Ration Card: BPL ಕಾರ್ಡ್‌ನಿಂದ ಪಡಿತರ ಮಾತ್ರವಲ್ಲ, ಬಡವರಿಗೆ ಹಲವು ಅನೇಕ ಪ್ರಯೋಜನ ಲಭ್ಯ! ಶೈಕ್ಷಣಿಕ, ವೈದ್ಯಕೀಯ ನೆರವು ಲಭ್ಯ!!!
National news not only free ration you will also get these many benefits from ration card
Ration Card: ರಾಜ್ಯದ ಜನರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರ (Government) ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಅವುಗಳಲ್ಲಿ ಪಡಿತರ ವಿತರಣೆ ಕೂಡ ಒಂದಾಗಿದೆ. ಭಾರತದಲ್ಲಿ (India) ಪಡಿತರ ಚೀಟಿ (Ration Card) ಬಹಳ ಮುಖ್ಯವಾದ ದಾಖಲೆಗಳಲ್ಲಿ ಒಂದು. ಪಡಿತರ ಚೀಟಿಯ ಮೂಲಕ ಸರ್ಕಾರ (Government ) ಅಗತ್ಯವಿರುವವರಿಗೆ ಹಿಟ್ಟು, ಬೇಳೆಕಾಳು, ಅಕ್ಕಿ ಮುಂತಾದ ಪಡಿತರ ಸಾಮಗ್ರಿಗಳನ್ನು ಉಚಿತವಾಗಿ ನೀಡುತ್ತದೆ. ಅಂದಹಾಗೆ BPL ಕಾರ್ಡ್‌ನಿಂದ ಪಡಿತರ ಮಾತ್ರವಲ್ಲ, ಬಡವರಿಗೆ ಹಲವು ಅನೇಕ ಪ್ರಯೋಜನ ಲಭ್ಯವಿದೆ. ಹೌದು, ಶೈಕ್ಷಣಿಕ, ವೈದ್ಯಕೀಯ ನೆರವು ಲಭ್ಯ!!!
ಶಿಕ್ಷಣ ನೆರವು : ಬಿಪಿಎಲ್ ಕಾರ್ಡ್ (BPL Card) ಇರುವವರು ಸಾಮಾನ್ಯವಾಗಿ ವಿದ್ಯಾರ್ಥಿವೇತನ (Scholorship), ಉಚಿತ ಪಠ್ಯಪುಸ್ತಕಗಳು ಮತ್ತು ಇತರ ಶೈಕ್ಷಣಿಕ ಸಂಪನ್ಮೂಲಗಳಿಗೆ ಅರ್ಹರಾಗಿರುತ್ತಾರೆ. ಇದು ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮಕ್ಕಳ ಶಿಕ್ಷಣಕ್ಕೆ ಸಹಕಾರಿಯಾಗಿದೆ. ಆರ್ಥಿಕವಾಗಿ ನೆರವು ನೀಡುತ್ತದೆ.
ವೈದ್ಯಕೀಯ ಸೌಲಭ್ಯಗಳು : BPL ಕಾರ್ಡ್ ಹೊಂದಿರುವವರು ಸರ್ಕಾರಿ ಆಸ್ಪತ್ರೆ (government hospital) ಮತ್ತು ಆರೋಗ್ಯ ಕೇಂದ್ರಗಳಲ್ಲಿ ಉಚಿತ ಅಥವಾ ಹೆಚ್ಚು ಸಹಾಯಧನದ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಬಹುದಾಗಿದೆ. ಇದು ಔಷಧಿಗಳು, ರೋಗನಿರ್ಣಯ ಪರೀಕ್ಷೆಗಳು ಮತ್ತು ಆಸ್ಪತ್ರೆಗೆ ಅಡ್ಮಿಟ್ ಮುಂತಾದ ಸೌಲಭ್ಯಗಳನ್ನು ಒದಗಿಸುತ್ತದೆ.
ಸಾಮಾಜಿಕ ಭದ್ರತಾ ಯೋಜನೆಗಳು : ವೃದ್ಧರು, ವಿಧವೆಯರು ಮತ್ತು ಅಂಗವಿಕಲ ವ್ಯಕ್ತಿಗಳಿಗೆ ಪಿಂಚಣಿ ಯೋಜನೆಗಳಂತಹ ವಿವಿಧ ಸಾಮಾಜಿಕ ಭದ್ರತಾ ಯೋಜನೆಗಳನ್ನು ಬಿಪಿಎಲ್ ಕಾರ್ಡ್ ಹೊಂದಿರುವವರು ಪಡೆಯುತ್ತಾರೆ.
ವಸತಿ ಮತ್ತು ವಿದ್ಯುತ್ ಪ್ರಯೋಜನಗಳು : BPL ಕಾರ್ಡುದಾರರು ವಸತಿ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು. ಮನೆ ನಿರ್ಮಾಣ ಅಥವಾ ಸುಧಾರಣೆ ಮಾಡುವುದಿದ್ದಲ್ಲಿ ಆಗ ಹಣಕಾಸಿನ ನೆರವು ಪಡೆಯಬಹುದು. ಅಲ್ಲದೆ, ಹೆಚ್ಚುವರಿಯಾಗಿ ಅವರು ಸಬ್ಸಿಡಿ (subsidy) ವಿದ್ಯುತ್ ಸಂಪರ್ಕಕ್ಕೆ ಅರ್ಹರಾಗಿರುತ್ತಾರೆ.
ಇದನ್ನೂ ಓದಿ: Murder: ಸ್ನೇಹಿತನ ಹೆಂಡತಿಯ ಜೊತೆ ರಹಸ್ಯ ಸಂಬಂಧ! ಕೊನೆಗೆ ಕೊಲೆಯಲ್ಲಿ ಅಂತ್ಯ! ಕಾರಣ ನೀವಂದುಕೊಂಡದ್ದಲ್ಲ, ಬೇರೆನೇ ಇದೆ!!!