Home Education Uttara Kannada College: ಈ ಕಾಲೇಜಿನಲ್ಲಿ ಒಂದು ಕೆಲಸ ಮಾಡಿದ್ರೆ ಸಿಗುತ್ತೆ ಎಕ್ಸ್ಟ್ರಾ 5...

Uttara Kannada College: ಈ ಕಾಲೇಜಿನಲ್ಲಿ ಒಂದು ಕೆಲಸ ಮಾಡಿದ್ರೆ ಸಿಗುತ್ತೆ ಎಕ್ಸ್ಟ್ರಾ 5 ಮಾರ್ಕ್ ! ಏನ್ ಮಾಡ್ಬೇಕು ಗೊತ್ತಾ ?

Uttara Kannada College
Image source: WGRZ

Hindu neighbor gifts plot of land

Hindu neighbour gifts land to Muslim journalist

Uttara Kannada College: ವಿದ್ಯಾರ್ಥಿಗಳಿಗೆ ಮಾರ್ಕ್ಸ್ ಅಂದರೆ ಬಹಳ ಪ್ರಾಮುಖ್ಯವಾದದ್ದು. ಪ್ರತೀ ಒಂದು ಅಂಕವು ವಜ್ರದ ಹರಳು ಇದ್ದಂತೆ. ಹಾಗಿರುವಾಗ 5 ಮಾರ್ಕ್ಸ್ ಆಫರ್ ಕೊಟ್ಟರೆ ವಿದ್ಯಾರ್ಥಿಗಳು ಖಂಡಿತಾ ಮಿಸ್ ಮಾಡಲ್ಲ.

ಇದೀಗ ಉತ್ತರ ಕನ್ನಡದ ಶಿರಸಿಯ ಸರ್ಕಾರಿ ಅರಣ್ಯ ಮಹಾವಿದ್ಯಾಲಯವೂ( Uttara Kannada College) ಪ್ರತೀ ಹಸಿರು ಗಿಡಗಳಿಗೆ ನೀರುಣಿಸುತ್ತಿರೋ ವಿದ್ಯಾರ್ಥಿಗಳಿಗೆ ಟಾಸ್ಕ್ ಒಂದನ್ನು ನೀಡಿದೆ. ಈ ಕಾಲೇಜಿನ ವಿದ್ಯರ್ಥಿ ನೀರುಣಿಸಿ ಚೆನ್ನಾಗಿ ಗಿಡ ಬೆಳೆದ್ರೆ ಹೆಚ್ಚುವರಿ ಮಾರ್ಕ್ಸ್ ನೀಡುತ್ತೆ.

ಅಂದಹಾಗೆ ಈ ನಿಯಮ ಜಾರಿಗೆ ತಂದಿದ್ದು ವಿಶ್ವಸಂಸ್ಥೆಯ ಶೈಕ್ಷಣಿಕ ಕಾರ್ಯಕ್ರಮ. ಇದು ಗ್ರೀನ್ ಗ್ರ್ಯಾಜುವೇಶನ್ ನ ಒಂದು ಕಾರ್ಯಕ್ರಮ. ವಿಶ್ವಸಂಸ್ಥೆಯೇ ಇಂತಹ ಕಾರ್ಯಕ್ರಮಗಳಿಗಾಗಿ ಆಯ್ದ ಕಾಲೇಜುಗಳನ್ನ ಆಯ್ಕೆ ಮಾಡುತ್ತವೆ. ಅಂತಹ 500 ಕಾಲೇಜುಗಳಲ್ಲಿ ಶಿರಸಿಯ ಅರಣ್ಯ ಮಹಾವಿದ್ಯಾಲಯವೂ ಒಂದು. ಅದರಂತೆ ಇಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳು ತಾವು ಇಷ್ಟಪಟ್ಟು ಗಿಡಗಳನ್ನ ಬೆಳೆಸಿದ್ದಾರೆ. ತಮ್ಮ ಪದವಿ ಮುಗಿಯುವವರೆಗೂ ಬೆಳೆದ ಗಿಡಕ್ಕೆ ಏನೂ ಹಾನಿಯಾಗದಂತೆ ನೋಡಿಕೊಂಡರೆ ಅದಕ್ಕೆ 5 ಅಂಕ ದೊರೆಯಲಿದೆ ಎನ್ನಲಾಗಿದೆ.

ಸದ್ಯ ಈ ಯೋಜನೆ ಶಿರಸಿಯ ಫಾರೆಸ್ಟ್ ಕಾಲೇಜಿಗೆ ಕಾಲಿಟ್ಟಿದ್ದು ಅಧ್ಯಾಪಕರು, ವಿದ್ಯಾರ್ಥಿಗಳು ಉತ್ಸಾಹದಿಂದ ಗಿಡ ನೆಟ್ಟು ಪೋಷಿಸುತ್ತಿದ್ದಾರೆ. ಒಟ್ಟು 60 ವಿದ್ಯಾರ್ಥಿಗಳು ರಾಯನಕೆರೆಯ ದಡದಲ್ಲಿ 120 ಗಿಡಗಳನ್ನು ನೆಟ್ಟಿದ್ದು ಅದರ ಮೇಲೆಲ್ಲಾ ಆಯಾ ವಿದ್ಯಾರ್ಥಿಯ ಹೆಸರಿದೆ. ಇನ್ನು ನಾಲ್ಕು ವರ್ಷ ಅದು ಅವರ ಜವಾಬ್ದಾರಿ. ಇಲ್ಲಿ ಕಿತ್ತಳೆ, ಮಾವು, ನೇರಳೆ, ನೆಲ್ಲಿ, ಬೇವು, ಗೇರು, ಚಿಕ್ಕು ಎಲ್ಲಾ ತರಹದ ಗಿಡಗಳನ್ನು ವಿದ್ಯಾರ್ಥಿಗಳು ನೆಟ್ಟಿದ್ದಾರೆ. ಕಾಲೇಜಿನ ವಿದ್ಯಾರ್ಥಿಗಳು ಇಲ್ಲಿಗೆ ಬಂದು ಗಿಡಗಳಿಗೆ ನೀರು ಹಾಕುತ್ತಾರೆ, ಕಳೆ ತೆಗೆಯುತ್ತಾರೆ, ಗೊಬ್ಬರ ಹಾಕುತ್ತಾರೆ. ಹಾಗೆಯೇ ಗಿಡದ ಬೆಳವಣಿಗೆಯ ರಿಪೋರ್ಟ್ ತೆಗೆದುಕೊಳ್ಳುತ್ತಾರೆ. ಒಂದು ವೇಳೆ ಗಿಡ ಸತ್ತು ಹೋದರೆ ಆ 5 ಅಂಕವನ್ನ ವಿದ್ಯಾರ್ಥಿಗಳು ಕಳೆದುಕೊಳ್ಳಲಿದ್ದಾರೆ.

ಸದ್ಯ ರಾಯನಕೆರೆ ಅಭಿವೃದ್ಧಿ ಸಮಿತಿ, ಕಾಲೇಜು ಆಡಳಿತ ಮಂಡಳಿ ಈ ಗಿಡಗಳನ್ನು ನಂತರವೂ ಕಾಯ್ದುಕೊಳ್ಳುವ ಸಂಕಲ್ಪ ತೊಟ್ಟಿದೆ. ಇವೆರೆಡರ ಸಹಯೋಗದಲ್ಲಿ ಈಗಾಗಲೇ ರಾಯನಕೆರೆ ಸುತ್ತಮುತ್ತ ಅರಣ್ಯದ ವಾತಾವರಣ ನಿರ್ಮಾಣವಾಗಿದೆ.

ಇದನ್ನೂ ಓದಿ: Petrol-Diesel price: ಸಂಡೆ ಅಂತ ನಿದ್ರೆಗೆ ಜಾರದಿರಿ! ಕೂಡಲೇ ಪೆಟ್ರೋಲ್ – ಡೀಸೆಲ್ ಟ್ಯಾಂಕ್ ಫುಲ್ ಮಾಡಿಸಿ