋವೊಂದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.
ಬೆಂಗಳೂರಿನಲ್ಲಿ(Bengaluru )ಮಾಡಿದ್ದಾರೆನ್ನಲಾದ ವಿಡಿಯೋದಲ್ಲಿ ಬುರ್ಖಾ(Burqa )ಧರಿಸಿದ ಯುವತಿ ಹಾಗೂ ನಮಾಜ್ ಮಾಡಲು ಬಳಕೆ ಮಾಡುವ ಟೋಪಿಯನ್ನು ಹಾಕಿಕೊಂಡಿದ್ದ ಯುವಕ ಜೈ ಶ್ರೀರಾಮ್(Jai Sri Ram)ಎಂದು ಘೋಷಣೆ ಕೂಗಿರುವ ವೀಡಿಯೋ ವೈರಲ್ ಆಗಿದೆ.
https://www.instagram.com/reel/CwH9PzGtc8Q/?igshid=MzRlODBiNWFlZA==
ಮುಸ್ಲಿಂ ಸಮುದಾಯದ ಜೋಡಿಯೊಂದು ಜೈ ಶ್ರೀರಾಮ್ ಎಂದು ಘೋಷಣೆ ಕೂಗಿದ್ದು, ಯುವತಿ(Girl )ಬುರ್ಖಾ ಧರಿಸಿ ಹಿಂದೆ ನಿಂತುಕೊಂಡಿರುವ ದೃಶ್ಯ ವಿಡಿಯೋದಲ್ಲಿ ಕಾಣಿಸುತ್ತದೆ. ಯುವಕ ಟೋಪಿ ಧರಿಸಿ ಮುಂದೆ ನಿಂತುಕೊಂಡು ಸೆಲ್ಫಿ ಮಾಡುತ್ತಾ ವೀಡಿಯೋ ಮಾಡಿಕೊಂಡಿದ್ದಾರೆ. ಇದರ ಜೊತೆಗೆ ಇಬ್ಬರು ಜೊತೆಯಾಗಿ ಜೈ ಶ್ರೀರಾಮ್, ಜೈ ಶ್ರೀರಾಮ್ ಎಂದು ಘೋಷಣೆ ಕೂಗಿರುವುದು ಕೇಳುತ್ತದೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದಂತೆ,ಮುಸ್ಲಿಂ ಸಮುದಾಯದ ಯುವಕರು ಮತ್ತು ಹಿರಿಯರು ಆಕ್ರೋಶ ಹೊರ ಹಾಕಿದ್ದು, ಬುರ್ಖಾ ಮತ್ತು ಟೋಪಿ ತೆಗೆದು ಏನಾದರು ಮಾತನಾಡುವಂತೆ ಮುಸ್ಲಿಂ ಸಮುದಾಯದವರು ಕಿಡಿಕಾರಿದ್ದಾರೆ.
ಯುವಕ ಮತ್ತು ಯುವತಿಗೆ ನೀವು ‘ಬುರ್ಖಾ ತೆಗೆದು ಏನಾದ್ರು ಮಾತನಾಡಿ ಎಂದು ಇಸ್ಲಾಂ ಸಮುದಾಯದವರು ಹೇಳಿಕೆ ನೀಡಿದ ಬೆನ್ನಲ್ಲೇ ಜೈ ಶ್ರೀರಾಂ ಅಂತ ಹೇಳದಿರಿ. ನಿಜವಾದ ಮುಸ್ಲಿಮರ ಮುಂದೆ ಬಂದು ಮಾತನಾಡಿದರೆ ಕತ್ತು ಸೀಳ್ತಿವಿ ಎಂದು ಬೆದರಿಕೆ ಹಾಕಿದ್ದಾರೆ. ಈ ವಿಡಿಯೋ ಬೆಂಗಳೂರಿನಲ್ಲಿ ಮಾಡಿದ್ದು ಎಂದು ಹೇಳಲಾಗುತ್ತಿದ್ದು, ವೈರಲ್ ಆದ ಈ ವೀಡಿಯೋವನ್ನು ಇನ್ನು ಕೆಲವರು ಬೆಂಗಳೂರು ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ. ಈ ಪ್ರಕರಣದ ಕುರಿತಂತೆ ಬೆಂಗಳೂರು ನಗರ ಪೊಲೀಸರು ಪರಿಶೀಲನೆ ನಡೆಸುವ ಭರವಸೆ ನೀಡಿ ರೀಟ್ವೀಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.