Puttur Murder: ಪುತ್ತೂರು ಡೇ ಲೈಟ್ ಮರ್ಡರ್ ಅಪ್ಡೇಟ್: ಹತ್ಯೆ ಬಗ್ಗೆ ಎಸ್ಪಿ ಹೇಳಿದ್ದೇನು ?!
Puttur Murder: ಪುತ್ತೂರು ಮಹಿಳಾ ಪೊಲೀಸ್ ಠಾಣೆಯ ಹಿಂಭಾಗದಲ್ಲಿ ಇಂದು ಹಾಡುಹಗಲೇ ಯುವತಿಯ ಮೇಲೆ ವ್ಯಕ್ತಿಯೋರ್ವ ಚೂರಿಯಿಂದ ಕುತ್ತಿಗೆಗೆ ಬರ್ಬರವಾಗಿ ಇರಿದು ಕೊಲೆ (Puttur Murder )ಮಾಡಿದ ಘಟನೆಯೊಂದು ನಡೆದಿತ್ತು. ದುರದೃಷ್ಟವಶಾತ್ ಹುಡುಗಿಯನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯದಲ್ಲಿಯೇ ಆಕೆ ಅಸು ನೀಗಿದ್ದಳು. ಈ ಭೀಕರ ಕೊಲೆಯ ಕುರಿತು ಎಸ್ಪಿ ಅವರು ಮಾಹಿತಿಯನ್ನು ನೀಡಿದ್ದಾರೆ.
ಕೊಲೆಯಾದ ಬಂಟ್ವಾಳದ ಅಳಿಕೆ ಗ್ರಾಮದ 18 ವರ್ಷದ ಯುವತಿ ಗೌರಿ ಪುತ್ತೂರಿನ ವಸ್ತ್ರ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಆರೋಪಿ ಪದ್ಮರಾಜ್ ವ್ರಿತ್ತಿಯಲ್ಲಿ ಜೆಸಿಬಿ ಚಾಲಕನಾಗಿ ಕಾರ್ಯ ನಿರ್ವಹಿಸುತ್ತಿದ್ದ. ಇವರಿಬ್ಬರ ನಡುವೆ ಮೇಲ್ನೋಟಕ್ಕೆ ಪ್ರೇಮವಿದ್ದಂತೆ ಕಂಡುಬರುತ್ತಿದೆ. ಹಿಂದೆ ಆತ್ಮೀಯರಾಗಿದ್ದರು ಎನ್ನಲಾಗಿದೆ. ಆದರೆ ಇತ್ತೀಚೆಗೆ ಅವರಿಬ್ಬರ ಮಧ್ಯೆ ಭಿನ್ನಾಭಿಪ್ರಾಯ ಮೂಡಿತ್ತು ಎನ್ನುವ ವಿಷಯ ತಿಳಿದುಬಂದಿದೆ. ಹೀಗಾಗಿ, ಇವರಿಬ್ಬರು ಇಂದು ಮಧ್ಯಾಹ್ನ ಪುತ್ತೂರು ಪೋಲಿಸ್ ಠಾಣೆಯ ಬಳಿ ಭೇಟಿಯಾಗಿದ್ದು, ಇವರಿಬ್ಬರ ನಡುವೆ ಜಗಳ ನಡೆದಿರುವ ಸಾಧ್ಯತೆ ದಟ್ಟವಾಗಿದೆ. ಈ ಮೊದಲು ಕೂಡ ಯುವತಿಯು ಯುವಕನ ಮೇಲೆ ವಿಟ್ಲ ಪೋಲಿಸ್ ಠಾಣೆಯಲ್ಲಿ ದೂರು ನೀಡಿರುವ ಬಗ್ಗೆ ಮಾಹಿತಿ ಕೇಳಿ ಬಂದಿದೆ. ಈ ಕುರಿತು ಪೂರ್ಣ ತನಿಖೆಯ ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಘಟನೆ ವಿವರ:
ವಿಟ್ಲ ಸಮೀಪದ ಅಳಿಕೆ ನಿವಾಸಿ 18 ವರ್ಷದ ಗೌರಿ ಚೂರಿ ಇರಿತಕ್ಕೆ ಒಳಗಾದ ದುರ್ದೈವಿ. ಇಂದು ಗುರುವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಬೈಕ್ ನಲ್ಲಿ ಬಂದ ಯುವಕನೋರ್ವ ಗೌರಿಯ ಮೇಲೆ ಅಟ್ಯಾಕ್ ಮಾಡಿದ್ದ. ಆರೋಪಿ ಮಣಿನಾಲ್ಕೂರು ಗ್ರಾಮದ ನೈಬೇಳು ನಿವಾಸಿ, ಪದ್ಮರಾಜ್ ಮಾರಕಾಯುಧದಿಂದ ಹಿಂದಿನಿಂದ ಬಂದು ಕುತ್ತಿಗೆಗೆ 3 ರಿಂದ 4 ಬಾರಿ ಇರಿದಿದ್ದು ಅಲ್ಲಿಂದ ಪರಾರಿ ಆಗಿದ್ದ. ಬಾಕಿನಿಂದ ಬಂದಿದ್ದ ಆರೋಪಿ ಪದ್ಮರಾಜ್ ಅನಂತರ ಬೈಕನ್ನು ಘಟನಾ ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದ. ಪುತ್ತೂರು (Puttur Temple ) ಮಹಾಲಿಂಗೇಶ್ವರ ದೇವಸ್ಥಾನದ ಪುಷ್ಕರಣಿ ಹಾಗೂ ಮಹಿಳಾ ಪೊಲೀಸ್ ಠಾಣೆಯ ನಡುವಿನ ಜಾಗದಲ್ಲಿ ಈ ದಾಳಿ ನಡೆದಿದೆ. ದಾಳಿಗೆ ಮೊದಲು ಅವರಿಬ್ಬರೂ ಭೇಟಿಯಾದಾಗ ವಾಗ್ಯುದ್ಧ ನಡೆದ ಬಗ್ಗೆ ಸಂಶಯವಿದೆ. ನಂತರ ದುಷ್ಕರ್ಮಿ ಹುಡುಗನು ಯುವತಿಯನ್ನು ಗೋಡೆಗೆ ಒತ್ತಿ ಹಿಡಿದು ಕತ್ತು ಸೀಳಿರುವುದಾಗಿ ತಿಳಿದುಬಂದಿದೆ. ಸದ್ಯ, ಯುವತಿ ಗೌರಿ ಮೃತಪಟ್ಟಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಪೊಲೀಸರು ಈ ಘಟನೆ ನಡೆದ ಒಂದೂವರೆ ಗಂಟೆಯೊಳಗಡೆ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಗಂಭೀರ ಗಾಯಗೊಂಡಿರುವ ಗೌರಿಯವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಅಂಬ್ಯುಲೆನ್ಸ್ ಮೂಲಕ ರವಾನಿಸುವ ದಾರಿ ಮಧ್ಯೆ ಗೌರಿ ಮೃತಪಟ್ಟಿದ್ದಾಳೆ.
ಇದನ್ನೂ ಓದಿ : ಧರ್ಮಸ್ಥಳ ಸೌಜನ್ಯಳ ಪಾಂಗಾಳ ಮನೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಭೇಟಿ ಆಹ್ವಾನ