Free sewing machine scheme: ಕೇಂದ್ರದ ಮಹತ್ತರ ಯೋಜನೆ; ಮಹಿಳೆಯರಿಗೆ ಉಚಿತ ಹೊಲಿಗೆ ಯಂತ್ರ! ಯಾರೆಲ್ಲ ಅರ್ಜಿ ಸಲ್ಲಿಸಬಹುದು? ತಪ್ಪದೇ ಓದಿ!!!

Karnataka news Central Government news free sewing mission scheme for women apply now

Karnataka Free Sewing Machine Scheme:ಕೇಂದ್ರ ಸರ್ಕಾರವು(Central Government)ಮಹಿಳೆಯರ ಸಬಲೀಕರಣಕ್ಕಾಗಿ(Women Empowerment)ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಇವುಗಳಲ್ಲಿ ಉಚಿತ ಹೊಲಿಗೆ ಯಂತ್ರ ಯೋಜನೆ ಕೂಡಾ ಒಂದಾಗಿದೆ. ಸರ್ಕಾರ ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು(Karnataka Free Sewing Machine Scheme) ಉಚಿತವಾಗಿ ನೀಡುತ್ತದೆ.

ಕೇಂದ್ರ ಸರ್ಕಾರ ಮಹಿಳೆಯರನ್ನು(Women )ಆರ್ಥಿಕವಾಗಿ ಸದೃಢರನ್ನಾಗಿಸುವ ದೆಸೆಯಲ್ಲಿ ಸ್ವಾವಲಂಬಿಗಳಾಗಲು ಅನೇಕ ಯೋಜನೆಗಳನ್ನು ಜಾರಿಗೆ ತಂದಿದೆ. ಪ್ರಧಾನಮಂತ್ರಿ ಉಚಿತ ಹೊಲಿಗೆ ಯಂತ್ರ ಯೋಜನೆಯು ದೇಶದ ಮಹಿಳೆಯರಿಗೆ ಆರ್ಥಿಕವಾಗಿ ಸ್ವತಂತ್ರರಾಗಲು ಅನುವು ಮಾಡಿಕೊಡುತ್ತದೆ. ಇದು ಭಾರತದ ಮಹಿಳೆಯರನ್ನು ಸ್ವಾವಲಂಬಿಗಳನ್ನಾಗಿ ಮಾಡಲು ಮೋದಿ ನೇತೃತ್ವದ ಸರಕಾರದ ಉತ್ತಮ ಹೆಜ್ಜೆಯಾಗಿದೆ.ಪ್ರಧಾನ ಮಂತ್ರಿ ಉಚಿತ ಹೊಲಿಗೆ ಯಂತ್ರ ಯೋಜನೆ 2022 ರ ಅಡಿಯಲ್ಲಿ 20ರಿಂದ 40 ವರ್ಷ ವಯಸ್ಸಿನ ಮಹಿಳೆಯರು ಹೊಲಿಗೆ ಯಂತ್ರವನ್ನು ಪಡೆಯಲು ಅರ್ಹರು. ಇದಕ್ಕೆ ಮಹಿಳೆಯರು ಒಂದು ರೂಪಾಯಿ ಖರ್ಚು ಕೂಡ ಮಾಡಬೇಕಾದ ಅವಶ್ಯಕತೆಯಿರದು.

ಉಚಿತ ಹೊಲಿಗೆ ಯಂತ್ರ ಪಡೆಯಲು ಬೇಕಾದ ಅರ್ಹತೆಗಳು ಹೀಗಿವೆ:
* ಈ ಯೋಜನೆಯಡಿ ಮಹಿಳೆಯರು ಮಾತ್ರ ಅರ್ಜಿ ಸಲ್ಲಿಸಬಹುದು.
* ಅಭ್ಯರ್ಥಿಯು ಟೈಲರಿಂಗ್‌ನಲ್ಲಿ ಪ್ರತಿಭೆಯನ್ನು ಹೊಂದಿರಬೇಕು.
* ಅರ್ಜಿದಾರರು ಕರ್ನಾಟಕದ ಖಾಯಂ ಪ್ರಜೆಯಾಗಿರಬೇಕು.
* ಅಭ್ಯರ್ಥಿಯು ಬಡತನ ರೇಖೆಗಿಂತ ಕೆಳಗಿರಬೇಕು.
* ಕುಟುಂಬದ ಆದಾಯವು 12,000 ರೂಪಾಯಿಕ್ಕಿಂತ ಕಡಿಮೆ ಇರತಕ್ಕದ್ದು.
* ಮಹಿಳೆಯರು ದುಡಿಯುವ ವರ್ಗದಲ್ಲಿ ಕೆಲಸ ಮಾಡಲು ಸಮರ್ಥರಾಗಿದ್ದರೆ ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು.
* ಈ ಯೋಜನೆಯಡಿಯಲ್ಲಿ ಮಹಿಳೆಯರ ಕನಿಷ್ಠ ವಯೋಮಿತಿ 20 ವರ್ಷ ಮತ್ತು ಗರಿಷ್ಠ ವಯೋಮಿತಿ 49ವರ್ಷ ಆಗಿರಬೇಕು.

# ಉಚಿತ ಹೊಲಿಗೆ ಯಂತ್ರ ಪಡೆಯಲು ಅಗತ್ಯವಿರುವ ದಾಖಲೆಗಳು ಹೀಗಿವೆ:
ಗ್ರಾಮೀಣ ಪ್ರದೇಶದ ಹಾಗೂ ನಗರ ಪ್ರದೇಶದ ಮಹಿಳೆಯರೆಲ್ಲರೂ ಈ ಯೋಜನೆಯಡಿ ಉಚಿತ ಹೊಲಿಗೆ ಯಂತ್ರವನ್ನು ಪಡೆಯಬಹುದಾಗಿದೆ. ಈ ಯೋಜನೆಯ ಲಾಭ ಪಡೆಯಲು ಆಧಾರ್ ಕಾರ್ಡ್, ಜನ್ಮ ದಿನಾಂಕ ದಾಖಲೆ, ಆದಾಯ ಪ್ರಮಾಣಪತ್ರ, ಮೊಬೈಲ್ ಸಂಖ್ಯೆ, ಪಾಸ್ಪೋರ್ಟ್ ಗಾತ್ರದ ಫೋಟೋ, ಅಂಗವಿಕಲರಿಗೆ ವಿಶಿಷ್ಟ ಅಂಗವಿಕಲ ಐಡಿ ಮತ್ತು ವಿಧವೆಯರಿಗೆ ವಿಧವೆ ಪ್ರಮಾಣಪತ್ರ ಅವಶ್ಯಕ.

ಮಹಿಳೆಯರು ಈ ಯೋಜನೆಯಡಿ ಅರ್ಜಿ ಸಲ್ಲಿಸಿದ್ರೆ ಸಾಕು.ಪಿಎಂ ಉಚಿತ ಹೊಲಿಗೆ ಯಂತ್ರ ಯೋಜನೆ 2022 ಅಡಿಯಲ್ಲಿ ಮಹಿಳೆಯರು ಹೊಲಿಗೆ ಮಶಿನ್ ಪಡೆಯಬಹುದು. ಪ್ರತಿ ರಾಜ್ಯದ 50,000 ಮಹಿಳೆಯರ ಅನುಕೂಲಕ್ಕಾಗಿ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಇದಕ್ಕಾಗಿ ಮಹಿಳೆಯರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬಹುದು.

# ಈ ಯೋಜನೆಯ ಲಾಭ ಪಡೆಯಲು, ಮೊದಲು ಯೋಜನೆಯ ಅಧಿಕೃತ ವೆಬ್‌ಸೈಟ್‌ National Portal of India ಗೆ ಭೇಟಿ ನೀಡಬೇಕು.
#  https://www.india.gov.in/  ಪುಟವನ್ನ ತೆರೆಯಿರಿ. ಈಗ ಉಚಿತ ಹೊಲಿಗೆ ಯಂತ್ರ ಯೋಜನೆ ಕರ್ನಾಟಕದ ಲಿಂಕ್ ಆನ್ ಲೈನ್ ಅರ್ಜಿ ನಮೂನೆ ಕಾಣಬಹುದು.

# ಆ ಲಿಂಕ್ ಕ್ಲಿಕ್ ಮಾಡಿಕೊಂಡು ಅದರ ನಂತರ ಅರ್ಜಿ ನಮೂನೆ ಪರದೆಯ ಮೇಲೆ ತೆರೆಯುತ್ತದೆ. ಇಲ್ಲವೇ ವೆಬ್‌ಸೈಟ್‌ನ ಮುಖಪುಟದಲ್ಲಿ ಹೊಲಿಗೆಯ ಉಚಿತ ಪೂರೈಕೆಗಾಗಿ ಅರ್ಜಿ ಸಲ್ಲಿಸಲು ನೀವು ಲಿಂಕ್ ಕಾಣಬಹುದು.

# ಲಿಂಕ್ ಅನ್ನು ಮತ್ತು ಅರ್ಜಿ ನಮೂನೆಯ PDFನ ಪ್ರಿಂಟ್ ಔಟ್ ತೆಗೆದುಕೊಂಡು ನಂತರ ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನ ಫಾರ್ಮ್‌ನೊಂದಿಗೆ ಲಗತ್ತಿಸಬೇಕು.

# ಆನಂತರ ,ಫಾರ್ಮ್ ಅನ್ನು ಸಂಬಂಧಪಟ್ಟ ಕಚೇರಿಗೆ ಸಲ್ಲಿಸಿದರೆ ಅಧಿಕಾರಿಗಳು ನಿಮ್ಮ ಅರ್ಜಿಯನ್ನು ಪರಿಶೀಲಿಸುತ್ತಾರೆ.
# ಅರ್ಜಿಯಲ್ಲಿ ನೀಡಿರುವ ಮಾಹಿತಿ ಸರಿಯಾಗಿದ್ದರೆ ಹೊಲಿಗೆ ಯಂತ್ರವನ್ನು ಉಚಿತವಾಗಿ ನೀಡಲಾಗುತ್ತದೆ.

ಇದನ್ನೂ ಓದಿ: ಉಡುಪಿ ಉದ್ಯೋಗಾಕಾಂಕ್ಷಿಗಳೇ ಇತ್ತ ಗಮನಿಸಿ! ಆ.25, 28 ರಂದು ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ! ಇಲ್ಲಿದೆ ಸಂಪೂರ್ಣ ಮಾಹಿತಿ

 

 

Leave A Reply

Your email address will not be published.