Interesting Facts: ನಿಮಗಿದು ಗೊತ್ತೇ? ಸೂರ್ಯನತ್ತ ಸೂರ್ಯಕಾಂತಿ ಗಿಡಗಳು ಮುಖ ಮಾಡಲು ಮುಖ್ಯವಾದ ಕಾರಣವೇನೆಂದು? ಇಲ್ಲಿದೆ ಕುತೂಹಲಕಾರಿ ಸಂಗತಿ
Interesting facts about sunflowers Why sunflowers turn to follow the sun
Sunflowers :ನೈಸರ್ಗಿಕವಾಗಿ ಸಂಭವಿಸುವ ರಾಸಾಯನಿಕ ಕ್ರಿಯೆಗಳು, ಸಸ್ಯ ಮತ್ತು ಪ್ರಾಣಿಗಳ ಬಗೆಗಿನ ವಿಲಕ್ಷಣವಾದ ಸಂಗತಿಗಳು, ಪರಿಸರ (nature ) ವ್ಯವಸ್ಥೆಯಲ್ಲಿನ ವಿಚಿತ್ರಗಳು ಹೀಗೆ ಪ್ರತಿ ದಿನವೂ ಆವಿಷ್ಕಾರಗಳು ಬೆಳಕಿಗೆ ಬರುತ್ತಲೇ ಇರುತ್ತವೆ ಹಾಗಂತ ನಾವು ನಿಲ್ಲಿಸಲು ಸಹ ಸಾಧ್ಯವಿಲ್ಲ. ಈ ಎಲ್ಲಾ ಕ್ರಿಯೆಗಳು ಪ್ರಕೃತ್ತಿ ನಿಮಿತ್ತ ಆಗಿದೆ.
ಈ ಎಲ್ಲಾವುಗಳ ನಡುವೆ ನಮ್ಮನ್ನು ಆಕರ್ಷಿಸುವ ವಿದ್ಯಮಾನವೆಂದರೆ ಸೂರ್ಯಕಾಂತಿ (sunflowers) ಸಸ್ಯವು ಸೂರ್ಯನಿಗೆ ಪ್ರತಿಕ್ರಿಯಿಸುವ ಬಗೆ ಹೌದು ಸೂರ್ಯನೆಡೆಗೆ ತಿರುಗುವ ಅದರ ಸಾಮರ್ಥ್ಯ. ಅಂದರೆ ಬೆಳಗ್ಗೆ, ಸೂರ್ಯ ಪೂರ್ವದಲ್ಲಿ ಉದಯಿಸುತ್ತಾನೆ, ಹೂವಿನ ಕಾಂಡವು ಪಶ್ಚಿಮದಲ್ಲಿ ಹೆಚ್ಚು ಬೆಳೆಯುತ್ತದೆ. ಪರಿಣಾಮವಾಗಿ, ಮೊಗ್ಗಿನ ಮುಖವು ಪೂರ್ವದ ಕಡೆಗೆ ಇರುತ್ತದೆ. ಮಧ್ಯಾಹ್ನ (afternoon), ವಿರುದ್ಧವಾಗಿ ಸಂಭವಿಸುತ್ತದೆ. ಇದು ಸಂಭವಿಸುವುದು ಒಂದು ಅದ್ಬುತವೇ ಸರಿ.
ಮುಖ್ಯವಾಗಿ ಸೂರ್ಯಕಾಂತಿ ಸುಮಾರು 70ಪ್ರಭೇದಗಳನ್ನು ಹೊಂದಿರುವ ಹೂವಿನ ಜಾತಿ ಆಗಿದೆ. ಅಮೆರಿಕ ಖಂಡದ ಅದರಲ್ಲೂ ಉತ್ತರ ಅಮೆರಿಕ ಖಂಡದಲ್ಲಿ ಹೆಚ್ಚಾಗಿ ಬೆಳೆಯಲಾಗುವ ಈ ಹೂವಿನ ವೈಜ್ಞಾನಿಕ ಹೆಸರು ಹೆಲಿಯಾಂತಸ್. ಇದರ ಒಂದು ಪ್ರಭೇದ ಹೆಲಿಯಾಂತಸ್ ಅನ್ನಸ್ ಎಂಬ ಸೂರ್ಯಕಾಂತಿಯನ್ನು ಅಡುಗೆ ಎಣ್ಣೆ ತಯಾರಿಸಲು ಬಳಸಲಾಗುತ್ತದೆ.
ಸೂರ್ಯಕಾಂತಿ ಬಗ್ಗೆ ಹೇಳುವುದಾದರೆ ವಾಸ್ತವದಲ್ಲಿ ಸೂರ್ಯಕಾಂತಿ ಮೊಗ್ಗುಗಳು ಮುಂಜಾನೆಯೇ ಪೂರ್ವದ ಕಡೆಗೆ ಮುಖ ಮಾಡಿರುತ್ತದೆ. ಸುರ್ಯೋದಯ ಆಗುವುದನ್ನೇ ಎದುರು ನೋಡುತ್ತಿರುತ್ತದೆ. ಮಧ್ಯಾಹ್ನದ ವೇಳೆ ಮೊಗ್ಗುಗಳು ಮೇಲ್ಮುಖವಾಗಿ ಕಾಣುತ್ತವೆ. ಮಧ್ಯಾಹ್ನ ನಂತರ ಈ ಮೊಗ್ಗುಗಳು ಪಶ್ಚಿಮದ ಕಡೆಗೆ ಮುಖ ಮಾಡಿರುತ್ತದೆ.
ಇಲ್ಲಿ ಗಮನಿಸುವುದಾದರೆ ಪ್ರಾಣಿಗಳಂತೆ, ಸಸ್ಯಗಳ ಎಲ್ಲಾ ಕಾರ್ಯಗಳು ಹಾರ್ಮೋನುಗಳಿಂದ ನಿಯಂತ್ರಿಸಲ್ಪಡುತ್ತವೆ. ಸಸ್ಯಗಳ ಬೆಳವಣಿಗೆಗೆ ಆಕ್ಸಿನ್ ಹಾರ್ಮೋನ್ ಅಗತ್ಯವಿದೆ. ಸೂರ್ಯಕಾಂತಿ ಮೊಗ್ಗಿನ ಕೆಳಗೆ ಇರುವ ಎಲೆಯೊಳಗೆ ಆಕ್ಸಿನ್ ಹಾರ್ಮೋನ್ ಉತ್ಪತ್ತಿಯಾಗುತ್ತದೆ. ಈ ಹಾರ್ಮೋನ್ ನಿಧಾನವಾಗಿ ಹೂವಿನ ಮೊಗ್ಗುಗಳಿಗೆ ಚಲಿಸುತ್ತದೆ. ಎದುರು ಭಾಗದಲ್ಲಿ ಸೂರ್ಯನು ಬೆಳಗಿದಾಗ, ಹಾರ್ಮೋನ್ ಹೆಚ್ಚು ಸಂಗ್ರಹವಾಗುತ್ತದೆ. ಆ ಭಾಗದಲ್ಲಿ ಜೀವಕೋಶದ ಬೆಳವಣಿಗೆಯ ದರವು ಹೆಚ್ಚಾಗಿರುತ್ತದೆ. ಪರಿಣಾಮವಾಗಿ, ಸೂರ್ಯಕಾಂತಿ ಹೂವುಗಳು ನೈಸರ್ಗಿಕವಾಗಿ ಹೆಚ್ಚಿನ ಒತ್ತಡಕ್ಕೆ ವಿರುದ್ಧ (opposite ) ದಿಕ್ಕನ್ನು ಎದುರಿಸುತ್ತವೆ.
ಒಟ್ಟಿನಲ್ಲಿ ಸೂರ್ಯಕಾಂತಿ ಹೆಸರಿಗೆ ತಕ್ಕಂತೆ ಸೂರ್ಯ ಮತ್ತು ಸೂರ್ಯಕಾಂತಿ ಒಂದಕ್ಕೊಂದು ಸಿರ್ಕಾಡಿಯನ್ ರಿದಮ್ ಎನ್ನುವುದು ಮಾನವರು ಹೊಂದಿರುವ ಆಂತರಿಕ ಗಡಿಯಾರಕ್ಕೆ ಸಂಬಂಧಿಸಿರುವ ನಡವಳಿಕೆಯ ಬದಲಾವಣೆಗಳನ್ನು ಸೂಚಿಸುತ್ತದೆ.