BPL ಕಾರ್ಡ್ ದಾರರೇ ಸುಳ್ಳು ಮಾಹಿತಿ ನೀಡಿದ್ದರೆ, ನಿಮಗೊಂದು ಬಿಗ್ ಶಾಕಿಂಗ್ ನ್ಯೂಸ್!!!

National news ration Card update shock awaits BPL card holders given false information

Ration Card :ರೇಷನ್ ಕಾರ್ಡ್ (Ration Card)ಅಥವಾ ಪಡಿತರ ಚೀಟಿಯನ್ನು ಹೊಂದಿರುವ ಬಳಕೆದಾದರಿಗೆ ಮುಖ್ಯ ಮಾಹಿತಿ ಇಲ್ಲಿದೆ ನೋಡಿ. ಬಡವರು ಹಾಗೂ ಆರ್ಥಿಕವಾಗಿ ದುರ್ಬಲರಾಗಿರುವವರಿಗೆ ಸರಕಾರದಿಂದ ಪಡಿತರ ಚೀಟಿ (Ration Card)ವ್ಯವಸ್ಥೆ ಮಾಡಲಾಗಿದೆ.

ಬಿಪಿಎಲ್ ಕಾರ್ಡ್ ದಾರರೇ ಗಮನಿಸಿ,ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದರೆ ತೊಂದರೆ ಕಟ್ಟಿಟ್ಟ ಬುತ್ತಿ. ವಿಧಾನಸಭೆ ಚುನಾವಣೆ ಮುಗಿದು ಕೈ ಪಾಳಯ ಭರ್ಜರಿ ಗೆಲುವು ಸಾಧಿಸಿ ಅಧಿಕಾರದ ಚುಕ್ಕಾಣಿ ಹಿಡಿದ ಕಾಂಗ್ರೆಸ್ ತನ್ನ ಗ್ಯಾರಂಟಿ ಯೋಜನೆಗಳ ಜಾರಿಗೆ ಹರಸಾಹಸ ಪಡುತ್ತಿದೆ. ಈ ನಡುವೆ ರಾಜ್ಯದ ಜನತೆಗೆ ಗ್ಯಾರಂಟಿ ಯೋಜನೆಗಳ ಪ್ರಯೋಜನ ಪಡೆಯಲು ಬಿಪಿಎಲ್ ಕಾರ್ಡ್ ಅತ್ಯವಶ್ಯಕ.

ವಿಶೇಷವಾಗಿ ಅನ್ನಬಾಗ್ಯ ಯೋಜನೆಗೆ(Annabhagya Scheme) ಈಗಾಗಲೇ ಮೂರು ಲಕ್ಷದಷ್ಟು ಜನರು ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದ್ದು, ಯೋಜನೆಯ ಪ್ರಯೋಜನ ಪಡೆಯುವ ಸಲುವಾಗಿ ಸುಳ್ಳು ಮಾಹಿತಿ ನೀಡಿ ಬಿಪಿಎಲ್ ಕಾರ್ಡ್ ಗೆ ಅರ್ಜಿ ಸಲ್ಲಿಸಿದರೆ ಸಮಸ್ಯೆ ಆಗೋದು ಖಚಿತ ಎನ್ನಲಾಗುತ್ತಿದೆ. ರಾಜ್ಯ ಸರ್ಕಾರ ಸದ್ಯ, 1.28 ಕೋಟಿ ಬಿಪಿಎಲ್ ಕಾರ್ಡ್ ನೀಡಿದ್ದು, ಈಗ ಬಿಪಿಎಲ್ ಕಾರ್ಡ್ ಪಡೆದಿರುವ ಅರ್ಜಿದಾರರು ಸುಳ್ಳು ಮಾಹಿತಿ ನೀಡಿದ್ದಾರೆಯೇ ಎಂಬುದನ್ನು ಪರಿಶೀಲನೆ ನಡೆಸಲು ಆಹಾರ ಇಲಾಖೆ ಮುಂದಾಗಿದೆ.

ಐಟಿ ಫೈಲ್( Income Tax Returns)ಮಾಡಿದವರು, ಸ್ವಂತ ಕಾರು, ಹೆಚ್ಚುವರಿ ಜಾಗ, ಜಮೀನು ಹೊಂದಿದ್ದು, ಸುಳ್ಳು ಮಾಹಿತಿ ನೀಡಿದವರ ಬಿಪಿಎಲ್ ಪಡಿತರ ಕಾರ್ಡ್ ರದ್ದು ಮಾಡಿ ಆಹಾರ ಇಲಾಖೆ ಕಳೆದ ಕೆಲ ವರ್ಷಗಳಿಂದ ಕ್ರಮ ಕೈಗೊಂಡಿದೆ. ಸರ್ಕಾರಿ ಸಿಬ್ಬಂದಿ, ಆದಾಯ ತೆರಿಗೆ, ಹೆಚ್ಚುವರಿ ಜಾಗ/ಭೂಮಿ ಹೊಂದಿದ್ದು, ಸರಕಾರದ ಬೊಕ್ಕಸಕ್ಕೆ ನಷ್ಟ ಮಾಡುವ ಜೊತೆಗೆ ವಂಚನೆ ಮಾಡಿ ಯೋಜನೆಯ ಸದುಪಯೋಗ ಪಡೆಯಲು ಮುಂದಾಗಿರುವವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲು ಆಹಾರ ಇಲಾಖೆ ಮುಂದಾಗಿದೆ.

ಅತೀ ಶೀಘ್ರದಲ್ಲಿ ಸುಳ್ಳು ಮಾಹಿತಿ ನೀಡಿದವರ ಪತ್ತೆ ಹೆಚ್ಚಲು ಆಹಾರ ಇಲಾಖೆ ತಯಾರಿ ನಡೆಸಿರುವ ಆಹಾರ ಇಲಾಖೆ,ಐಟಿ ಇಲಾಖೆ ಮೂಲಕ ಆದಾಯ ತೆರಿಗೆ ಫೈಲ್ ಮಾಡಿದವರ ಮಾಹಿತಿ ಕಲೆ ಹಾಕಲಿದೆ. ಇದರ ಜೊತೆಗೆ, ಸರ್ಕಾರಿ ನೌಕರರ ಹೆಚ್ ಆರ್ ಎಂಎಸ್ ಸಾಫ್ಟ್ ವೇರ್ ಮೂಲಕ ಸುಳ್ಳು ಮಾಹಿತಿ ನೀಡಿದವರ ಬಗ್ಗೆ ಮಾಹಿತಿ ಸಿಗಲಿದೆ. ಕಂದಾಯ, ಸಬ್ ರಿಜಿಸ್ಟ್ರಾರ್ ಇಲಾಖೆ ಮೂಲಕ ಜಮೀನು, ಜಾಗ ಖರೀದಿ ಮಾಹಿತಿ ಪರಿಶೀಲನೆ ನಡೆಸಲು ಆಹಾರ ಇಲಾಖೆ ಮುಂದಾಗಿದ್ದು, ಹೀಗಾಗಿ, ಸುಳ್ಳು ಮಾಹಿತಿ ನೀಡಿದವರ ಬಿಪಿಎಲ್ ಕಾರ್ಡ್ ರದ್ದು ಆಗುವುದು ಖಚಿತ ಎನ್ನಲಾಗಿದೆ

ಇದನ್ನೂ ಓದಿ: Anand Mahindra: ಭಾರತ ಬಡ ದೇಶ, ಚಂದ್ರಯಾನ-3 ಬೇಕಾ ಎಂದ ಬ್ರಿಟಿಷ್ ನಿರೂಪಕ ! ಆನಂದ್ ಮಹೀಂದ್ರಾ ನೀಡಿದ್ರು ಖಡಕ್ ಉತ್ತರ!!

Leave A Reply

Your email address will not be published.