Smartphones Launches in September 2023: ಸ್ಮಾರ್ಟ್ಫೋನ್ ಪ್ರಿಯರಿಗೆ ಭರ್ಜರಿ ಸುದ್ಧಿ ; ಸೆಪ್ಟೆಂಬರ್ನಲ್ಲಿ ಈ ಎಲ್ಲಾ ಸ್ಮಾರ್ಟ್’ಫೋನ್ ಗಳ ಬಿಡುಗಡೆ ! ಕಂಪ್ಲೀಟ್ ಡಿಟೇಲ್ಸ್ ಇಲ್ಲಿದೆ
Technology NEWS iPhone 15 honour 90 and more here is the upcoming smartphones launches in September
Smartphones Launches in September 2023: ಮಾರುಕಟ್ಟೆಗೆ ಹೊಚ್ಚ ಹೊಸ ಸ್ಮಾರ್ಟ್ ಫೋನ್ ಗಳು ಕಾಲಿಡುತ್ತಿವೆ. ನೀವು ಸ್ಮಾರ್ಟ್ ಫೋನ್ ಖರೀದಿಸುವ ಯೋಚನೆಯಲ್ಲಿದ್ದರೆ ಇಲ್ಲಿದೆ ನಿಮಗೆ ಮುಖ್ಯ ಮಾಹಿತಿ. ಸೆಪ್ಟೆಂಬರ್ನಲ್ಲಿ (Smartphones Launches in September 2023) ಆ್ಯಪಲ್ ಕಂಪನಿಯ ಬಹುನಿರೀಕ್ಷಿತ ಐಫೋನ್ 15 ಸರಣಿ ಅನಾವರಣಗೊಳ್ಳಲಿದೆ. ಜೊತೆಗೆ ಮೋಟೋರೊಲಾ, ಹಾನರ್, ಸ್ಯಾಮ್ಸಂಗ್ ಕಂಪನಿಯ ಫೋನ್ ಕೂಡ ಬಿಡುಗಡೆಗೊಳ್ಳಲಿದೆ. ಹಾಗಾದ್ರೆ ಸೆಪ್ಟೆಂಬರ್ನಲ್ಲಿ ಭಾರತಕ್ಕೆ ಬರುತ್ತಿರುವ ಸ್ಮಾರ್ಟ್ಫೋನ್ಗಳು ಯಾವುದು? ಇಲ್ಲಿದೆ ನೋಡಿ ಕಂಪ್ಲೀಟ್ ಡಿಟೇಲ್ಸ್ !!!.
ಐಫೋನ್ 15 ಸರಣಿ: ಆ್ಯಪಲ್ ಕಂಪನಿಯ ಬಹುನಿರೀಕ್ಷಿತ ಐಫೋನ್ 15 ಸರಣಿಯ (iPhone 15 Series) ಸ್ಮಾರ್ಟ್ಫೋನ್ಗಳ ಬಿಡುಗಡೆಗೆ ತಯಾರಿ ನಡೆಯುತ್ತಿದೆ. ಇದರಲ್ಲಿ ಸೆಪ್ಟೆಂಬರ್ 13 ರಂದು ಐಫೋನ್ 15, ಐಫೋನ್ 15 ಪ್ಲಸ್, ಐಫೋನ್ 15 ಪ್ರೊ ಮತ್ತು ಐಫೋನ್ 15 ಪ್ರೊ ಮ್ಯಾಕ್ಸ್ ರಿಲೀಸ್ ಆಗಲಿದೆ. ಐಫೋನ್ 15 USA ನಲ್ಲಿ $799 ಆರಂಭಿಕ ಬೆಲೆಯೊಂದಿಗೆ ಬಿಡುಗಡೆ ಆಗಲಿದೆ ಎಂದು ಹೇಳಲಾಗುತ್ತದೆ. ಐಫೋನ್ 15 ಬೆಲೆ ಭಾರತದಲ್ಲಿ 79,900 ರೂ. ಗಳಿಂದ ಪ್ರಾರಂಭವಾಗಬಹುದು ಎಂದು ನಿರೀಕ್ಷಿಸಲಾಗಿದೆ.
ಐಫೋನ್ನಲ್ಲಿ USB-C ಟೈಪ್ ಚಾರ್ಜಿಂಗ್ ಫೋರ್ಟ್ ಇರಲಿದೆ ಎನ್ನಲಾಗಿದೆ . 48MP ಮುಖ್ಯ ಕ್ಯಾಮೆರಾ ಸಂವೇದಕವನ್ನು ಒಳಗೊಂಡಂತೆ ಸುಧಾರಿತ ಕ್ಯಾಮೆರಾಗಳು ಮತ್ತು ಬಯೋನಿಕ್ A16 ಚಿಪ್ಸೆಟ್ ಇರುವ ಸಾಧ್ಯತೆ ಇದೆ. ಫೋನ್ 15 ಹಿಂದಿನ ಐಫೋನ್ 13 ಮತ್ತು ಐಫೋನ್ 14 ನಂತೆಯೇ 6.1-ಇಂಚಿನ ಡಿಸ್ ಪ್ಲೇಯೊಂದಿಗೆ ಬರಲಿದೆ.
ಮೋಟೋ G54 5G: ಮೋಟೋ G54 5G ಸೆಪ್ಟೆಂಬರ್ನಲ್ಲಿ ಬಿಡುಗಡೆ ಆಗಲಿದೆ. ಇದು ಮೋಟೋ G53 5G ಯ ಅಪ್ಗ್ರೇಡ್ ವರ್ಷನ್ ಆಗಿದೆ. ಈ ಫೋನ್ ಫೋನ್ 120Hz ರಿಫ್ರೆಶ್ ದರದೊಂದಿಗೆ 6.5-ಇಂಚಿನ ಪೂರ್ಣ-HD+ ಡಿಸ್ ಪ್ಲೇ, 8GB RAM ಮತ್ತು 256GB ಸಂಗ್ರಹಣೆ, OIS ನೊಂದಿಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕ ಮತ್ತು 16-ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ ಸಂವೇದಕವನ್ನು ಹೊಂದಿದೆ ಎನ್ನಲಾಗಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ S23 FE: ಸ್ಯಾಮ್ಸಂಗ್ ತನ್ನ ಪ್ರಮುಖ ಗ್ಯಾಲಕ್ಸಿ S23 ಸರಣಿಯಿಂದ ಫ್ಯಾನ್ ಆವೃತ್ತಿ (Samsung Galaxy S23 FE) ಮಾದರಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಫೋನ್ ಸೆಪ್ಟೆಂಬರ್ನಲ್ಲಿ ಬಿಡುಗಡೆ ಆಗಲಿದೆ. ಇದರ ಬೆಲೆ 54,999 ರೂ. ಇರಬಹುದೆಂದು ಹೇಳಲಾಗಿದೆ.
ಸ್ಯಾಮ್ಸಂಗ್ ಗ್ಯಾಲಕ್ಸಿ S23 FE ಸ್ಮಾರ್ಟ್ಫೋನ್ 120Hz ರಿಫ್ರೆಶ್ ದರದೊಂದಿಗೆ 6.4-ಇಂಚಿನ FHD+ ಡೈನಾಮಿಕ್ AMOLED ಡಿಸ್ ಪ್ಲೇಯನ್ನು ಹೊಂದಿರುತ್ತದೆ. ಇದು ಕ್ವಾಲ್ಕಂ ಸ್ನಾಪ್ಡ್ರಾಗನ್ 8 Gen 1 ಅಥವಾ ಎಕ್ಸಿನೊಸ್ 2200 ಪ್ರೊಸೆಸರ್ನಿಂದ ಚಾಲಿತವಾಗುವ ನಿರೀಕ್ಷೆಯಿದೆ. ಆಂಡ್ರಾಯ್ಡ್ 13-ಆಧಾರಿತ OneUI 5.1 ನಲ್ಲಿ ಕಾರ್ಯನಿರ್ವಹಿಸುತ್ತದೆ. 25W ವೇಗದ ಚಾರ್ಜಿಂಗ್ನೊಂದಿಗೆ 4,500mAh ಬ್ಯಾಟರಿಯನ್ನು ಹೊಂದಿದೆ.
ಹಾನರ್ 90: ಹಾನರ್ 90 (honor 90) ಚೀನೀ ಬ್ರಾಂಡ್ ಹಾನರ್ ಆಗಿದ್ದು, ಇದು ಭಾರತದಲ್ಲಿ ಹಾನರ್ 90 ನೊಂದಿಗೆ ಮತ್ತೆ ಆಗಮನ ಮಾಡಲು ಸಿದ್ಧವಾಗಿದೆ. ಈಗಾಗಲೇ ಚೀನಾದಲ್ಲಿ ಹಾನರ್ 90 ಮತ್ತು ಹಾನರ್ 90 ಪ್ರೊ ಬಿಡುಗಡೆ ಆಗಿದೆ. ಇದು ಸೆಪ್ಟೆಂಬರ್ನಲ್ಲಿ ಭಾರತಕ್ಕೆ ಬರಲಿದೆ. ಇದರ ಬೆಲೆ ಅಂದಾಜಿ 30,000 ರೂ. ಎಂದು ಹೇಳಲಾಗಿದೆ. ಈ ಫೋನ್ನಲ್ಲಿ ಉತ್ತಮ ಫೀಚರ್ಸ್ ಹೊಂದಿದೆ. ಹಾಗೂ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರುವ ಸಾಧ್ಯತೆ ಇದೆ.
ಮೋಟೋ G84 5G: ಮೋಟೋರೊಲಾ (Motorola) ಸೆಪ್ಟೆಂಬರ್ 1 ರಂದು ಈ ಸ್ಮಾರ್ಟ್ಫೋನನ್ನು ಭಾರತದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಮೋಟೋ G84 5G (Moto G84 5G) ಮಿಡ್ನೈಟ್ ಬ್ಲೂ, ವಿವಾ ಮೆಜೆಂಟಾ ಮತ್ತು ಮಾರ್ಷ್ಮ್ಯಾಲೋ ಬ್ಲೂ ಹೀಗೆ ತನ್ನ ಮೂರು ಬಣ್ಣಗಳಲ್ಲಿ ರಿಲೀಸ್ ಆಗಲಿದೆ. ಈ ಫೋನ್ 120Hz 6.5-ಇಂಚಿನ pOLED ಡಿಸ್ ಪ್ಲೇಯನ್ನು ಹೊಂದಿದೆ.
ಕ್ವಾಲ್ಕಂ ಸ್ನಾಪ್ಡ್ರಾಗನ್ 695 SoC ಅನ್ನು ಒಳಗೊಂಡಿರುತ್ತದೆ. ಜೊತೆಗೆ 12GB RAM ಮತ್ತು 256GB ಸಂಗ್ರಹಣೆಯನ್ನು ಹೊಂದಿರುತ್ತದೆ. ಇದು ಆಂಡ್ರಾಯ್ಡ್ 13 OS ನಲ್ಲಿ ಕಾರ್ಯನಿರ್ವಹಿಸುತ್ತದೆ. 50MP ಟ್ರಿಪಲ್ ಕ್ಯಾಮೆರಾ ರಚನೆಯನ್ನು ಹೊಂದಿದೆ. ಇದು 30W ವೇಗದ ಚಾರ್ಜಿಂಗ್ನೊಂದಿಗೆ 5,000mAh ಬ್ಯಾಟರಿಯನ್ನು ಸಹ ಒಳಗೊಂಡಿದೆ.