Scholarship: ವಿದ್ಯಾರ್ಥಿಗಳೇ ಗಮನಿಸಿ, LIC ವಿದ್ಯಾಧನ್ ಸ್ಕಾಲರ್ಶಿಪ್ 2023 ಪಡೆಯಲು ಯಾರು ಅರ್ಹರು ಗೊತ್ತಾ? ಅರ್ಹರಿಗೆ ಸಿಗಲಿದೆ ವಾರ್ಷಿಕ 25,000!

Education news application invitation for LIC vidhyadhan scolorship 2023

Scholarship: ವಿದ್ಯಾರ್ಥಿಗಳ( Students) ಶಿಕ್ಷಣಕ್ಕೆ(Education)ನೆರವಾಗುವ ನಿಟ್ಟಿನಲ್ಲಿ ಎಸ್ ಬಿಐ, ಹೆಚ್‌ಡಿಎಫ್‌ಸಿ ಬ್ಯಾಂಕ್ ಗಳು ಹಾಗೆ ಇನ್ನೂ ಕೆಲವು ಶಿಕ್ಷಣ ಸಂಸ್ಥೆಗಳು ಸ್ಕಾಲರ್‌ಶಿಪ್‌(Scholarship )ಮೂಲಕ ಮಕ್ಕಳ ಓದುವ ಕನಸಿಗೆ ಆಸರೆಯಾಗುತ್ತಿದೆ. ಅಷ್ಟೆ ಅಲ್ಲದೆ, ಸರ್ಕಾರ ವಿದ್ಯಾರ್ಥಿಗಳ ಏಳಿಗೆಗಾಗಿ ಆರ್ಥಿಕ ನೆರವು, ಸ್ಕಾಲರ್ ಶಿಪ್ ಜೊತೆಗೆ ಶಿಕ್ಷಣ ಬೆಂಬಲಿಸುವ ನಿಟ್ಟಿನಲ್ಲಿ ಅನೇಕ ಕ್ರಮಗಳನ್ನು ಜಾರಿಗೆ ತಂದಿದೆ. ಇದೀಗ, ಆರ್ಥಿಕವಾಗಿ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ನೆರವಾಗುವ ನಿಟ್ಟಿನಲ್ಲಿ ಎಲ್‌ಐಸಿ ಫೈನಾನ್ಸ್‌ ಲಿಮಿಟೆಡ್‌ ಎಲ್‌ಐಸಿ ಎಚ್‌ಎಫ್‌ಎಲ್ ವಿದ್ಯಾಧನ್ ‌ಸ್ಕಾಲರ್‌ಷಿಪ್ ಅನ್ನು ರೂಪಿಸಿದೆ.

ಎಲ್‌ಐಸಿ ಎಚ್‌ಎಫ್‌ಎಲ್ ವಿದ್ಯಾಧನ್ ‌ಸ್ಕಾಲರ್‌ಷಿಪ್ ಯೋಜನೆಗೆ 2023–24 ಶೈಕ್ಷಣಿಕ ವರ್ಷದಲ್ಲಿ 11ನೇ ತರಗತಿ ಮತ್ತು ಮೊದಲ ಪದವಿ ಮತ್ತು ಮೊದಲ ವರ್ಷದ ಸ್ನಾತಕೋತ್ತರ ಪದವಿ ಪ್ರವೇಶ ಪಡೆದಿರುವ ಭಾರತೀಯ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದ್ದು, ಅರ್ಜಿ ಸಲ್ಲಿಸಲು 30.09.2023 ಕೊನೆಯ ದಿನವಾಗಿದೆ.

ಈ ಸ್ಕಾಲರ್ಶಿಪ್ ಪಡೆಯಲು ಅರ್ಹತಾ ಮಾನದಂಡಗಳು ಹೀಗಿವೆ:
ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯವು ಎಲ್ಲ ಮೂಲಗಳಿಂದ ₹3.60 ಲಕ್ಷ ಮೀರಿರಬಾರದು.ಅರ್ಜಿದಾರರಿ ತಮ್ಮ ಹಿಂದಿನ ವರ್ಷದ ತರಗತಿಯ ಪರೀಕ್ಷೆಯಲ್ಲಿ ಶೇ 60ಕ್ಕಿಂತ ಹೆಚ್ಚಿನ ಅಂಕಗಳಿಸಿರಬೇಕು. ಅರ್ಹ ಅಭ್ಯರ್ಥಿಗಳಿಗೆವಾರ್ಷಿಕ ₹25 ಸಾವಿರದವರೆಗೆ ಆರ್ಥಿಕ ನೆರವು ನೀಡಲಾಗುತ್ತದೆ.ಈ ಕುರಿತ ಹೆಚ್ಚಿನ ಮಾಹಿತಿಗೆ www.b4s.in/praja/RMKSP1 ಭೇಟಿ ನೀಡಿ ಮಾಹಿತಿ ಪಡೆಯಬಹುದು.

# ರಮಣಕಾಂತ್ ಮುಂಜಲ್ ಸ್ಕಾಲರ್‌ಷಿಪ್ 2023
ಹಣಕಾಸಿನ ಸಂಬಂಧಿತ ಕೋರ್ಸ್‌ಗಳನ್ನು ಕಲಿಯುವ ವಿದ್ಯಾರ್ಥಿಗಳಿಗೆ ಕಾಲೇಜು ಪ್ರವೇಶ ಮತ್ತು ಭವಿಷ್ಯದಲ್ಲಿ ಉತ್ತಮ ಭವಿಷ್ಯ ರೂಪಿಸುವಲ್ಲಿ ಆರ್ಥಿಕ ನೆರವು ನೀಡುವ ಸಲುವಾಗಿ ರೂಪಿಸಿರುವ ಹೀರೊ ಫಿನ್‌ಕಾರ್ಪ್‌ ಬೆಂಬಲಿತ ರಮಣಕಾಂತ್ ಮುಂಜಲ್ ಫೌಂಡೇಶನ್‌ ರೂಪಿಸಿರುವ ಸ್ಕಾಲರ್‌ಷಿಪ್‌ ರಮಣಕಾಂತ್ ಮುಂಜಲ್ ಸ್ಕಾಲರ್‌‍ಷಿಪ್‌ 2023 ಯನ್ನು ಆಯೋಜಿಸಿದೆ.

ಈ ಸ್ಕಾಲರ್ಶಿಪ್ ಪಡೆಯಲು ಅರ್ಹತಾ ಮಾನದಂಡಗಳು ಹೀಗಿವೆ:
ಅರ್ಜಿದಾರರು 10 ಮತ್ತು 12ನೇ ತರಗತಿ ಪರೀಕ್ಷೆಗಳಲ್ಲಿ ಕನಿಷ್ಠ ಶೇ 80 ಅಂಕಗಳನ್ನು ಗಳಿಸಿರಬೇಕು.ಅರ್ಜಿದಾರರ ಕುಟುಂಬದ ವಾರ್ಷಿಕ ಆದಾಯ ₹ 4 ಲಕ್ಷಕ್ಕಿಂತ ಕಡಿಮೆಯಿರಬೇಕು.

ಸ್ಕಾಲರ್‌ಷಿಪ್‌ಗೆ ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು?

ಬಿಬಿಎ, ಬಿಎಫ್‌‌‍ಐಎ, ಬಿ.ಕಾಂ(ಎಚ್,ಇ), ಬಿಎಂಎಸ್, ಐಪಿಎಂ, ಬಿಎ(ಎಕನಾಮಿಕ್ಸ್), ಬಿಬಿಎಸ್, ಬಿಬಿಐ, ಬಿಎ‌‌‌‌‍ಎಫ್ ಮತ್ತು ಬಿಎಸ್.ಸಿ (ಸ್ಟಾಟಿಸ್ಟಿಕ್ಸ್) ಅಥವಾ ಯಾವುದೇ ಇತರ ಹಣಕಾಸು ಸಂಬಂಧಿತ ಪದವಿ ಕೋರ್ಸ್‌ನ ಮೊದಲನೇ ವರ್ಷಕ್ಕೆ ಪ್ರವೇಶ ಪಡೆದಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಅರ್ಹ ವಿದ್ಯಾರ್ಥಿಗಳಿಗೆ 3 ವರ್ಷಗಳವರೆಗೆ ವರ್ಷಕ್ಕೆ ₹ 5ಲಕ್ಷದವರೆಗೆ ವಿದ್ಯಾರ್ಥಿವೇತನದ ಆರ್ಥಿಕ ನೆರವು ನೀಡಲಾಗುತ್ತದೆ.ಈ ಕುರಿತ ಹೆಚ್ಚಿನ ಮಾಹಿತಿಗಾಗಿ,http://www.b4s.in/praja/RMKSP1 ಭೇಟಿ ನೀಡಬಹುದು.

ಇದನ್ನೂ ಓದಿ: Mangalore: ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್! ಮಂಗಳೂರಿನಲ್ಲಿ S.C.D.C.C ಬ್ಯಾಂಕ್ ನಲ್ಲಿ ಉದ್ಯೋಗಾವಕಾಶ! ಅರ್ಜಿ ಸಲ್ಲಿಸಲು 20.09.23ಕೊನೆಯ ದಿನ!

Leave A Reply

Your email address will not be published.