ಸೌಜನ್ಯ ಪ್ರಕರಣ: ನ್ಯಾಯಾಲಯದ ನಿರ್ದೇಶನ ಆಧರಿಸಿ ಸರಕಾರದಿಂದ ಕ್ರಮ- ಪರಮೇಶ್ವರ್

Political news Dr G parameshwar says soujanya rape and murder case action as per court decision

Soujanya case: ಬೆಳ್ತಂಗಡಿಯ ಧರ್ಮಸ್ಥಳದಲ್ಲಿ ನಡೆದ ಸೌಜನ್ಯಾ ಅತ್ಯಾಚಾರ ಹಾಗೂ ಕೊಲೆ ಪ್ರಕರಣವನ್ನು(Soujanya case) ಮರು ತನಿಖೆ ಆಗಬೇಕು ಎಂದು ಹೇಳುವವರು ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಬೇಕು.ನ್ಯಾಯಾಲಯ ಏನು ನಿರ್ದೇಶನ ನೀಡುತ್ತದೋ ಅದನ್ನು ಆಧರಿಸಿ ಸರಕಾರ ಕ್ರಮ ಕೈಗೊಳ್ಳುತ್ತದೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್‌ ಹೇಳಿದ್ದಾರೆ.

ಸರಕಾರ ನೇರವಾಗಿ ಪ್ರಕರಣದ ಮರುತನಿಖೆ ಮಾಡುವಂತಿಲ್ಲ. ಆದರೆ ನ್ಯಾಯಾಲಯ ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಿದಲ್ಲಿ ಸರಕಾರದಿಂದ ಮರುತನಿಖೆ ನಡೆಸಬಹುದು ಎಂದರು.

ಸೌಜನ್ಯಾ ಕೊಲೆ ಪ್ರಕರಣದಲ್ಲಿ ಸರಕಾರದ ನಿಲುವಿನ ಪ್ರಶ್ನೆ ಅಲ್ಲ. ಈಗ ಮರು ತನಿಖೆ ಆಗಬೇಕು ಎನ್ನುತ್ತಿರುವವರು ನ್ಯಾಯಾಲಕ್ಕೆ ಮೇಲ್ಮನವಿ ಸಲ್ಲಿಸಬೇಕು. ನ್ಯಾಯಾಲಯವು ಮರು ತನಿಖೆ ಮಾಡಿ ಎಂದು ನಿರ್ದೇಶಿಸಿದರೆ ಸರಕಾರ ಮರು ತನಿಖೆ ಮಾಡಬಹುದು. ಅದನ್ನು ಬಿಟ್ಟು ಈಗ ಸರಕಾರ ಏನೂ ಮಾಡಲಾಗದು ಎಂದಿದ್ದಾರೆ.

ಇದನ್ನೂ ಓದಿ: ಸೌಜನ್ಯ ಪ್ರಕರಣ: ಬೆಳ್ತಂಗಡಿ ಚಲೋ ಸಂದರ್ಭ ಬಿಜೆಪಿ ವಿರುದ್ಧ ಹರಿಹಾಯ್ದ ವಸಂತ್ ಬಂಗೇರ !ನಳಿನ್, ಕಾರ್ಕಳದ ಸುನಿಲ್ ಕುಮಾರ್ ಏನು ಸೊಪ್ಪು ಕಡೀತಿದ್ರಾ?

Leave A Reply

Your email address will not be published.