IAS Interesting Question: ಚಂದ್ರನ ಮೇಲೆ ಹನಿ ಮೂನ್ (Honey Moon) ಮಾಡಲು ಸಾಧ್ಯವೇ ? ಮೊದಲ ಬಾರಿ ಇಳಿದಾಗ ಅಲ್ಲಿ ಉಷ್ಣತೆ ಎಷ್ಟಿತ್ತು ಗೊತ್ತೇ ?
IAS interview intresting questions and answers is it possible to make a Honey Moon on the Moon
IAS Interesting Question: ಚಂದ್ರನು ಸರಾಸರಿ 238,855 ಮೈಲುಗಳು (ಅಂದರೆ 384,400 ಕಿ.ಮೀ) ದೂರದಲ್ಲಿದ್ದಾನೆ. ಭೂಮಿ ಒಂದು ಗೃಹ ಆದ್ರೆ, ಚಂದ್ರ (Moon )ಭೂಮಿಯ ಸುತ್ತ ಸುತ್ತುವ ಒಂದು ಉಪಗ್ರಹ. ನಮಗೆಲ್ಲರಿಗೂ ಗೊತ್ತು ಅಮೆರಿಕಾದ ನೀಲ್ ಆರ್ಮ್ ಸ್ಟ್ರಾಂಗ್ ಎಂಬವರು ಮೊಟ್ಟ ಮೊದಲ ಬಾರಿಗೆ ಚಂದ್ರನಲ್ಲಿ ತಲುಪಿ ಚಂದ್ರನ ಮೇಲೆ ಪಾದಾರ್ಪಣೆ ಮಾಡಿದವರು. ಆದರೆ ನಿಮಗೆ ಗೊತ್ತೇ- ಅಂದು ಆರ್ಮ್ ಸ್ಟ್ರಾಂಗ್ ಚಂದ್ರನ ಮೇಲೆ ಕಾಲಿಟ್ಟಾಗ ಅಲ್ಲಿ ಎಷ್ಟು ಉಷ್ಣತೆಯಿತ್ತು ಎಂದು ? ಇವತ್ತು ಈ ಇಂಟರೆಸ್ಟಿಂಗ್ ಪ್ರಶ್ನೆಗೆ(IAS Interesting Question) ಉತ್ತರದ ಜೊತೆಗೆ ಚಂದ್ರನ ಬಗೆಗಿನ ಇನ್ನಿತರ ಆಸಕ್ತಿಕರ ಮಾಹಿತಿಯನ್ನು ನಾವು ಇಲ್ಲಿ ತಿಳಿಸಿ ಕೊಡಲಿದ್ದೇವೆ. ಇದು ಚಂದ್ರಯಾನ 3 ರ ಸ್ಪೆಷಾಲಿಟಿ.
ನಾವು ನೀವೆಲ್ಲ ಅಂದುಕೊಂಡಂತೆ, ಕಥೆಗಳಲ್ಲಿ ಕೇಳಿದಂತೆ, ರಾತ್ರಿಗಳಲ್ಲಿ ಟೆರೇಸ್ ಗೆ ಮಕ್ಕಳನ್ನು ಕರೆದೊಯ್ದು ತೋರಿಸಿದಂತೆ ಚಂದಿರ ಅಲಿಯಾಸ್ ಚಂದಮಾಮ ತಣ್ಣಗಿನ ಮನುಷ್ಯನಲ್ಲ. ಈ ಮಾಮ ನೋಡಲು ಕೂಲ್ ಕೂಲ್ ಆಗಿ ಕಂಡರೂ ಈತ ನಿಜಕ್ಕೂ ಹಾಟ್ ಮಗಾ !! ಹೌದು, ಚಂದ್ರನಲ್ಲಿ ಮೊದಲ ಬಾರಿ ಇಳಿದ ಅಂತರಿಕ್ಷ ವಿಜ್ಞಾನಿ ಅಮೇರಿಕಾದ ಗಗನಯಾತ್ರಿ ನೀಲ್ ಆರ್ಮ್ ಸ್ಟ್ರಾಂಗ್ ಅವರು ಚಂದ್ರನ ಮೇಲೆ ಇಳಿದು ಅಲ್ಲಿನ ವಾತಾವರಣದ ಬಿಸಿಯ ಬಗ್ಗೆ ಉದ್ಘರಿಸಿದ್ದಾರೆ. ಬಹುಶಃ ಹನಿ ಮೂನ್ (Honey moon) ಪದವನ್ನು ಬಳಸುವ ಸಂದರ್ಭದಲ್ಲಿ ಚಂದ್ರನ ವಾತಾವರಣದ ಕಲ್ಪನೆ ಜನರಿಗೆ ಇದ್ದಿರಲಿಲ್ಲ ಅನ್ನಿಸುತ್ತದೆ. ಯಾಕೆಂದರೆ, ವಾತಾವರಣ ಹನಿಮೂನ್ ಗೆ ಆಗದಷ್ಟು ಬಿಸಿಯಾಗಿದೆ. ಬೆಳಿಗ್ಗೆ ಆಗಲ್ಲ, ಒಂದು ವೇಳೆ ರಾತ್ರಿ ಹನಿ ಮೂನ್ ಮಾಡೋಣ ಅಂದ್ರೆ ಕೊರೆಯುವ ಫ್ರೀಜ್ ಆಗುವ ಚಳಿ. ಗಗನ ಯಾತ್ರಿಗಳು ಹಾಕಿಕೊಳ್ಳುವ ಸ್ಪೇಸ್ ಸೂಟ್ ಹಾಕಿಕೊಂಡು ಹನಿಮೂನ್ ಅಲ್ಲ, ಒಂದು ಹಗ್ ಕೂಡಾ ಮಾಡಲು ಆಗಲ್ಲ ಅಂತ ಹನಿಮೂನ್ ಮಾಡದವರಿಗೂ ತಿಳಿದ ವಿಚಾರವೇ !!!
ಹೌದು, ಚಂದ್ರನ ಮೇಲ್ಮೈನಲ್ಲಿ ಅಂದು ವಿಶ್ವದ ಮೊದಲ ಚಂದ್ರಯಾನಿ ನೀಲ್ ಆರ್ಮ್ ಸ್ಟ್ರಾಂಗ್ ಹೇಳಿದಂತೆ ಅಲ್ಲಿ ಕುದಿಯುವ ನೀರಿಗಿಂತ ಸ್ವಲ್ಪವೇ ಸ್ವಲ್ಪ ಕಡಿಮೆ ಇರುವ ಉಷ್ಣತೆಯಿತ್ತು. ಅವತ್ತಿನ ಉಷ್ಣತೆ 93° C ಇತ್ತು. ಆದರೆ ಚಂದ್ರನಲ್ಲಿ ಸಾಮಾನ್ಯವಾಗಿ ಉಷ್ಣತೆಯು ಅದಕ್ಕಿಂತಲೂ ಹೆಚ್ಚು. ಚಂದ್ರನ ಸಮ ಭಾಜಕದ ಬಳಿ ಹಗಲಿನ ತಾಪಮಾನವು ಕುದಿಯುವ 120° C ಡಿಗ್ರಿ ಸೆಂಟಿಗ್ರೇಡ್ ತಲುಪುತ್ತದೆ. ಅಂದರೆ ನಮ್ಮ ಕುದಿಯುವ ನೀರಿಗಿಂತಲೂ ಹೆಚ್ಚು ಬಿಸಿಯಾಗಿರುತ್ತದೆ ಅಲ್ಲಿಯ ವಾತಾವರಣ.
ಆದರೆ ಚಂದ್ರನ ರಾತ್ರಿಯ ತಾಪಮಾನವು ತೀರಾ ಚಳಿಯದಾಗಿದ್ದು -130° C ಸೆಂಟಿಗ್ರೇಡ್ ಗೆ ತಲುಪುತ್ತದೆ. ಸೂರ್ಯನಿಲ್ಲದ ಚಂದ್ರನ ಕತ್ತಲ ಭಾಗದಲ್ಲಿ, ತಾಪಮಾನವು -232 ಡಿಗ್ರಿ ಸೆಲ್ಸಿಯಸ್ ನಷ್ಟಿರಬಹುದು ! ಚಂದ್ರನು ತುಲನಾತ್ಮಕವಾಗಿ ಕನಿಷ್ಠ ಓರೆಯನ್ನು ಹೊಂದಿರುವ ಕಾರಣ ಉತ್ತರ ಮತ್ತು ದಕ್ಷಿಣ ಧ್ರುವಗಳಿಗೆ ಸೂರ್ಯನಿಗೆ ಸಮಾನವಾದ ಉಷ್ಣತೆ ನೀಡಲಾಗುವುದಿಲ್ಲ. ಜೊತೆಗೆ, ಚಂದ್ರನ ಮೇಲ್ಮೈ ಆಳವಾದ ಕುಳಿಗಳಿಂದ ಕೂಡಿದ್ದು, ಇವುಗಳಿಂದಾಗಿ ಕುಳಿಗಳಲ್ಲಿ ಉಷ್ಣಾಂಶ ಇನ್ನಷ್ಟು ಕಡಿಮೆ ಇರುವ ಸಂಭವ ಎಂದು ವಿಜ್ಞಾನಿಗಳು ಊಹಿಸಿದ್ದಾರೆ.
ಶತಕೋಟಿ ವರ್ಷಗಳಿಂದ ಸೂರ್ಯನ ಬೆಳಕನ್ನು ನೋಡದ ಕಾರಣ ಆ ಕುಳಿಗಳಲ್ಲಿ, ತಾಪಮಾನವು -272 ಡಿಗ್ರಿ ಸೆಲ್ಸಿಯಸ್ ಕಡಿಮೆ ಇರಬಹುದು ಎಂದು ಅಂದಾಜಿಸಲಾಗಿದೆ. ಚಂದ್ರನು ಭೂಮಿಯ ಮೇಲೆ ಇರಲು ಹೆಚ್ಚು ಆರಾಮದಾಯಕವಲ್ಲ ಎಂದು ಹೇಳಬೇಕಾಗಿಲ್ಲ. ಅದರ ವಾತಾವರಣದ ಕೊರತೆ ಮತ್ತು ಅದರ ವಿಶಿಷ್ಟವಾದ ತಿರುಗುವಿಕೆಯ ಮಾದರಿಯಿಂದಾಗಿ, ವಿಪರೀತ ತಾಪಮಾನವು ತುಂಬಾ ಸಾಮಾನ್ಯವಾಗಿದೆ. ಅಂದರೆ ಒಂದು ಬಾರಿ ಉಷ್ಣತೆ ಇರುತ್ತದೆ ಮತ್ತೊಂದು ಬಾರಿ ಉಷ್ಣತೆ ತೀರಾ ಕನಿಷ್ಠ ಮಟ್ಟಕ್ಕೆ ತಲುಪುತ್ತದೆ. ಅಲ್ಲದೆ, ಚಂದ್ರನ ಮೇಲೆ ವಾತಾವರಣವಿಲ್ಲ. ಅಂದ್ರೆ ಬಹುತೇಕ ಯಾವುದೇ ಅನಿಲಗಳಿಲ್ಲ. ಆದುದರಿಂದ ಅದು ಶಾಖವನ್ನು ಹಿಡಿದಿಡಲು ಅಥವಾ ಮೇಲ್ಮೈ ಉಷ್ಣತೆಯನ್ನು ನಿರೋಧಿಸಲು ಸಾಧ್ಯವಿಲ್ಲ. ಇರೋದರಲ್ಲಿ, ನಾವೇ ಸೇಫ್ !
ಇದನ್ನೂ ಓದಿ: IAS Interesting Questions: ಭೂಮಿಯಲ್ಲಿ ತೂಗುವ 1 ಕೆಜಿ ವಸ್ತುವಿನ ತೂಕ ಚಂದ್ರನಲ್ಲಿ ಎಷ್ಟು ಕಿಲೋ ಇರುತ್ತದೆ ?
how much is ventolin: buy albuterol inhaler – ventolin on line
can i buy ventolin over the counter in canada