Maharashtra: ಎಚ್ಚರ ಮಹಿಳೆಯರೇ!!! ಸನ್ಯಾಸಿ ವೇಷ ಧರಿಸಿ ಭಿಕ್ಷೆ ಬೇಡಿದ ಯುವಕ! ಮನೆ ಸೊಸೆ ಮೂರ್ಛೆ ಬರುವ ಹಾಗೆ ಮಾಡಿದ! ನಂತರ ಆದದ್ದೇನು?
Maharashtra: ಇತ್ತೀಚೆಗೆ ಮನೆಮನೆಗೆ ಭಿಕ್ಷೆ ಬೇಡಲು ಬರುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ಸಂಬಂಧಿಕರಿಗೆ ಹುಷಾರಿಲ್ಲ, ಮಗಳಿಗೆ ಹುಷಾರಿಲ್ಲ, ತುಂಬಾ ಬಡವರು ಹಣ (money) ಇಲ್ಲ ದುಡಿಯಲು ಕೈ ಕಾಲು ಸರಿ ಇಲ್ಲ ಎಂದು ಹೇಳಿಕೊಂಡು ಅದೆಷ್ಟು ಜನರು ಮನೆ ಮುಂದೆ ಬರುತ್ತಾರೆ. ಕೆಲವು ಸನ್ಯಾಸಿಗಳು ಕೂಡ ಮನೆ ಮನೆಗೆ ಹೋಗಿ ಭಿಕ್ಷೆ ಕೇಳಿ ಪಡೆಯುತ್ತಾರೆ. ಆದರೆ ಸನ್ಯಾಸಿಗಳ ವೇಷ ಧರಿಸಿ ಅಥವಾ ಬಡವರು ಎಂದುಕೊಂಡು ಹಣ ಕೇಳಲು ಬರುವವರ ಬಗ್ಗೆ ಎಚ್ಚರವಿರಲಿ!!!
ಹೌದು, ಇಂತವರು ಕಳ್ಳತನ (theft) ಮಾಡಲು ಅಥವಾ ಇನ್ನೇನೋ ಕಾರಣಕ್ಕೆ ಸನ್ಯಾಸಿ, ಇತರ ವೇಷ ಧಾರಿಸಿ ಬರುತ್ತಾರೆ. ಇಂತಹದೇ ಘಟನೆಯೊಂದು ನಡೆದಿದೆ. ಭಿಕ್ಷೆ ಕೇಳಲು ಬಂದು ಇಬ್ಬರು ಯುವಕರು ಮನೆ ಮುಂದೆಯೇ ಸೊಸೆಯನ್ನು ದೋಚಿದ ವಿಚಿತ್ರ ಘಟನೆ ಮಹಾರಾಷ್ಟ್ರದಲ್ಲಿ (Maharashtra) ನಡೆದಿದೆ.
ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ವರ್ಷಾ ಮತ್ತು ಆಕೆಯ ಅತ್ತೆ ಪುಷ್ಪಾ ಮನೆಯಲ್ಲಿದ್ದರು. ಒಬ್ಬ ಯುವಕನೊಬ್ಬ ಸನ್ಯಾಸಿಯ ವೇಷ ಧರಿಸಿ ಬಿಕ್ಷೆ ನೆಪದಲ್ಲಿ ಮನೆಯ ಮುಂದೆ ಬಂದಿದ್ದು, ದಾನ ಕೊಡುವಂತೆ ಹೇಳಿದ್ದಾನೆ. ಪುಷ್ಪಾ ಹತ್ತು ರೂಪಾಯಿ ಕೊಡಲು ಮನೆಯೊಳಗೆ ಹೋಗಿದ್ದಾರೆ. ಈ ವೇಳೆ ಆತ ದಾಹವಾಗಿದೆ ಕುಡಿಯಲು ನೀರು ಕೊಡಿ ಎಂದು ಕೇಳಿದ್ದಾನೆ. ಪುಷ್ಪಾ ಕುಡಿಯಲು ನೀರು ಕೊಟ್ಟಿದ್ದಾಳೆ. ಈ ವೇಳೆ ಆತ ನಿನಗೆ ಕಂಟಕವಿದೆ. ನನ್ನ ಸ್ನೇಹಿತನ ಬಳಿ ಇದಕ್ಕೆ ಪರಿಹಾರವಿದೆ ಎಂದು ಹೇಳಿ ಜತೆಗಾರನನ್ನು ಕರೆದಿದ್ದಾನೆ.
ಜೊತೆಗೆ ಆತ ಮಹಿಳೆಯ ಬಳಿ ಬಂದು ಆಕೆಯ ಕೈಗೆ ಕೆಂಪು ದಾರ ಕಟ್ಟಿದರು. ಬಳಿಕ ಇಬ್ಬರೂ ಯುವಕರು ಪುಷ್ಪಾ ಮತ್ತು ಅವಳ ಸೊಸೆಯತ್ತ ನೋಡಿದ್ದಾರೆ. ಅಷ್ಟೆ ಬಳಿಕ ಏನಾಯಿತೋ ಸ್ವಲ್ಪ ಸಮಯದಲ್ಲೇ ಅತ್ತೆ ಮತ್ತು ಸೊಸೆ ಇಬ್ಬರೂ ಮೂರ್ಛೆ ಹೋಗಿದ್ದಾರೆ.
ಮೊದಲೇ ಪ್ಲ್ಯಾನ್ ಹಾಕಿ ಬಂದಿದ್ದ ನಕಲಿ ಸನ್ಯಾಸಿಗಳು ಪುಷ್ಪಾ ಕೊರಳಲ್ಲಿದ್ದ ಎಂಟು ಸಾವಿರ ರೂಪಾಯಿ ಮೌಲ್ಯದ ಚಿನ್ನದ ಸರವನ್ನು (gold chain) ದೋಚಿ ಪರಾರಿಯಾಗಿದ್ದಾರೆ.
ಹಲವು ಸಮಯದ ನಂತರ ಸಂಬಂಧಿಕರು ಮನೆಗೆ ಬಂದಾಗ ಇಬ್ಬರೂ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದನ್ನು ಕಂಡು ಕೂಡಲೇ ನೀರು ಚಿಮುಕಿಸಿ ಎಬ್ಬಿಸಿದ್ದಾರೆ. ನಯ ಆಗ ಮಹಿಳೆಯರಿಬ್ಬರಿಗೂ ನಡೆದ ಘಟನೆ ಬಗ್ಗೆ ಅರಿವಿಗೆ ಬಂದಿದೆ. ಅವರು ಕಳ್ಳ ಸನ್ಯಾಸಿ ಚಿನ್ನ ದೋಚಿದ್ದು ತಿಳಿದು ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಇಬ್ಬರು ಯುವಕರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.