Puttur: ಇಲಾಖೆಯ ಕಣ್ತಪ್ಪಿಸಿ ನಡೆಯುತ್ತಿದೆ ವನ್ಯಜೀವಿಗಳ ಬೇಟೆ : ಕಡವೆ ಬೇಟೆಯಾಡಿದ ಮೂವರು ಲಾಕ್ ,ಓರ್ವ ಎಸ್ಕೇಪ್

Puttur news Hunting of wild animals Three who hunted Kadave are locked one escapes

Puttur : ಇಲಾಖೆಯ ಕಣ್ತಪ್ಪಿಸಿ ವನ್ಯಜೀವಿಗಳ ಬೇಟೆ ನಡೆಯುತ್ತಿದೆ.ಉಪ್ಪಿನಂಗಡಿ(Puttur) ವಲಯ ಅರಣ್ಯ ವ್ಯಾಪ್ತಿಯಲ್ಲಿ ಕಡವೆ ಬೇಟೆಯಾಡಿದ ಮೂವರು ಇಲಾಖೆಯ ಕಾರ್ಯಾಚರಣೆಗೆ ಲಾಕ್ ಆಗಿದ್ದಾರೆ.

ಉಪ್ಪಿನಂಗಡಿ ವಲಯ ಅರಣ್ಯ ವ್ಯಾಪ್ತಿಯ ಪಟ್ರಮೆ ಮೀಸಲು ಅರಣ್ಯದಲ್ಲಿ ಮಾಂಸಕ್ಕಾಗಿ ಅಕ್ರಮವಾಗಿ ಕಡವೆ ಬೇಟೆಯಾಡಿದ ಪ್ರಕರಣ ಬೇಧಿಸಿದ ಇಲಾಖೆಯ ಅಧಿಕಾರಿಗಳು ,ಸಿಬಂದಿಗಳೊಂದಿಗೆ ಮೂವರನ್ನು ಬಂಧಿಸಿದ್ದಾರೆ.

ಬೆಳ್ತಂಗಡಿ ತಾಲೂಕಿನ ಪಟ್ರಮೆ ಗ್ರಾಮದ ಕಪಿಲ ನದಿ ತಟದಲ್ಲಿ ಉಪ ವಲಯ ಅರಣ್ಯಾಧಿಕಾರಿ ಲೋಕೇಶ್ ಮತ್ತು ಅಶೋಕ ಅವರು ಅರಣ್ಯ ಪಾಲಕ ವಿನಯಚಂದ್ರ, ಜೀಪು ಚಾಲಕ ಕಿಶೋರ್‌ ಅವರೊಂದಿಗೆ ಗಸ್ತು ನಿರತರಾಗಿದ್ದ ವೇಳೆ ಪ್ರಕರಣ ಬೆಳಕಿಗೆ ಬಂದಿದೆ.

ಗಸ್ತು ನಿರತರಾಗಿದ್ದ ವೇಳೆ ಬೇಟೆಯಾಡಿದ ಶಬ್ದ ಕೇಳಿಬಂದಿದೆ.
ಕಾಡಿನಲ್ಲಿ ಸುತ್ತುವರಿದು ಕೋವಿ, ಬೇಟೆಯಾಡಿದ ನಾಲ್ಕು ವರ್ಷದ ಹೆಣ್ಣು ಕಡವೆ ಸಹಿತ
ಮೂವರು ಆರೋಪಿಗಳನ್ನು ವಶಕ್ಕೆ ಪಡೆದು
ಕೊಂಡಿದ್ದುಬಂಧಿಸಿದ್ದು, ಓರ್ವ ಆರೋಪಿ ಪರಾರಿಯಾಗಿದ್ದಾನೆ.

ಬಂಧಿತರನ್ನು ಪಟ್ರಮೆ ಮೂಲದ ಸುದೇಶ, ಪುನಿತ್‌, ಕೋಟ್ಯಪ್ಪ ಗೌಡ ಎಂದು ಗುರುತಿಸಲಾಗಿದ್ದು,ಲೋಕೇಶ್‌ ಎಂಬಾತ ಪರಾರಿಯಾಗಿದ್ದಾನೆ.

ಆರೋಪಿಗಳನ್ನು ಬಂಧಿಸಿ ವಲಯಾಧಿಕಾರಿ ಜಯಪ್ರಕಾಶ ಕೆ.ಕೆ. ಅವರ ಮುಂದೆ ಹಾಜರುಪಡಿಸಲಾಯಿತು. ಪುತ್ತೂರು ಸಹಾಯಕ ಅರಣ್ಯಾಧಿಕಾರಿ ಸುಬ್ಬಯ್ಯ ನಾಯ್ಕ ಅವರ ನಿರ್ದೇಶನದಂತೆ ಉಪ್ಪಿನಂಗಡಿ ವಲಯಾಧಿಕಾರಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಕುಂತೂರಿನಲ್ಲೂ ಪ್ರಕರಣ ಬೆಳಕಿಗೆ

ಕಡಬ ಠಾಣಾ ವ್ಯಾಪ್ತಿಯ ಕುಂತೂರು ಬಳಿಯ ಬಲ್ಯ ರಕ್ಷಿತಾರಣ್ಯದಲ್ಲೂ ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಲ್ಯಾಡಿ ಮೂಲದ ಬಿನು, ದಿನೇಶ್ ಹಾಗೂ ನವೀನ್ ಎಂಬವರನ್ನು ವಶಕ್ಕೆ ಪಡೆದು ಬೇಡೆಯಾಡಿದ ಪ್ರಾಣಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಈ ಮೂವರು ಬೇಟೆಗಾರರು,ಮುಳ್ಳು ಹಂದಿ, ಎರಡು ಬರಿಂಕ, ಒಂದು ಬೆರು ಎನ್ನುವ ಪ್ರಾಣಿಗಳನ್ನು ಬೇಟೆ ಮಾಡಿದ್ದರು.

ಇದನ್ನೂ ಓದಿ: Aadhaar: UIDAI ನಿಂದ ಬಿಗ್‌ ಮಾಹಿತಿ! ಮೋಸ ಹೋಗದಿರಿ ಸಾರ್ವಜನಿಕರೇ, ಆಧಾರ್‌ ಮಾಹಿತಿಯನ್ನು ಇಲ್ಲಿ ಶೇರ್‌ ಮಾಡಬೇಡಿ!

Leave A Reply

Your email address will not be published.