Organ Donation: ಸಾವಿನ ನಂತರ ನಿಮ್ಮ ಈ ಭಾಗಗಳು ಅಧಿಕ ಕಾಲ ಜೀವಂತವಾಗಿರುತ್ತೆ! ಇಲ್ಲಿದೆ ಕುತೂಹಲಕಾರಿ ಮಾಹಿತಿ!

Health news organ donation these parts of human body survive for a long time after death

Organ Donation: ಮನುಷ್ಯ ಸತ್ತ ನಂತರ ದೇಹವನ್ನು ಹೂಳಲಾಗುತ್ತದೆ ಅಥವಾ ಸುಡಲಾಗುತ್ತದೆ. ಮನುಷ್ಯ ನ ಹೃದಯದ ಬಡಿತ ನಿಂತರೆ, ಮೆದುಳಿಗೆ ಆಮ್ಲಜನಕದ ಪೂರೈಕೆಯೂ ನಿಲ್ಲುತ್ತದೆ. ಹಾಗೆಯೇ ಉಳಿದ ಅಂಗಗಳೂ ಕ್ರಮೇಣ ನಿಷ್ಕ್ರಿಯಗೊಳ್ಳುತ್ತವೆ. ಆದರೆ ವ್ಯಕ್ತಿ ಸತ್ತು ಅನೇಕ ಗಂಟೆಗಳ ನಂತರವೂ ಮಾನವನ ಹಲವು ಭಾಗಗಳು ಜೀವಂತವಾಗಿರುತ್ತವಂತೆ.

ಹೌದು.. ಇದೇ ಕಾರಣಕ್ಕೆ ಮರಣಾನಂತರ ಅಂಗಾಂಗಗಳನ್ನು ಇನ್ನೊಬ್ಬ ರೋಗಿಗೆ ಕಸಿ (Organ Donation) ಮಾಡಲು ಸಾಧ್ಯವಿದೆಯಂತೆ. ಅಂತೆಯೇ ಮನುಷ್ಯ ಸಾವಿನ ನಂತರ ಮಾನವ ದೇಹದ ಯಾವ ಭಾಗವು ಹೆಚ್ಚು ಕಾಲ ಉಳಿಯುತ್ತದೆ ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ಮನುಷ್ಯನ ಮರಣಾನಂತರ ಆ ವ್ಯಕ್ತಿ ಅಂಗಾಂಗಗಳನ್ನು ಇನ್ನೊಬ್ಬ ರೋಗಿಗೆ ಕಸಿ ಮಾಡಲು, ದಾನಿಗಳ ಮರಣದ ನಂತರ, ಅವರ ದೇಹದ ಅನೇಕ ಭಾಗಗಳನ್ನು ತೆಗೆದು ಇತರ ರೋಗಿಗಳಿಗೆ ನೀಡಲಾಗುತ್ತದೆ. ಮುಖ್ಯವಾಗಿ ಕಣ್ಣುಗಳನ್ನು ದಾನ ಮಾಡಲಾಗುತ್ತದೆ. ಸತ್ತ ನಂತರ 6 ಗಂಟೆಗಳ ಒಳಗೆ ಕಣ್ಣುಗಳನ್ನು ತೆಗೆಯಬೇಕು. ನಂತರ ಕಣ್ಣುಗಳು ಸುರಕ್ಷವಾಗಿ ಇರಿಸಿ ಅರ್ಹ ರೋಗಿಗಳಿಗೆ ಕಸಿ ಮಾಡಲಾಗುತ್ತದೆ.

ಇನ್ನು ಕಣ್ಣುಗಳನ್ನು ಹೊರತುಪಡಿಸಿ ಮೂತ್ರಪಿಂಡಗಳು, ಹೃದಯ, ಯಕೃತ್ತು ಸಹ ಕಸಿ ಮಾಡಲಾಗುತ್ತದೆ. ಸಾವಿನ ನಂತರವೂ ಈ ಅಂಗಗಳ ಜೀವಕೋಶಗಳು ಕೆಲವು ತಾಸು ಕಾರ್ಯನಿರ್ವಹಿಸುತ್ತಲೇ ಇರುತ್ತವೆ.

ಆದ್ದರಿಂದ ಸತ್ತ ಕೆಲವೇ ಗಂಟೆಗಳಲ್ಲಿ ಅವುಗಳನ್ನು ಹೊರತೆಗೆದು ಇನ್ನೊಬ್ಬ ರೋಗಿಗೆ ಜೋಡಿಸಲಾಗುತ್ತದೆ. ಅಂದರೆ ಮರಣದ ನಂತರ 4 ರಿಂದ 6 ಗಂಟೆಗಳ ಒಳಗೆ ಹೃದಯವನ್ನು ಇನ್ನೊಬ್ಬ ರೋಗಿಗೆ ಕಸಿ ಮಾಡಬಹುದು. ಅಂತೆಯೇ, ಮೂತ್ರಪಿಂಡಗಳು 24 ರಿಂದ 36 ಗಂಟೆಗಳ ಮೊದಲು ಕಸಿ ಮಾಡಬಹುದು. ಇನ್ನು ಯಕೃತ್ತು 8 ರಿಂದ 12 ಗಂಟೆಗಳವರೆಗೆ ಜೀವಂತವಾಗಿರುತ್ತದೆ.

ಇನ್ನು ಕೆಲವು ಅಂಗವು ದೀರ್ಘಕಾಲ ಜೀವಂತವಾಗಿರುತ್ತದೆ. ಅವುಗಳೆಂದರೆ ಹೃದಯದ ಕವಾಟಗಳನ್ನು 10 ವರ್ಷಗಳವರೆಗೆ ಜೀವಂತವಾಗಿ ಇರಿಸಲಾಗುತ್ತದೆ. ಚರ್ಮ ಮತ್ತು ಮೂಳೆಗಳನ್ನು ವೈಜ್ಞಾನಿಕ ರೂಪದಲ್ಲಿ ಸುರಕ್ಷಿತವಾಗಿ ಇರಿಸಿದಲ್ಲಿ ಸುಮಾರು 5 ವರ್ಷಗಳವರೆಗೆ ಜೀವಂತವಾಗಿರುತ್ತವೆ ಎಂದು ವೈದ್ಯಕೀಯ ಸಂಶೋಧನೆಯಲ್ಲಿ ತಿಳಿದು ಬಂದಿದೆ.

ಇದನ್ನೂ ಓದಿ: ರೂಪೇಶ್ ಶೆಟ್ಟಿ ಹೊಸ ಸಿನಿಮಾದಲ್ಲಿ ಹೀರೋಯಿನ್ ಜಾಹ್ನವಿ; ಸಾನ್ಯ ಳನ್ನು ರಿಜೆಕ್ಟ್ ಮಾಡ್ಬಿಟ್ರ ರೂಪೇಶ್?

Leave A Reply

Your email address will not be published.