ಧರ್ಮಸ್ಥಳ ಸೌಜನ್ಯಾ ಹೋರಾಟ: ವಿಶ್ವ ಹಿಂದೂ ಪರಿಷತ್ – ಭಜರಂಗದಳ ಕಾರ್ಯಕರ್ತರಿಗೆ ಅವಮಾನ? ಅಣ್ಣಪ್ಪ ಸನ್ನಿಧಿಗೆ ಹೋಗಲು ತಡೆದದ್ದು ಯಾಕೆ, ಯಾರು ?
Dharmasthala:ಇವತ್ತು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಇವತ್ತು ಧರ್ಮಸ್ಥಳದಲ್ಲಿ ಪಾದಯಾತ್ರೆ ಕೈಗೊಂಡ ವಿಷಯ ಎಲ್ಲರಿಗೂ ತಿಳಿದಿದೆ. ಧರ್ಮಸ್ಥಳದ (Dharmasthala) ಸ್ನಾನ ಘಟ್ಟ ನೇತ್ರಾವತಿಯಿಂದ ಶುರುವಾದ ಪಾದಯಾತ್ರೆಯ ನೇತೃತ್ವವನ್ನು ಬಜರಂಗದಳದ ದಕ್ಷಿಣ ಪ್ರಾಂತದ ನಾಯಕ ಮುರಳಿಕೃಷ್ಣ ಹಸಂತಡ್ಕ ವಹಿಸಿದ್ದರು. ಪಾದಯಾತ್ರೆಯ ಮುಂಚೂಣಿಯಲ್ಲಿ ಕುಮಾರಿ ಸೌಜನ್ಯಾಳ ತಾಯಿ ಮತ್ತು ಮಕ್ಕಳು ಮತ್ತು ಕುಟುಂಬ ಸಾಗಿತ್ತು. ಬ್ಯಾನರ್ ಹಿಡಿದು ಸಾಗಿದ್ದ ಶಾಂತಿ ಮೆರವಣಿಗೆಯ ಮುಂದೆ ಕುಸುಮಾವತಿಯವರು ಇದ್ದರು. ಆದರೆ ಇವತ್ತು ವಿಶ್ವ ಹಿಂದೂ ಪರಿಷತ್ ಮತ್ತು ಭಜರಂಗದಳ ಕಾರ್ಯಕರ್ತರಿಗೆ ದೊಡ್ಡ ಮುಖಭಂಗ ಉಂಟು ಮಾಡಲಾಗಿದೆ ಎಂಬ ಮಾಹಿತಿ ತಡವಾಗಿ ವರದಿಯಾಗುತ್ತಿದೆ.
ಇವತ್ತು ಸುಮಾರು 500 ಜನ ವಿಹಿಪ ಮತ್ತು ಭಜರಂಗದಳ ಕಾರ್ಯಕರ್ತರು ಜಿಲ್ಲೆಯ ನಾನಾ ಊರುಗಳಿಂದ ಬಂದಿದ್ದು ನೇತ್ರಾವತಿಯಿಂದ ಹೊರಟು ಅಣ್ಣಪ್ಪನ ಬಳಿ ಪ್ರಾರ್ಥನೆ ನಡೆಸುವುದೆಂದು ನಿರ್ಧರಿಸಿದ್ದರು. ಅದರಂತೆ ಬರಿಗಾಲಿನಿಂದ ಪಾದಯಾತ್ರೆ ಹೊರಟ ವಿಶ್ವಹಿಂದು ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರು ‘ ಓಂ ನಮಃ ಶಿವಾಯ ‘ ಪ್ರಾರ್ಥನೆ ಮಾಡುತ್ತಾ ಭಗವದ್ವಜ ಕೈಲಿ ಹಿಡಿದು ಹೊರಟವರು ಧರ್ಮಸ್ಥಳ ಬಳಿ ತಲುಪಿದಾಗ ಅವರನ್ನು ಅಲ್ಲಿ ತಡೆಯಲಾಗಿದೆ.
ಮೊದಲೇ ಯೋಜನೆ ಹಾಕಿಕೊಂಡಿದ್ದ ನೂರಾರು ಕಾರ್ಯಕರ್ತರಿಗೆ ಅವಮಾನ ಮಾಡಲಾಗಿದೆ. ಧರ್ಮಸ್ಥಳದ ದ್ವಾರದ ಬಳಿ ಹಿಂದೂ ಕಾರ್ಯಕರ್ತರುಗಳನ್ನು ತಡೆದ ಬಗ್ಗೆ ಆಕ್ರೋಶ ಬೂಡಿದರು ಇಂದು ಕಾರ್ಯಕರ್ತರುಗಳು ತಾಳ್ಮೆಯಿಂದ ಅಲ್ಲೇ ನಿಂತರು. ಕೊನೆಗೆ ಬೇರೆ ದಾರಿ ಇಲ್ಲದೆ ವಿಶ್ವ ಹಿಂದೂ ಪರಿಷತ್ ಮುಖಂಡ ಮುರಳಿ ಕೃಷ್ಣ ಹಂಸತಡ್ಕ ಮತ್ತು ಸೌಜನ್ಯ ತಾಯಿ ಮತ್ತು ಕುಟುಂಬಕ್ಕೆ ಮಾತ್ರ ಅಣ್ಣಪ್ಪನ ಮೆಟ್ಟಿಲ ಬಳಿ ಸಾಗಲು ಅವಕಾಶ ಮಾಡಿಕೊಟ್ಟರು.
ತುಂಬಾ ದೂರದ ಊರುಗಳಿಂದ ಬಂದು ಬರಿಗಾಲಲ್ಲಿ ನಡೆದು ಅಣ್ಣಪ್ಪನ ಬಳಿ ಸಾಗಲು ಬಂದರೂ ಅವಕಾಶ ಮಾಡಿಕೊಡದ ಪೊಲೀಸರು ಮತ್ತು ಅದರ ಹಿಂದೆ ಇರಬಹುದಾದ ಶಕ್ತಿಗಳ ಬಗ್ಗೆ ಇದೀಗ ಆಕ್ರೋಶ ವ್ಯಕ್ತವಾಗುತ್ತಿದೆ. ಹಿಂದೂ ಧಾರ್ಮಿಕ ಕೇಂದ್ರಕ್ಕೆ ಕಟ್ಟರ್ ಹಿಂದುಗಳನ್ನೇ ಬಿಡದ ವಿಚಾರ ಚರ್ಚೆಯಾಗುತ್ತಿದೆ. ಪೊಲೀಸರು ಈ ಮೊದಲೇ ಪಾದಯಾತ್ರೆಗೆ ಅನುಮತಿಸಿದ್ದು ಕೊನೆಯ ಹಂತದಲ್ಲಿ ದೇವರನ್ನು ಭಜಿಸುತ್ತಾ ಸಾಗಿದ ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ಕಾರ್ಯಕರ್ತರನ್ನು ತಡೆದದ್ದು ಯಾಕೆ ?
ಯಾರನ್ನು ಕೂಡಾ ಒಳಕ್ಕೆ ಬಿಡದೆ ಹೋಗಿದ್ದರೆ ಅದು ಬೇರೆ ವಿಷಯ. ಒಳಗಡೆ ನೂರಾರು ಸಂಖ್ಯೆಯಲ್ಲಿ ಭಕ್ತಾದಿಗಳು ಮತ್ತು ಧರ್ಮಸ್ಥಳ ಪರ ಗುಂಪು ಸೇರಿ ಕೊಂಡು ಅಣ್ಣಪ್ಪ ಸ್ವಾಮಿ ಮೆಟ್ಟಿಲುಗಳ ಇಕ್ಕೆಲಗಳಲ್ಲಿ ತುಂಬಿ ತುಳುಕುತ್ತಿತ್ತು. ಅವರ ಜೊತೆ ಇತರ ಊರಿನಿಂದ ಬಂದ ಭಕ್ತಾದಿಗಳಿಗೂ ಅಲ್ಲಿ ಪ್ರವೇಶ ಇತ್ತು. ಆದರೆ ಪಾದಯಾತ್ರೆ ಮಾಡುವ ಹಿಂದೂ ಯುವಕರನ್ನು ಶ್ರದ್ದಾ ಕೇಂದ್ರದಿಂದ ದೂರ ಇಡಲು ವ್ಯವಸ್ಥೆ ಪ್ರಯತ್ನಿಸಿತ್ತು. ಅದುವೇ ಈಗ ವಿವಾದಕ್ಕೆ ಕಾರಣವಾಗುತ್ತಿರುವುದು.
ಇದನ್ನೂ ಓದಿ : ವಾಶ್’ರೂಂನಿಂದ ಬರುತ್ತಿತ್ತು ವಿಚಿತ್ರ ಶಬ್ದ !ಏನೆಂದು ಹೋಗಿ ನೋಡಿದರೆ ಬೆಚ್ಚಿಬಿದ್ದ ವ್ಯಕ್ತಿ !!!ಅಷ್ಟಕ್ಕೂ ಅಲ್ಲೇನಿತ್ತು ?